ಉಡುಪಿ: ಕೊರೋನಾದಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸಿದ ಹಿಂದೂ ಜಾಗರಣ ವೇದಿಕೆ ತಂಡ

By Suvarna News  |  First Published Aug 22, 2020, 4:25 PM IST

ಇವತ್ತು ಉಡುಪಿಯಲ್ಲ ಕೋವಿಡ್‌ನಿಂದ ಸಾವನ್ನಪ್ಪಿದ ಇಬ್ಬರ ಮೃತದೇಹದ ಅಂತ್ಯಕ್ರಿಯೆಯನ್ನು ಹಿಂದೂ ಜಾಗರಣ ವೇದಿಕೆಯ ಟೀಮ್  ನೆರವೇರಿಸಿದೆ.


ಉಡುಪಿ, (ಆ.22): ಕೊರೋನಾ ಸಂಕಷ್ಟ ಕಾಲದಲ್ಲಿ ಮೃತರ ಅಂತ್ಯಸಂಸ್ಕಾರ ನಡೆಸುವುದಕ್ಕೆ ಸಂಬಂಧಿಕರೂ ಹಿಂದೆ ಮುಂದೆ ನೋಡುತ್ತಿರುವ ಸನ್ನಿವೇಶ ಸೃಷ್ಟಿಯಾಗಿದೆ.

ಆದ್ರೆ, ಹಿಂದೂ ಜಾಗರಣ ವೇದಿಕೆ  ತಂಡವೊಮದು ಸ್ಮಶಾನದಲ್ಲಿ ಹಗಲಿರುಳು ಮೃತರ ಅಂತ್ಯಸಂಸ್ಕಾರಕ್ಕೆ ನೆರವಾಗುತ್ತಿದೆ.

Tap to resize

Latest Videos

ಗುಡ್‌ ನ್ಯೂಸ್: ದೇಶಿ ಕೋವಿಡ್ ಲಸಿಕೆ ಬಳಕೆಗೆ ಶೀಘ್ರ ಸಮ್ಮುತಿ..?

 ಹೌದು...ಕೊರೋನಾ ಸೋಂಕಿಗೆ ಬಲಿಯಾದವರನ್ನು ಉಡುಪಿಯ ಹಿಂದೂ ಜಾಗರಣ ವೇದಿಕೆಯ ಪ್ರಕಾಶ್ ಕುಕ್ಕೆಹಳ್ಳಿ, ವಿಕೇಶ್  ಪಾಲನ್,   ಪ್ರಶಾಂತ್ ಇಂದ್ರಾಳಿ, ಕಿರಣ್ ಸುವರ್ಣ ಕಡೆಕಾರ್ ಎನ್ನುವರು ವಿಧಿವಿಧಾನಗಳ ಮೂಲಕ ಅಂತ್ಯಕ್ರಿಯೆ ಮಾಡುತ್ತಿದ್ದಾರೆ.

ಉಡುಪಿ ಜಿಲ್ಲಾ ಆಸ್ಪತ್ರೆ ಹಾಗೂ ಕೆಎಂಸಿ  ಮಣಿಪಾಲ  (ಉಡುಪಿ) ಆಸ್ಪತ್ರೆಯಲ್ಲಿ ಕೋವಿಡ್‌ನಿಂದ ಸಾವನ್ನಪ್ಪಿದವರನ್ನ ಈ ತಂಡ  ಇಂದ್ರಾಳಿಯ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಿ ಮಾದರಿಯಾದರು.

click me!