ಹೊಸ ವರ್ಷಾಚರಣೆಯ ಸಂದರ್ಭ ಕೊಡಗಿನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಸತತ ಎರಡು ವರ್ಷ ನೆರೆಯಿಂದ ತತ್ತರಿಸಿದ ಕೊಡಗು ತನ್ನ ನೈಸರ್ಗಿಕ ಸೌಂದರ್ಯದಿಂದ ಮತ್ತೆ ಮತ್ತೆ ಪ್ರವಾಸಿಗರನ್ನು ಆಕರ್ಷಿಸುತ್ತಲೇ ಇದೆ.
ಮಡಿಕೇರಿ(ಜ.01): ಕೊಡಗಿನಲ್ಲಿ ಪ್ರವಾಸಿಗರು ಹೊಸ ವರ್ಷವನ್ನು ಆಚರಿಸಿ ಸಂಭ್ರಮದಿಂದ ಸ್ವಾಗತಿಸಿದರು. ಜಿಲ್ಲೆಯ ಹೋಂಸ್ಟೇ, ಹೋಟೆಲ್, ರೆಸಾರ್ಟ್‌ಗಳಲ್ಲಿ ವಾಸ್ತವ್ಯ ಹೂಡಿ ಮೋಜು-ಮಸ್ತಿಯಲ್ಲಿ ತೊಡಗಿ ಸಂಭ್ರಮಿಸಿದರು.
ಪ್ರವಾಸಿ ತಾಣಗಳಲ್ಲಿ ಬೆರಳೆಣಿಕೆಯ ಸಂಖ್ಯೆಯಲ್ಲಿ ಕಾಣುತ್ತಿದ್ದ ಪ್ರವಾಸಿಗರು ವರ್ಷಾಚರಣೆಯ ಹಿನ್ನೆಲೆಯಲ್ಲಿ ಮಂಗಳವಾರ ತುಂಬಿ ತುಳುಕಿದರು. ಇದರಿಂದಾಗಿ ಕೊಡಗಿನ ಬಹುತೇಕ ಹೋಂಸ್ಟೇ ಹಾಗೂ ರೆಸಾರ್ಟ್‌ಗಳು ಹೌಸ್‌ಫುಲ್ ಆಗಿದ್ದವು. ಮಡಿಕೇರಿಯ ಪ್ರಮುಖ ಪ್ರವಾಸಿ ತಾಣ ರಾಜಾಸೀಟ್‌ನಲ್ಲಿ ಸಾವಿರಾರು ಪ್ರವಾಸಿಗರು ಮಂಗಳವಾರ ವರ್ಷದ ಕೊನೆಯ ಸೂಯಾಸ್ತವನ್ನು ಕಣ್ತುಂಬಿಸಿಕೊಂಡರು.
ಉಡುಪಿಯಲ್ಲಿ ಅಪರೂಪದ ಬಿಳಿಗೂಬೆ ರಕ್ಷಣೆ
ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ಅಬ್ಬಿ ಜಲಪಾತದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು. ನೀರಿನ ಪ್ರಮಾಣ ಕಡಿಮೆ ಇದ್ದರೂ ಅದನ್ನು ವೀಕ್ಷಿಸುವ ಪ್ರವಾಸಿಗರಿಗೆ ಕೊರತೆ ಇರಲಿಲ್ಲ. ಪ್ರಕೃತಿಯ ಸೌಂದರ್ಯವನ್ನು ತಮ್ಮ ಮೊಬೈಲ್ ಹಾಗೂ ಕ್ಯಾಮೆರಾದಲ್ಲಿ ಸೆರೆ ಹಿಡಿದು ಸಂಭ್ರಮಿಸಿದರು. ಉಳಿದಂತೆ ಪ್ರವಾಸಿ ತಾಣಗಳಾದ ಕುಶಾಲನಗರದ ದುಬಾರೆ, ಕಾವೇರಿ ನಿಸರ್ಗಧಾಮ, ಟಿಬೆಟ್ ಕ್ಯಾಂಪ್, ಸೋಮವಾರಪೇಟೆಯ ಮಲ್ಲಳ್ಳಿ ಜಲಪಾತ, ಮಾಂದಲಪಟ್ಟಿ, ಇರ್ಪು, ಚಿಕ್ಲಿಹೊಳೆ, ಚೇಲವಾರ ಮುಂತಾದ ತಾಣಗಳು ಪ್ರವಾಸಿಗರಿಂದ ತುಂಬಿ ತುಳುಕಿತ್ತು.
