ಹಿಜಾಬ್ ಒಂದು ಕೇವಲ ಬಟ್ಟೆ ಹೋರಾಟ ಅಲ್ಲ; ಇದರಲ್ಲಿ ಇನ್ನೊಂದು ದೇಶವಿಭಜನೆಯ ಹುನ್ನಾರ ಇದೆ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಕಿಡಿಕಾರಿದ್ದಾರೆ.
ಉಡುಪಿ (ಜೂ.9): ರಾಜ್ಯಾದ್ಯಂತ ನಡೆದ ಹಿಜಾಬ್ ವಿವಾದ ಕುರಿತು, ಉಡುಪಿಯ ಧಾರ್ಮಿಕ ಸಭೆಯೊಂದರಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಭಾಷಣ ಮಾಡಿದ್ದಾರೆ. ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ದಲ್ಲಿ ಹಿಜಾಬ್ (Hijab) ಹೋರಾಟಗಾರ್ತಿಯರ ವಿರುದ್ಧ ಕಿಡಿಕಾರಿದ್ದಾರೆ.
ಉಡುಪಿಯ ಕಾಲೇಜಿನಲ್ಲಿ ನಿಯಮಕ್ಕೆ ವಿರುದ್ಧವಾದ ಹಿಜಾಬ್ ಧರಿಸಿ ಬಂದದ್ದು ತಪ್ಪಾಗಲಿಲ್ಲ. ಆದರೆ ನಮ್ಮ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿದ್ದೇ ತಪ್ಪಾಯ್ತಾ? ಅದು ಹೇಗೆ ಸಾಧ್ಯ? ಕೇಸರಿ ಅಂದರೆ ಕೆಲವರಿಗೆ ಬಹಳ ತುರಿಕೆ ಎಂದು ಕಾಂಗ್ರೆಸ್- ಪ್ರಗತಿಪರರಿಗೆ ಕಲ್ಲಡ್ಕ ಪ್ರಭಾಕರ್ ಭಟ್ (Kalladka Prabhakar Bhat ) ಟಾಂಗ್ ನೀಡಿದರು.
UDUPI; ಕಾರ್ಮಿಕನೊಬ್ಬ ಲಕ್ಷಾಂತರ ರೂಪಾಯಿ ದಾನ ಮಾಡುವ ಕಥೆ ಕೇಳಿದ್ದೀರಾ?
ಆಕ್ಷನ್ ಗೆ ರಿಯಾಕ್ಷನ್ ತೋರಿಸದೆ ಈವರೆಗೆ ಹಿಂದೂ ಸಮಾಜ ಸೋತಿದೆ. ಹೊಡೆದರೂ ಬಡಿದರೂ ಹಿಂದೂಗಳು ಸುಮ್ಮನಿರಬೇಕಂತೆ. ಆದರೆ ಇನ್ನುಮುಂದೆ ಹಿಂದೂಗಳು ಸುಮ್ಮನೆ ಕುಳಿತುಕೊಳ್ಳಬೇಕು ಸಾಧ್ಯವಿಲ್ಲ. ಹಿಂದೂ ಸಮಾಜ ರಿಯಾಕ್ಷನ್ಸ್ ತೋರಿಸುವ ಅಗತ್ಯ ಇದೆ. ನಾವು ರಿಯಾಕ್ಷನ್ ತೋರಿಸಿದ್ದರಿಂದಲೇ ಹಿಜಾಬ್ ವಿವಾದ ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಯ್ತು ಎಂದ ಕಲ್ಲಡ್ಕ ಪ್ರಭಾಕರ ಭಟ್, ಹಿಜಾಬ್ ಒಂದು ಕೇವಲ ಬಟ್ಟೆ ಹೋರಾಟ ಅಲ್ಲ; ಇದರಲ್ಲಿ ಇನ್ನೊಂದು ದೇಶವಿಭಜನೆಯ ಹುನ್ನಾರ ಇದೆ ಎಂದು ಕಿಡಿಕಾರಿದರು.
