ಮುಸ್ಲಿಂ ಯುವತಿ ಕೈ ಹಿಡಿದ ಹಿಂದೂ ಯುವಕ : ಸೌಹಾರ್ದತೆಯ ವಿವಾಹ

By Suvarna News  |  First Published Dec 19, 2019, 11:55 AM IST

ಇಲ್ಲೊಂದು ಅಂತರ್ ಧರ್ಮೀಯ ವಿವಾಹ ನಡೆದಿದ್ದು, ಸೌಹಾರ್ಧತೆಗೆ ಸಾಕ್ಷಿಯಾಗಿದ್ದಾರೆ. ಹಿಂದೂ ಯುವಕನೋರ್ವ ಮುಸ್ಲಿಂ ಯುವತಿಯನ್ನು ವರಿಸಿದ್ದಾನೆ. 


ಚಿಕ್ಕಬಳ್ಳಾಪುರ [ಡಿ.19]: ಇಲ್ಲೊಂದು ಅಂತರ್ ಧರ್ಮೀಯ ವಿವಾಹ ನಡೆದಿದ್ದು, ಸೌಹಾರ್ದತೆ ಮೆರೆದಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. 

ಹಿಂದೂ ಯುವಕನ ಜೊತೆಯಲ್ಲಿ ಮುಸ್ಲಿಂ ಯುವತಿಯೋರ್ವಳು ಸಪ್ತಪದಿ ತುಳಿದಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿ ಬಿದನೂರಿನಲ್ಲಿ ನಡೆದಿದೆ. 

Tap to resize

Latest Videos

ಗೌರಿ ಬಿದನೂರಿನ ಉಪ್ಪಾರ ಕಾಲೋನಿ ನಿವಾಸಿಯಾದ ಮಂಜುನಾಥ್ ಜೊತೆ ಇದೇ ಬಡಾವಣೆಯಲ್ಲಿ ವಾಸವಾಗಿದ್ದ ಸುಹಾನ ಹಸೆಮಣೆ ಏರಿದ್ದಾರೆ. 

ಅಯ್ಯಪ್ಪ ಭಕ್ತರಿಗೆ ಊಟ ಬಡಿಸಿದ ಮುಸ್ಲಿಂ ಗುರು!...

ಚಿಕ್ಕಬಳ್ಳಾಪುರದ ಪ್ರಮುಖ ಐತಿಹಾಸಿಕ ಪ್ರದೇಶ ಎಂದು ಕರೆಸಿಕೊಳ್ಳುವ ವಿದುರಾಶ್ವತ್ಥದ ದೇವಾಲಯದಲ್ಲಿ ಇಲ್ಲಿನ ಬಿಜೆಪಿ ಮುಖಂಡ ರವಿನಾರಾಯಣ ರೆಡ್ಡಿ ನೇತೃತ್ವದಲ್ಲಿ ವಿವಾಹ ಕಾರ್ಯ ನೆರವೇರಿದೆ. 

ಈ ಹಿಂದೆಯೂ ಕೂಡ ಇದೇ ರೀತಿ ಅನೇಕ ಅಂತರ್ ಧರ್ಮೀಯ ವಿವಾಹಗಳು ನಡೆದಿವೆ, ಇದೀಗ ದೇಶದಲ್ಲಿ ಪೌರತ್ವ ಕಾಯ್ದೆ ವಿಚಾರವಾಗಿ ಪ್ರತಿಭಟನೆ, ಗಲಾಟೆಗಳು ನಡೆಯುತ್ತಿರುವ ಸಂದರ್ಭದಲ್ಲಿಯೇ ಇಂತಹ ವಿವಾಹವೊಂದು ನಡೆದಿದೆ.

click me!