ಮೈಸೂರು- ಬೆಂಗಳೂರು ಎಕ್ಸ್‌ಪ್ರೆಸ್ ಹೈವೇ ನಿರ್ಮಾಣ ಸಂಬಂಧ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕ್ರೆಡಿಟ್ ವಾರ್ ಮುಂದುವರೆದಿದೆ.
ಮೈಸೂರು : ಮೈಸೂರು- ಬೆಂಗಳೂರು ಎಕ್ಸ್‌ಪ್ರೆಸ್ ಹೈವೇ ನಿರ್ಮಾಣ ಸಂಬಂಧ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕ್ರೆಡಿಟ್ ವಾರ್ ಮುಂದುವರೆದಿದೆ.
ಹೆದ್ದಾರಿ ಪರಿವರ್ತನೆ ಸಹಜ ಕ್ರಿಯೆ. ಆದರೆ ಅನುದಾನ ತಂದು ಕೆಲಸ ಮಾಡುವುದು ಮುಖ್ಯ. ಸಿದ್ದರಾಮಯ್ಯ ಅಥವಾ ಮಹದೇವಪ್ಪ . 9.50ನ್ನೂ ನೀಡಿಲ್ಲ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.
undefined
ನೆಹರುರವರಿಂದ ವರೆಗೆ ಯಾವುದಾದರೂ ಕಾಂಗ್ರೆಸ್ ಪ್ರಧಾನಿ ತಾವೇ ಆರಂಭಿಸಿದ ಕಾಮಗಾರಿ ಪೂರ್ಣಗೊಳಿಸಿ, ತಾವೇ ಉದ್ಘಾಟಿಸಿದ ಉದಾಹರಣೆ ಇದೆಯಾ ಎಂದು ಸಂಸದ ಪ್ರತಾಪ ಸಿಂಹ ಪ್ರಶ್ನಿಸಿದರು. ಮಾಡಿದ್ದು ನಾವು ನಾವು ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿದ್ದರು. ಮನಮೋಹನ್‌ಸಿಂಗ್ ಅವರು 10 ವರ್ಷ ಪ್ರಧಾನಿ ಆಗಿದ್ದರು. ಆಗೆಲ್ಲಾ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸಿಕೊಂಡು ಏಕೆ ವಿಸ್ತರಿಸಲು ಸಾಧ್ಯವಾಗಲಿಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಮೊದಲ ಬಾರಿ ಮನಮೋಹನ್ ಸಿಂಗ್ ಪ್ರಧಾನಿ ಆದಾಗ ರಾಜ್ಯದಲ್ಲಿ ಧರ್ಮಸಿಂಗ್ ಅಧಿಕಾರದಲ್ಲಿದ್ದರು. ಆಗಲೂ ನಿಮ್ಮಿಂದ ಕಾಮಗಾರಿ ಸಾಧ್ಯವಾಗಲಿಲ್ಲ. ಸಿದ್ದರಾಮಯ್ಯ 2013 ರಿಂದ 2018 ರವರೆಗೆ ಸಿಎಂ ಆದರೂ ಆಗಲಿಲ್ಲ ಏಕೆ? ಅವರು ಅಧಿಕಾರದಿಂದ ಕೆಳಗಿಳಿಯುವಾಗ ರಾಷ್ಟ್ರೀಯ ಹೆದ್ದಾರಿ ಆಯಿತು, ಡಿಪಿಆರ್ ಆಯಿತು ಎನ್ನುತ್ತಾರಲ್ಲ ಏಕೆ ಎಂದು ಪ್ರಶ್ನೆಗಳ ಸುರಿಮಳೆಗೈದರು.
ಮೈಸೂರು- ಬೆಂಗಳೂರು ಎಕ್ಸಪ್ರೆಸ್ ಹೈವೇಗೆ 9,500 ಕೋಟಿ ಖರ್ಚಾಗಿದೆ. ಇದರಲ್ಲಿ 9.50 ಪೈಸೆಯನ್ನು ಸಿದ್ದರಾಮಯ್ಯ ಅಥವಾ ಡಾ.ಎಚ್.ಸಿ. ಮಹದೇವಪ್ಪ ಕೊಟ್ಟಿದ್ದರೆ ಸಾಬೀತುಪಡಿಸಲಿ. ನಾನು ಈ ಯೋಜನೆಯ ಕ್ರೆಡಿಟ್ ಅನ್ನು ಅವರಿಗೆ ಕೊಡುತ್ತೇನೆ.
