ಚಿತ್ರದುರ್ಗದಲ್ಲಿ ಟೆರರ್ ಅಲರ್ಟ್ : ಎಲ್ಲೆಡೆ ಪೊಲೀಸ್ ಹದ್ದಿನ ಕಣ್ಣು

By Web Desk  |  First Published Aug 17, 2019, 2:25 PM IST

ರಾಜ್ಯಾದ್ಯಂತ ಪೊಲೀಸ್ ಇಲಾಖೆ ಹೈ ಅಲರ್ಟ್ ಕೈಗೊಂಡಿದ್ದು, ಇದೀಗ ಕೋಟೆ ನಾಡು ಚಿತ್ರದುರ್ಗದಲ್ಲಯೂ ಪೊಲೀಸ್ ಇಲಾಖೆ ಹದ್ದಿನ ಕಣ್ಣು ಇರಿಸಿದೆ.


ಚಿತ್ರದುರ್ಗ [ಆ.17]:  ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿ ಅನ್ವಯ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿರುವ ಕಾರಣಕ್ಕೆ ಉಗ್ರರು ದಾಳಿ ನಡೆಸಬಹುದು ಎಂಬ ಕೇಂದ್ರ ಗುಪ್ತಚರ ಮಾಹಿತಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಜ್ಯಾದ್ಯಂತ ಪೊಲೀಸರು  ಕಟ್ಟೆಚ್ಚರ ವಹಿಸಿದ್ದಾರೆ.

Latest Videos

undefined

ಈ ನಿಟ್ಟಿನಲ್ಲಿ ಇದೀಗ ಚಿತ್ರದುರ್ಗದಲ್ಲಿಯೂ ಕೂಡ ಬಿಗಿ ಭದ್ರತೆ ಒದಗಿಸಲಾಗುತ್ತಿದೆ. ಕೋಟೆ, ಬಸ್ ನಿಲ್ದಾಣ ಎಲ್ಲೆಡೆ ಚೆಕಿಂಗ್ ನಡೆಸಲಾಗುತ್ತಿದೆ.  ಪೊಲೀಸ್ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. 

ಒಂದು ಆ್ಯಕ್ಸಿಡೆಂಟ್‌ನಿಂದ ಕರ್ನಾಟಕ ಪೊಲೀಸರಿಗೆ ಸಿಕ್ತು 'ಟೆರರ್ ಆಪರೇಷನ್' ಸುಳಿವು!

ಗುಪ್ತಚರ ವರದಿ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಅವರು ರಾಜ್ಯದ ಕರಾವಳಿ, ಅಣೆಕಟ್ಟುಗಳು, ಐಟಿ-ಬಿಟಿ ಕಂಪನಿಗಳು, ಅಣು ಸ್ಥಾವರ, ಧಾರ್ಮಿಕ ಕೇಂದ್ರಗಳು ಹಾಗೂ ಬೆಂಗಳೂರು ಸೇರಿದಂತೆ ಸೂಕ್ಷ್ಮ ಪ್ರದೇಶಗಳ ಕಡೆ ಭದ್ರತೆ ಹೆಚ್ಚಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.

ಉಗ್ರದಾಳಿ ಶಂಕೆ : ಮಂಗಳೂರಿನಲ್ಲಿ 9 ಜನರ ಬಂಧನ, ಕರಾವಳಿಯಲ್ಲಿ ಹೈ ಅಲರ್ಟ್

click me!