ಲೇಔಟ್ ನಿರ್ಮಾಣಾಕ್ಕಾಗಿ ರಿಯಲ್ ಎಸ್ಟೇಟ್ ದಂಧೆಕೋರರು ಸರ್ಕಾರದ ಜಾಗಗಳನ್ನು ಕಬಳಿಸೋದು ಹೊಸದೇನಲ್ಲ. ಆದ್ರೆ ಗಿರಿಧಾಮಕ್ಕೆ ಹೊಂದಿಕೊಂಡಂತೆ ಲೇಔಟ್ ಗಳು ನಿರ್ಮಾಣವಾಗ್ತಿದ್ದು, ಕರಾವಳಿ ಹಾಗು ಕೇರಳ ಮಾದರಿಯಲ್ಲಿ ಗುಡ್ಡ ಕುಸಿತವಾದರೇನು ಗತಿಯೇನು ಎಂಬ ಭೀತಿ ಚಿತ್ರದುರ್ಗದಲ್ಲಿ ಶುರುವಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಆ.16): ಲೇಔಟ್ ನಿರ್ಮಾಣಾಕ್ಕಾಗಿ ರಿಯಲ್ ಎಸ್ಟೇಟ್ ದಂಧೆಕೋರರು ಸರ್ಕಾರದ ಜಾಗಗಳನ್ನು ಕಬಳಿಸೋದು ಹೊಸದೇನಲ್ಲ. ಆದ್ರೆ ಗಿರಿಧಾಮಕ್ಕೆ ಹೊಂದಿಕೊಂಡಂತೆ ಲೇಔಟ್ ಗಳು ನಿರ್ಮಾಣವಾಗ್ತಿದ್ದು, ಕರಾವಳಿ ಹಾಗು ಕೇರಳ ಮಾದರಿಯಲ್ಲಿ ಗುಡ್ಡ ಕುಸಿತವಾದರೇನು ಗತಿಯೇನು ಎಂಬ ಭೀತಿ ಚಿತ್ರದುರ್ಗದಲ್ಲಿ ಶುರುವಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ
undefined
ನೋಡಿ ಹೀಗೆ ಹಚ್ಚ ಹಸುರಿನಿಂದ ಆಕರ್ಷಿಸುತ್ತಿರುವ ಪರ್ವತಗಳು. ಗುಡ್ಡಗಳ ನಡುವೇ ಹಾದು ಹೋಗಿರುವ ರಸ್ತೆ. ಈ ರಸ್ತೆ ಪಕ್ಕದಲ್ಲೇ ತಲೆಯೆತ್ತುತ್ತಿರುವ ಖಾಸಗಿ ಲೇಔಟ್.ಈ ದೃಶ್ಯಗಳು ಕಂಡುಬಂದಿದ್ದು, ಕೋಟೆನಾಡು ಚಿತ್ರದುರ್ಗದ ಪ್ರವಾಸಿ ತಾಣ ಜೋಗಿಮಟ್ಟಿ ಬಳಿ.ಹೌದು, ಮಿನಿ ಊಟಿ ಖ್ಯಾತಿಯ ಜೋಗಿಮಟ್ಟಿಯಲ್ಲಿ ಮೋಡ ಹಾಗು ಮಂಜಿನ ನರ್ತನದ ಸೊಬಗನ್ನು ನೋಡಲು, ನಿತ್ಯ ಸಾವಿರಾರು ಜನ ಪ್ರವಾಸಿಗರು ಇಲ್ಲಿಗೆ ಬರ್ತಾರೆ. ಅಲ್ದೇ ವಿವಿಧ ಆಕರ್ಷಕ ವನ್ಯ ಮೃಗಗಳಿರುವ ಆಡುಮಲ್ಲೇಶ್ವರ ಕಿರು ಮೃಗಾಲಯ ಸಹ ಇದೇ ಹಾದಿಯಲ್ಲಿದೆ. ಆದ್ರೆ ಇದೇ ಮಾರ್ಗದಲ್ಲಿರುವ ಲೇಔಟ್ ನಿರ್ಮಾಣಕ್ಕಾಗಿ ಗುಡ್ಡದ ಮದ್ಯೆ ಹಾದುಹೋಗಿರುವ ಕಿರಿದಾದ ರಸ್ತೆಯನ್ನು