ಡಿ.ಕೆ. ಸುರೇಶ್ ಗಲಾಟೆ ಮಾಡಿದಾಗ ಇದು ನಮ್ಮದೇ ಕಾಮಗಾರಿ, ವೈಜ್ಞಾನಿಕವಾಗಿದೆ ಸುಮ್ಮನಿರಿ ಎಂದು ಏಕೆ ಹೇಳಲಿಲ್ಲ. ಕ್ವಾರಿ ಮಾಲೀಕರು ಗಲಾಟೆ ತೆಗೆದಾಗ ನಮ್ಮದು ಎಂದು ಏಕೆ ಹೇಳಲಿಲ್ಲ? ಗುತ್ತಿಗೆದಾರರ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಿಸಿದಾಗ ನೀವು ಎಲ್ಲಿ ಹೋಗಿದ್ದಿರಿ ಎಂದು ತರಾಟೆಗೆ ತೆಗೆದುಕೊಂಡರು.
ನೆಹರು ಅವರಿಂದ ಹಿಡಿದು ಮನಮೋಹನ್ ಸಿಂಗ್‌ವರೆಗೆ ತಾವೇ ಆರಂಭಿಸಿದ ಕಾಮಗಾರಿಯನ್ನು ಅವರೇ ಉದ್ಘಾಟಿಸಿದ ಉದಾಹರಣೆ ಇದ್ದರೆ ಹೇಳಿ. ಫಾಲ್ಕಾನ್ ಟೈಯರ್ ಕಾರ್ಖಾನೆ ನೌಕರರ ಸಮಸ್ಯೆ ಬಗೆಹರಿಸಲು ನಿಮ್ಮಿಂದ ಸಾಧ್ಯವಾಗಲಿಲ್ಲ. ಹಳೆ ಉಂಡುವಾಡಿ ಯೋಜನೆಗೆ ಡಿಪಿಆರ್ ತಯಾರಿಸಿದ್ದರೂ ಚಾಲನೆ ನೀಡಿದ್ದು ಯಾರು? ಡಿಪಿಆರ್ ಮಾಡುವುದು ಸಿಕಾನ್ ಕಂಪನಿ ಕೆಲಸ. ಕಾಮಗಾರಿ ಪೂರ್ಣಗೊಂಡ ಮೇಲೆ ಇದು ನಮ್ಮ ಊರು, ನಮ್ಮ ವ್ಯಾಪ್ತಿಯದ್ದು, ನಮ್ಮ ಕೆಲಸ ಎಂದು ಹೇಳಿಕೊಳ್ಳುತ್ತಿದ್ದಾರೆ. ಇದರಲ್ಲಿ ಡೆಸ್ಟಿನೇಷನ್ ಮುಖ್ಯ. ಯಾವ ಊರಿಂದ ಆರಂಭವಾಗಿ ಎಲ್ಲಿ ಅಂತ್ಯವಾಗಿದೆ ಎನ್ನುವುದು ಮುಖ್ಯ ಎಂದರು.
ಡಾ.ಎಚ್.ಸಿ. ಮಹದೇವಪ್ಪ ಅವರು ದಿನವೂ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡುವುದು ಬೇಡ ಡಿಪಿಆರ್ ತಯಾರಿಕೆಗೆ ಕ್ಯಾಬಿನೆಟ್ ಅನುಮತಿ ಬೇಕಿಲ್ಲ ಎಂದರು.
ಪ್ರತಾಪ್ ಸಿಂಹ ಹೇಳಿದ್ದು
1. ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸುವುದು ಸಿದ್ದರಾಮಯ್ಯ, ಮಹದೇವಪ್ಪ ಕೆಲಸ ಅಲ್ಲ. ಅದೊಂದು ಯಾಂತ್ರೀಕೃತ ಕಾರ್ಯ. ಒಂದು ರಸ್ತೆಯಲ್ಲಿ 10 ಸಾವಿರಕ್ಕಿಂತ ಕಡಿಮೆ ವಾಹನ ಸಂಚರಿಸಿದರೆ ದ್ವಿಪಥವಾಗಿ, 10 ಸಾವಿರಕ್ಕಿಂತ ಹೆಚ್ಚು ವಾಹನ ಸಂಚರಿಸಿದರೆ ನಾಲ್ಕು ಪಥವಾಗಿ, 25 ಸಾವಿರಕ್ಕಿಂತ ಹೆಚ್ಚು ವಾಹನ ಸಂಚರಿಸಿದರೆ ಆರು ಪಥವಾಗಿಯೂ ಬದಲಾಗುತ್ತದೆ. ಇದಕ್ಕೆ ಸಹಿ ಹಾಕುವುದು ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಹೊರತು ಸಿದ್ದರಾಮಯ್ಯ ಅಥವಾ ಡಾ. ಮಹದೇವಪ್ಪ ಅಲ್ಲ ಎಂದರು.
