ಗ್ರಾಮೀಣ ಭಾಗದಲ್ಲಿ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಗ್ರಾಮಸ್ಥರು ಸಹಕಾರ ನೀಡಬೇಕು ಎಂದು ಶಾಸಕ ಎಸ್.ಕುಮಾರ್ ಬಂಗಾರಪ್ಪ ಹೇಳಿದರು. ತಾಲೂಕಿನ ಜಡೆ ಹೋಬಳಿಯ ತಲಗಂದ ಗ್ರಾಪಂ ವ್ಯಾಪ್ತಿಯ ಶ್ಯಾನುವಳ್ಳಿ ಗ್ರಾಮದಲ್ಲಿ ಊರೊಳಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸೊರಬ (ಆ.03): ಗ್ರಾಮೀಣ ಭಾಗದಲ್ಲಿ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಗ್ರಾಮಸ್ಥರು ಸಹಕಾರ ನೀಡಬೇಕು ಎಂದು ಶಾಸಕ ಎಸ್.ಕುಮಾರ್ ಬಂಗಾರಪ್ಪ ಹೇಳಿದರು. ತಾಲೂಕಿನ ಜಡೆ ಹೋಬಳಿಯ ತಲಗಂದ ಗ್ರಾಪಂ ವ್ಯಾಪ್ತಿಯ ಶ್ಯಾನುವಳ್ಳಿ ಗ್ರಾಮದಲ್ಲಿ ಊರೊಳಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕಳೆದ ಕೆಲ ದಶಕಗಳಿಂದ ಗ್ರಾಮೀಣಿಗರ ಬದುಕು ಬದಲಾಗುತ್ತಿದೆ. ಮನೆಗಳಲ್ಲಿ ಬೈಕ್ ಮತ್ತು ಕಾರುಗಳು ಸಾಮಾನ್ಯವಾಗುತ್ತಿವೆ. ರಸ್ತೆಗಳ ಅಭಿವೃದ್ಧಿ ಕಾರ್ಯದ ಸಂದರ್ಭದಲ್ಲಿ ರಸ್ತೆಯ ಇಕ್ಕೆಲಗಳ ನಿವಾಸಿಗಳು ಸಹಕಾರ ನೀಡಬೇಕು. ಗ್ರಾಮದಲ್ಲಿ 550 ಮೀ. ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ತಲಗುಂದ ಬಂಕಸಾಣ ಮತ್ತು ಜಡೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗುವುದು. ಇದರಿಂದ ಗ್ರಾಮಸ್ಥರಿಗೆ ಸಮಯ ಉಳಿತಾಯ ಆಗಲಿದೆ. ಗ್ರಾಮದಲ್ಲಿ ಭಾರಿ ವಾಹನಗಳ ಓಡಾಟಗಳನ್ನು ಸಾಧ್ಯವಾದಷ್ಟು ಕಡಿವಾಣ ಹಾಕಬೇಕು. ಇಲ್ಲವಾದಲ್ಲಿ ರಸ್ತೆಗಳು ಬೇಗನೆ ಹಾಳಾಗುತ್ತವೆ ಎಂದರು.
ಟಿಎಸ್‌ಟಿ ಹೈಪರ್ ಮಾರ್ಟ್ ರಾಜ್ಯಕ್ಕೆ ಮಾದರಿ: ಸಚಿವ ಆರಗ ಜ್ಞಾನೇಂದ್ರ
ಗ್ರಾಮದ ಕೆರೆಗಳಲ್ಲಿ ಸಾರ್ವಕಾಲಿಕವಾಗಿ ನೀರು ತುಂಬುವಂತೆ ಯೋಜನೆ ರೂಪಿಸಲಾಗಿದೆ. ಇದರಿಂದ ರೈತರು ಮೂರು ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತದೆ. ತಲಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂದಾಜು 4.5 ಕೋಟಿ ವೆಚ್ಚದಲ್ಲಿ ರಸ್ತೆಗಳನ್ನು ಉನ್ನತೀಕರಣಗೊಳಿಸಲಾಗುತ್ತಿದೆ. ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ತತ್‌ಕ್ಷಣದಲ್ಲಿಯೇ ಮೇಲ್ಛಾವಣಿ ನಿರ್ಮಾಣಕ್ಕೆ ಅನುದಾನ ಒದಗಿಸಲಾಗುವುದು. ತಾಪಂ ಅನುದಾನದಲ್ಲಿ ನೂತನ ಶಾಲಾ ಕೊಠಡಿಗಳನ್ನು ನಿರ್ಮಿಸಿ ಕೊಡಲಾಗುವುದು ಎಂದರು.