ಲೆಕ್ಕಿಸದೇ ಸುಮಾರು 30 ಅಡಿಗಳಷ್ಟು ಎತ್ತರದ ಗುಡ್ಡವನ್ನು ಜೆಸಿಬಿಯಿಂದ ಕೊರೆದಿದ್ದಾರೆ. ಹೀಗಾಗಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕರಾವಳಿ ಹಾಗು ಕೇರಳದಲ್ಲಿ ಎದುರಾಗಿರುವ ಅವಘಡದಂತೆ ಚಿತ್ರದುರ್ಗದ ಈ ಗುಡ್ಡದಲ್ಲೂ ಮಣ್ಣಿನ ಸವಕಳಿಯಾಗಿ ಗುಡ್ಡ ಕುಸಿಯುವ ಆತಂಕ ಎದುರಾಗಿದೆ. ಇದರಿಂದಾಗಿ ಪ್ರವಾಸಿಗರು ಪ್ರಾಣ ಭಯದಿಂದ ಪ್ರವಾಸಿತಾಣಕ್ಕೆ ಬರುವಂತಾಗಿದೆ.ಯಾವಾಗ ಗುಡ್ದ ಕುಸಿಯುವುದೋ ಎಂಬ ಭೀತಿ ಶುರುವಾಗಿದೆ..ಆದ್ರೆ ಸಂಬಂಧಪಟ್ಟ ಅರಣ್ಯ ಇಲಾಖೆ, ನಗರಸಭೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿರೋದು ವಿಪರ್ಯಾಸ ಅಂತನಾಗರೀಕರು ಕಿಡಿಕಾರಿದ್ದಾರೆ.
ಬಿಜೆಪಿ ಶಾಸಕರಿಗೆ ಒಂದೇ ಕೋಟಿ ಅನುದಾನ!; ಕಾಂಗ್ರೆಸ್ ಸರ್ಕಾರದ ಮಲತಾಯಿ ಧೋರಣೆ ವಿರುದ್ಧ ಬೆಲ್ಲದ್ ಗರಂ
ಇನ್ನು ಚಿತ್ರದುರ್ಗದ ಚೇಳುಗುಡ್ಡ, ಜೋಗಿಮಟ್ಟಿ ಹಾಗು ಕ್ಯಾದಿಗ್ಗೆರೆಬಳಿಗುಡ್ಡ ಕೊರೆದು ಲೇಔಟ್ ನಿರ್ಮಾಣ ಮಾಡಲು ಸಂಬಂಧಪಟ್ಟ ಇಲಾಖೆಗಳು ಅನುಮತಿ ನೀಡಿವೆ. ಹೀಗಾಗಿ ಕರಾವಳಿ ಹಾಗು ಕೇಳದ ವಯ್ನಾಡ್ ಮಾದರಿಯಲ್ಲಿ ಗುಡ್ದ ಕುಸಿದು ದೊಡ್ಡ ಅವಘಡ ಚಿತ್ರದುರ್ಗದಲ್ಲಿ ಎದುರಾಗುವ ಮುನ್ನ ಜಿಲ್ಲಾಡಳಿತ ಎಚ್ಚೆತ್ತು,ಗುಡ್ಡ ಕೊರೆದು ಲೇಔಟ್ ನಿರ್ಮಾಣ ಮಾಡುವುದಕ್ಕೆ ಬ್ರೇಕ್ ಹಾಕುವಂತೆ ಸ್ಥಳಿಯರು ಒತ್ತಾಯಿಸಿದ್ದಾರೆ.
ಒಟ್ಟಾರೆ ಪ್ರವಾಸಿ ತಾಣ ಜೋಗಿಮಟ್ಟಿ ಪ್ರವೇಶ ದ್ವಾರದ ಬಳಿಯೇ ಗುಡ್ಡ ಕುಸಿಯುವ ಆತಂಕ ಎದುರಾಗಿದೆ. ಇನ್ನಾದ್ರು ಜಿಲ್ಲಾಡಳಿತ ಎಚ್ಚೆತ್ತು ದೊಡ್ಡ ಅವಘಡ ಜರುಗುವ ಮುನ್ನ ಬೆಟ್ಟ ಗುಡ್ಡಗಳ ಬಳಿ ಲೇಔಟ್ ನಿರ್ಮಾಣಕ್ಕೆ ಬ್ರೇಕ್ ಹಾಕಬೇಕಿದೆ.