2. ಹೆದ್ದಾರಿ ಪ್ರಾಧಿಕಾರದ ನಿಯಮದಂತೆ ಅಷ್ಟುದಟ್ಟಣೆಯ ವಾಹನ ಸಂಚರಿಸಿದರೆ ತಾನೇ ತಾನಾಗಿ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆ ಆಗುತ್ತದೆ. ಆ ಅವಧಿಯಲ್ಲಿ ಆಸ್ಕರ್ ಫರ್ನಾಂಡಿಸ್ ಇದ್ದರು. ನಂತರ ಕೇಂದ್ರ ಸರ್ಕಾರ ಡಿಪಿಆರ್ ಸಿದ್ಧಪಡಿಸಿತು. ಇದೆಲ್ಲವೋ ರೋಬೋಟ್ ಕೆಲಸ. ಹಾಗಿದ್ದರೆ ಮಾನದಂಡವಾಡಿಗೆ ಡಿಪಿಆರ್ ಮಾಡಿಸಿದಿರಲ್ಲ, ಏಕೆ ಅದನ್ನು ತಾವೇ ವಿಸ್ತರಿಸಲಿಲ್ಲ? ಎಂದು ತಿರುಗೇಟು ನೀಡಿದರು.
3. ಕೇಂದ್ರದಲ್ಲಿ ನರೇಂದ್ರಮೋದಿ ಅವರು ಪ್ರಧಾನಿ ಆದ ಮೇಲೆ ಭಾರತ್ ಮಾಲಾ ಪರಿಯೋಜನೆ ಜಾರಿಗೊಳಿಸಿದರು. ಇದರಡಿ 800 ಕಿ.ಮೀ. ಎಕ್ಸ್‌ಪ್ರೆಸ್‌ವೇ ಬರುತ್ತಿತ್ತು. ನಾನು ಒತ್ತಾಯ ಪೂರ್ವಕವಾಗಿ ಈ ಯೋಜನೆಯನ್ನು ಹೆಚ್ಚುವರಿಯಾಗಿ ಸೇರಿಸಿ ಒಟ್ಟು 950 ಕಿ.ಮೀ ಎಕ್ಸೆಪ್ರೆಸ್ ವೇ ಆಯಿತು. ಆಗಷ್ಟೆಮೋದಿ ಅವರು ರೈಲ್ವೆ ಯೋಜನೆಗಳಿಗೆ ಚಾಲನೆ ನೀಡಲು ಆಗಮಿಸುತ್ತಿದ್ದರು. ಈ ವೇಳೆ ಘೋಷಣೆಯನ್ನಾದರೂ ಮಾಡಿ ಎಂದು ಅನಂತಕುಮಾರ್ ಅವರ ಮೂಲಕ ಕೇಳಿಕೊಂಡೆ. ಒಪ್ಪಿ ಘೋಷಿಸಿದ್ದಾಗಿ ಅವರು ತಿಳಿಸಿದರು.
4. 2017ರ ಫೆ. 18 ರಂದು ಅನುಮೋದನೆ ದೊರಕಿತು. ಮಾ. 25 ರಂದು ಬೆಂಗಳೂರಿನ ಪಂಚಮುಖಿ ಗಣಪತಿ ದೇವಸ್ಥಾನ ಬಳಿ ಭೂಮಿ ಪೂಜೆ ನೆರವೇರಿತು. ನಿತಿನ್ ಗಡ್ಕರಿ ಇದ್ದರು. ಆದರೆ ಸಿದ್ದರಾಮಯ್ಯ ವೇದಿಕೆಯಲ್ಲಿ ಇರಲೇ ಇಲ್ಲ.