ಕ್ಷೇಮ್ ಕಮಿಷನ್‌ಗೆ ಸೌಲಭ್ಯ ಒದಗಿಸದ್ದಕ್ಕೆ ಕೋರ್ಟ್ ಬೇಸರ | ‘ಕ್ಷೇಮ್ ಕಮಿಷನ್’ಗೆ ಅಗತ್ಯ ಸಿಬ್ಬಂದಿ ಹಾಗೂ ಮೂಲಸೌಕರ್ಯ ಒದಗಿಸದ ಸರ್ಕಾರ
ಬೆಂಗಳೂರು(ಜ.12): ಡಿ.ಜೆ. ಹಳ್ಳಿ ಮತ್ತು ಕೆ.ಜಿ ಹಳ್ಳಿ ಗಲಭೆ ವೇಳೆ ಸಂಭವಿಸಿದ ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟದ ಅಂದಾಜು ಮಾಡಿ ತಪ್ಪಿತಸ್ಥರ ಹೊಣೆಗಾರಿಕೆ ನಿರ್ಧರಿಸಲು ನೇಮಕಗೊಂಡಿರುವ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎಸ್.ಕೆಂಪಣ್ಣ ನೇತೃತ್ವದ ‘ಕ್ಷೇಮ್ ಕಮಿಷನ್’ಗೆ ಅಗತ್ಯ ಸಿಬ್ಬಂದಿ ಹಾಗೂ ಮೂಲಸೌಕರ್ಯ ಒದಗಿಸದ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಸೌಲಭ್ಯ ಕಲ್ಪಿಸಲು ತಕ್ಷಣ ಮುಖ್ಯಕಾರ್ಯದರ್ಶಿಗಳು ಗಮನ ಹರಿಸಬೇಕು ಎಂದು ಹೇಳಿದೆ.
ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಲು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ‘ಕ್ಲೇಮ್ ಕಮಿಷನ್’ಗೆ ಮೂಲಸೌಕರ್ಯ ಒದಗಿಸಿಲ್ಲ. ಈ ಕುರಿತು ನ್ಯಾ.ಕೆಂಪಣ್ಣ ಅವರು ಹೈಕೋರ್ಟ್‌ನ ರಿಜಿಸ್ಟ್ರಾರ್ (ನ್ಯಾಯಾಂಗ) ಅವರಿಗೆ ಜ.6ರಂದು ವರದಿ ರವಾನಿಸಿದ್ದಾರೆ.
undefined
ಬೆಂಗ್ಳೂರಲ್ಲಿ ಮತ್ತೆ ಜಾಹಿರಾತು ಪ್ರದರ್ಶನಕ್ಕೆ ಅವಕಾಶ?
ದಫೆದಾರ್, ಗುಮಾಸ್ತ ಇನ್ನಿತರ ಹುದ್ದೆಗಳನ್ನಷ್ಟೇ ನೇಮಕ ಮಾಡಿದ್ದು, ಈವರೆಗೆ ಕಾರ್ಯದರ್ಶಿ ನೇಮಕ ಮಾಡಿಲ್ಲ. ಸರ್ಕಾರ ಅಗತ್ಯ ಸೌಲಭ್ಯ ಕಲ್ಪಿಸದ ಕಾರಣ ರಚನೆಯಾಗಿ ನಾಲ್ಕೈದು ತಿಂಗಳು ಕಳೆದರೂ ಕಮಿಷನ್ ಕಾರ್ಯಾರಂಭ ಮಾಡಿಲ್ಲ. ಇದು ಸರ್ಕಾರದ ಬೇಜವಾಬ್ದಾರಿತನವನ್ನು ಎತ್ತಿ ತೋರಿಸುತ್ತಿದೆ. ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರನ್ನು ನಡೆಸಿಕೊಳ್ಳುವ ರೀತಿ ಇದಲ್ಲ. ಈ ಬಗ್ಗೆ ತಕ್ಷಣವೇ ಸರ್ಕಾರದ ಮುಖ್ಯ ಕಾರ್ಯದರ್ಶಿ ತಕ್ಷಣ ಗಮನಹರಿಸಬೇಕು. ಖುದ್ದು ನ್ಯಾ.ಕೆಂಪಣ್ಣ ಅವರನ್ನು ಭೇಟಿ ಮಾಡಿ ಸಮಸ್ಯೆಗೆ ಪರಿಹಾರ ದೊರಕಿಸಿಕೊಡಬೇಕು. ಜ.18ರಿಂದ ಕ್ಲೇಮ್ ಕಮಿಷನರ್ ಕಾರ್ಯಾರಂಭ ಮಾಡುವಂತಾಗಬೇಕು ಎಂದು ನ್ಯಾಯಪೀಠ ಸರ್ಕಾರಕ್ಕೆ ತಾಕೀತು ಮಾಡಿತು.
ಇದೇ ವೇಳೆ ಸಿಸಿಬಿ ಪರ ವಕೀಲರು ಮುಚ್ಚಿದ ಲಕೋಟೆಯಲ್ಲಿ ತನಿಖಾ ವರದಿ ಸಲ್ಲಿಸಿದರು. ಪ್ರಕರಣ ಸಂಬಂಧ 64 ಆರೋಪಿಗಳ ವಿರುದ್ಧ 2020ರ ಅ.12ರಂದು ಪ್ರಾಥಮಿಕ ಚಾರ್ಜ್‌ಶೀಟ್ ಹಾಗೂ 2021ರ ಜ.6ರಂದು ಹೆಚ್ಚುವರಿ ಚಾಜ್‌ರ್‍ಶೀಟ್ ಸಲ್ಲಿಸಲಾಗಿದೆ. 62ನೇ ಆರೋಪಿ ತಲೆ ಮರೆಸಿಕೊಂಡಿದ್ದು, ಪತ್ತೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಅದನ್ನು ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು ಫೆ.2ಕ್ಕೆ ಮುಂದೂಡಿತು.