ಮೈಸೂರಲ್ಲಿ ಹೊಸವರ್ಷಕ್ಕೆ ವಿಶೇಷ ಪೂಜೆ, 2 ಲಕ್ಷ ಲಡ್ಡು ವಿತರಣೆ
ಪ್ರವಾಸಿಗರನ್ನು ಆಕರ್ಷಿಸಲೆಂದೇ ಕೆಲವು ಹೋಂಸ್ಟೇ ಹಾಗೂ ರೆಸಾರ್ಟ್‌ಗಳು ದೀಪಾಲಂಕಾರದಿಂದ ಝಘಮಗಿಸುತ್ತಿದ್ದವು. ವಿಶೇಷ ಔತಣ ಕೂಟ, ಮನರಂಜನಾ ಕ್ರೀಡೆಗಳು, ಸಂಗೀತ ರಸಮಂಜರಿ, ನೃತ್ಯ ಸ್ಪರ್ಧೆ, ಫಯರ್ ಕ್ಯಾಂಪ್ ಮತ್ತಿತರ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಜಿಲ್ಲೆಗೆ ಕಳೆದ ವರ್ಷದಲ್ಲಿ 19,07,927 ಪ್ರವಾಸಿಗರು ಭೇಟಿ ನೀಡಿದ್ದರು. ಕ್ರಿಸ್‌ಮಸ್ ರಜೆ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಗೆ ಹೆಚ್ಚು ಪ್ರವಾಸಿಗರು ಆಗಮಿಸುತ್ತಿದ್ದು, ಪ್ರವಾಸೋದ್ಯಮದಲ್ಲಿ ಚೇತರಿಗೆ ಕಾಣುತ್ತಿದೆ ಎಂದು ಕೊಡಗು ಜಿಲ್ಲಾ ಹೋಟೆಲ್, ರೆಸಾರ್ಟ್ ಮಾಲೀಕರು ಸಂತಸ ವ್ಯಕ್ತಪಡಿಸಿದ್ದಾರೆ.
2018ರ ಹೊಸ ವರ್ಷಾಚರಣೆ ವೇಳೆ ಎಂಜಿ ರಸ್ತೆ-ಇಂದಿರಾನಗರದದಲ್ಲಿ ಏನಾಗಿತ್ತು?
ಕ್ರಿಸ್ಮಸ್ ದಿನದಿಂದ ಕೊಡಗು ಜಿಲ್ಲೆಗೆ ಹೆಚ್ಚು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ಕೊಡಗಿನ ಪ್ರವಾಸೋದ್ಯಮದಲ್ಲಿ ಮತ್ತಷ್ಟುಚೇತರಿಕೆಯಾಗಲಿದೆ. ಮುಂದಿನ ಹತ್ತು ದಿನ ಕಳೆದ ನಂತರ ಪ್ರವಾಸಿಗರ ಸಂಖ್ಯೆ ಕಡಿಮೆಯಾಗುವ ಸಾಧ್ಯತೆಗಳಿದ್ದು, ಮಾಚ್‌ರ್‍ನಲ್ಲಿ ಹೆಚ್ಚು ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿದೆ ಎಂದು ಜಿಲ್ಲಾ ಹೋಟೆಲ್, ರೆಸಾರ್ಟ್ ಮಾಲೀಕರ ಸಂಘದ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಹೇಳಿದ್ದಾರೆ.
ಹೊಸ ವರ್ಷವನ್ನು ಕೊಡಗು ಜಿಲ್ಲೆಯಲ್ಲಿ ಆಚರಿಸಬೇಕೆಂದು ಇಲ್ಲಿಗೆ ಆಗಮಿಸಿದ್ದೇವೆ. ವರ್ಷಾಂತ್ಯದ ಕೊನೆಯ ದಿನ ಮಡಿಕೇರಿಯ ರಾಜಾಸೀಟ್‌ನ ವೀಕ್ಷಣಾ ಸ್ಥಳಕ್ಕೆ ಭೇಟಿ ನೀಡಿದ್ದೇವೆ. ಇಲ್ಲಿನ ವಾತಾವರಣ ತಂಪಾಗಿದೆ ಎಂದು ಬೆಂಗಳೂರಿನ ಪ್ರವಾಸಿಗ ಪ್ರಕಾಶ್ ತಿಳಿಸಿದ್ದಾರೆ.high number of tourists in kodagu