ಜಡೆ ಗ್ರಾಪಂ ವ್ಯಾಪ್ತಿಯ ಕೆಳಗಿನ ಗೋಮಾಳ ರಸ್ತೆಗೆ ಡಾಂಬರಿಕಣ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ತಲಗುಂದ ಸಂಪರ್ಕ ರಸ್ತೆ ಅಭಿವೃದ್ಧಿಗೆ ಈಗಾಗಲೇ ಅನುದಾನ ಬಿಡುಗಡೆ ಮಾಡಲಾಗಿದೆ. ಶಿರಸಿ ಮತ್ತು ಸಂಪಗೋಡು ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಭಿವೃದ್ಧಿಗೊಳಿಸಲಾಗುವುದು. ಕೆಳಗಿನ ಗೋಮಾಳ (ವಸಂತ ನಗರ) ಮತ್ತು ಬಂಗಾರಗಿರಿಯಲ್ಲಿ ನಿವೇಶನ ಮತ್ತು ಮನೆಗಳನ್ನು ನಿರ್ಮಿಸಲು ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರು ವೈಯಕ್ತಿಕ ಮುತುವರ್ಜಿ ವಹಿಸಿದ್ದರು. ವಸತಿ ಪ್ರದೇಶದ ಕಾನು ಎಂದು ಸರ್ಕಾರಿ ದಾಖಲೆಗಳಲ್ಲಿ ನಮೂದಾಗಿದೆ.
ಕೇಂದ್ರ ಸರ್ಕಾರ ಸುಮಾರು 6 ಲಕ್ಷ ಹೆಕ್ಟೇರ್ ಪ್ರದೇಶವನ್ನು ಕಂದಾಯ ಇಲಾಖೆ ವ್ಯಾಪ್ತಿಗೆ ನೀಡುವ ಕುರಿತು ಚರ್ಚೆಗಳು ನಡೆಯುತ್ತಿವೆ. ಶೀಘ್ರದಲ್ಲಿಯೇ ಗ್ರಾಮಸ್ಥರಿಗೆ ಹಕ್ಕುಪತ್ರ ದೊರೆಯಲಿದೆ. ರೈತರು ಕೃಷಿ ಪಂಪ್‌ಸೆಗಳಿಗೆ ಆರ್‌ಆರ್ ನಂಬರ್ ಕಡ್ಡಾಯವಾಗಿ ಪಡೆದುಕೊಂಡಾಗ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಪಡೆಯಲು ಸಾಧ್ಯ. ಜನತೆ ಈ ಬಗ್ಗೆ ಗೊಂದಲ ಪಡುವ ಅಗತ್ಯವಿಲ್ಲ ಎಂದರು.
ದ್ಯಾವನಹಳ್ಳಿ ಗ್ರಾಪಂ ವ್ಯಾಪ್ತಿಯ ಬೊಮ್ಮನಹಳ್ಳಿ ರಸ್ತೆ, ಕುಳುಗ-ಕೆರೆಕೊಪ್ಪ ರಸ್ತೆ, ದ್ಯಾವನಹಳ್ಳಿ ಗ್ರಾಮದ ಊರೊಳಗಿನ ರಸ್ತೆ, ಕಾತುವಳ್ಳಿ ರಸ್ತೆ, ಸೂರಣಗಿ ದೇವಿಕೆರೆ ಸಂಪರ್ಕ ರಸ್ತೆ, ಸೂರಣಗಿಯಲ್ಲಿ ಸಮುದಾಯ ಭವನ ನಿರ್ಮಾಣ ಮತ್ತು ರಸ್ತೆ ಅಭಿವೃದ್ಧಿ, ಕೆರೆಹಳ್ಳಿ ಬೆನ್ನೂರು ರಸ್ತೆ, ಕುಬಟೂರು ಗ್ರಾಮದಲ್ಲಿ ಊರೊಳಗಿನ ರಸ್ತೆ ಸೇರಿದಂತೆ ಸುಮಾರು 14.5 ಕೋಟಿ ರೂ., ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಸ್ಮಶಾನ ಜಾಗಕ್ಕೆ ಆಗ್ರಹಿಸಿ ತಮ್ಮಡಿಹಳ್ಳಿಯಲ್ಲಿ ಪ್ರತಿಭಟನೆ
ತಲಗುಂದ ಗ್ರಾಪಂ ಉಪಾಧ್ಯಕ್ಷೆ ರೇವತಿ ಹೊನ್ನಪ್ಪ, ಸದಸ್ಯರಾದ ಪ್ರದೀಪ್, ನಾಗರಾಜ ಕಲ್ಕೊಪ್ಪ, ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಮಲ್ಲಿಕ್, ಉಪಾಧ್ಯಕ್ಷ ಟೇಕಪ್ಪ, ಪರಸಪ್ಪ, ಮಲ್ಲಪ್ಪ ಗೌಡ, ನಾಗರಾಜ ಗೌಡ, ಶಿವಕುಮಾರ ಕಡಸೂರು, ಅಮಿತ್‌ಗೌಡ, ಲಕ್ಷ್ಮಣ, ಕೃಷ್ಣಮೂರ್ತಿ ಕೊಡಕಣಿ, ಜಗದೀಶ ಗೌಡ ಶಾನವಳ್ಳಿ, ಮಂಜುನಾಥ ಶೇಟ್, ಲೋಕಪ್ಪ ಗೌಡ, ನಾಗರಾಜಗೌಡ ಕಮರೂರು, ಅಭಿಷೇಕ್ ಗೌಡ, ಪ್ರವೀಣ್‌ಕುಮಾರ್, ಗುತ್ಯಪ್ಪ, ನಾಗರಾಜ ಸಿದ್ದಪ್ಪ, ಜಿಪಂ ಸಹಾಯಕ ಎಂಜಿನಿಯರ್ ಗಣಪತಿ ನಾಯ್ಕ್ ಸೇರಿದಂತೆ ಮತ್ತಿತರರಿದ್ದರು.