ಸರ್ವಧರ್ಮ ಸಮ್ಮೇಳನ ಶಬ್ದವೇ ಸರಿಯಲ್ಲ: ಜಗತ್ತಿನ ಸರ್ವಶ್ರೇಷ್ಠ ಜೀವನಪದ್ಧತಿ ಇರುವುದು ಹಿಂದೂಧರ್ಮದಲ್ಲಿ ಮಾತ್ರ ಎಂದು ವಾದಿಸಿದ ಕಲ್ಲಡ್ಕ ಪ್ರಭಾಕರ ಭಟ್, ಸರ್ವಧರ್ಮ ಸಮ್ಮೇಳನ ಎಂಬ ಶಬ್ದವೇ ಸರಿಯಲ್ಲ.ಮುಸಲ್ಮಾನರು, ಸರ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಳ್ಳೋದು ನಾಚಿಗೇಡು! ಒಂದು ದೇವರನ್ನು ಪೂಜೆ ಮಾಡಿ ಅಂತ ಹೇಳುವುದು ಒಂದು ಧರ್ಮವಾಗಲು ಸಾಧ್ಯವಿಲ್ಲ.ಒಂದೇ ದೇವರು ಎನ್ನುವ ಕ್ರೈಸ್ತ ಮತ್ತು ಇಸ್ಲಾಂ ಧರ್ಮವಾಗಲು ಸಾಧ್ಯವಿಲ್ಲ ಎಂದರು. ತಮ್ಮ ನಿಯಮಗಳನ್ನು ಪಾಲಿಸದವರನ್ನು ಕತ್ತರಿಸುವ ಮತ ಧರ್ಮವಾಗಲು ಸಾಧ್ಯವೇ ಎಂದು ಪ್ರಶ್ನಿಸಿದರು. ಒಪ್ಪಿಕೋ.. ಮತಾಂತರ ಆಗು ಇಲ್ಲದಿದ್ದರೆ ಓಡಿಹೋಗು ಈ ನಿಯಮ ಇರುವ ಧರ್ಮ ಧರ್ಮವೇ ಅಲ್ಲ ಎಂದರು.
ಮೈಸೂರು; Rohith Chakrathirtha ವಜಾಕ್ಕೆ ಕುರುಬರ ಸಂಘ ಆಗ್ರಹ
ಪಿಯು ಕಾಲೇಜು ಶುರು, ಹಿಜಾಬ್ ನಿಷೇಧ: ಪ್ರಸಕ್ತ 2022-23ನೇ ಸಾಲಿನ ಪದವಿಪೂರ್ವ ಕಾಲೇಜುಗಳು ಗುರುವಾರದಿಂದ (ಜೂ.9) ಆರಂಭವಾಗಲಿದ್ದು, ಕಾಲೇಜುಗಳು ಆಡಳಿತ ಮಂಡಳಿಗಳು ಶೈಕ್ಷಣಿಕ ಚಟುವಟಿಕೆ ನಡೆಸಲು ಸಜ್ಜಾಗಿವೆ.
ಅನುದಾನಿತ, ಅನುದಾನರಹಿತ, ಸರ್ಕಾರಿ ಕಾಲೇಜುಗಳ ಪ್ರಥಮ ಮತ್ತು ದ್ವಿತೀಯ ಪಿಯುಸಿ ಸಾಲಿನ ತರಗತಿಗಳು ಈಗಾಗಲೇ ನಿಗದಿಪಡಿಸಿರುವಂತೆ ನಡೆಯಲಿವೆ. ಹೈಕೋರ್ಟ್ ಆದೇಶದಂತೆ ವಿದ್ಯಾರ್ಥಿಗಳು ಆಯಾ ಕಾಲೇಜು ಆಡಳಿತ ಮಂಡಳಿಗಳು ನಿಗದಿಪಡಿಸಿರುವ ಸಮವಸ್ತ್ರ ಮಾತ್ರ ಧರಿಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಸೂಚಿಸಿದೆ.
ಶಿಕ್ಷಣ ಸಚಿವರ ಮನೆಗೆ ನುಗ್ಗಿದವರು ವಿದ್ಯಾರ್ಥಿಗಳೇ ಅಲ್ಲ: Araga Jnanendra
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಭಾರಿ ದಾಖಲೆ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಉತ್ತೀರ್ಣ ಆಗಿರುವುದರಿಂದ ಪ್ರವೇಶಾತಿಗೆ ಅನಾನುಕೂಲ ಆಗದಂತೆ ವ್ಯವಸ್ಥೆ ಮಾಡಿದೆ. ಸುಮಾರು ಮೂರು ಸಾವಿರಕ್ಕೂ ಅಧಿಕ ಅತಿಥಿ ಉಪನ್ಯಾಸಕರ ಅಗತ್ಯವಿದ್ದು ಈ ಬಗ್ಗೆ ಇಲಾಖೆಯು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಕಾಲೇಜುಗಳಲ್ಲಿ ಮೂಲಸೌಕರ್ಯ ಮತ್ತಿತರ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಇಲಾಖೆಯು ಸಂಬಂಧಪಟ್ಟ ಆಯಾ ಜಿಲ್ಲಾ ಉಪ ನಿರ್ದೇಶಕರಿಗೆ ನಿರ್ದೇಶನ ನೀಡಿದೆ. ಕೊರೋನಾದಿಂದಾಗಿ ಕಳೆದ ಎರಡು ವರ್ಷ ಪಿಯು ಕಾಲೇಜಿನಲ್ಲಿ ಶೈಕ್ಷಣಿಕ ವೇಳಾಪಟ್ಟಿಯನ್ನು ಅನುಸರಿಸಲು ಸಾಧ್ಯವಾಗಿರಲಿಲ್ಲ. ಆದರೆ ಈ ಸಲ ಸಮಯಕ್ಕೆ ಸರಿಯಾಗಿ ಕಾಲೇಜುಗಳು ಆರಂಭವಾಗುತ್ತಿದೆ.