ವಿಲ್ಸನ್​ ಗಾರ್ಡನ್‌ ನಾಗ ವಿರುದ್ಧ ಡ್ರಗ್ಸ್‌ ಕೇಸ್‌ ರದ್ದು: ಹೈಕೋರ್ಟ್ ಆದೇಶ

Published : May 06, 2025, 11:14 AM IST
ವಿಲ್ಸನ್​ ಗಾರ್ಡನ್‌ ನಾಗ ವಿರುದ್ಧ ಡ್ರಗ್ಸ್‌ ಕೇಸ್‌ ರದ್ದು: ಹೈಕೋರ್ಟ್ ಆದೇಶ

ಸಾರಾಂಶ

ಮಾದಕ ವಸ್ತು ಸಂಗ್ರಹ ಆರೋಪದ ಮೇಲೆ ರೌಡಿಶೀಟರ್​ ಜೆ.ನಾಗರಾಜ್ ಅಲಿಯಾಸ್​ ವಿಲ್ಸನ್​ ಗಾರ್ಡನ್‌ ನಾಗ ವಿರುದ್ಧ ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ (ಎನ್​ಡಿಪಿಎಸ್​) ಅಡಿಯಲ್ಲಿ ದಾಖಲಾಗಿದ್ದ ಪ್ರಕರಣ ಮತ್ತು ಆರೋಪದ ಪಟ್ಟಿಯನ್ನು ಹೈಕೋರ್ಟ್​ ರದ್ದುಪಡಿಸಿದೆ.   

ಬೆಂಗಳೂರು (ಮೇ.06): ಮಾದಕ ವಸ್ತು ಸಂಗ್ರಹ ಆರೋಪದ ಮೇಲೆ ರೌಡಿಶೀಟರ್​ ಜೆ.ನಾಗರಾಜ್ ಅಲಿಯಾಸ್​ ವಿಲ್ಸನ್​ ಗಾರ್ಡನ್‌ ನಾಗ ವಿರುದ್ಧ ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ (ಎನ್​ಡಿಪಿಎಸ್​) ಅಡಿಯಲ್ಲಿ ದಾಖಲಾಗಿದ್ದ ಪ್ರಕರಣ ಮತ್ತು ಆರೋಪದ ಪಟ್ಟಿಯನ್ನು ಹೈಕೋರ್ಟ್​ ರದ್ದುಪಡಿಸಿದೆ. 

ಪ್ರಕರಣ ಸಂಬಂಧ ತಮ್ಮ ವಿರುದ್ಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ರದ್ದುಪಡಿಸಲು ಕೋರಿ ನಾಗರಾಜ್​ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಈ ಆದೇಶ ನೀಡಿದೆ. ತನಿಖಾಧಿಕಾರಿಗಳು ಪ್ರಕರಣ ಮೊದಲ ಆರೋಪಿಯ ತಪ್ಪೊಪ್ಪಿಗೆ ಆಧರಿಸಿ ಅರ್ಜಿದಾರ ನಾಗರಾಜು ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಆದರೆ, ಅರ್ಜಿದಾರರ ವಿರುದ್ಧ ಯಾವುದೇ ರೀತಿಯ ಸಾಕ್ಷ್ಯಾಧಾರ ಒದಗಿಸಿಲ್ಲ. ಆದ್ದರಿಂದ ಅರ್ಜಿದಾರನನ್ನು ಪ್ರಕರಣದಲ್ಲಿ ಸಿಲುಕಿಸಲು ಸಾಧ್ಯವಿಲ್ಲ ಎಂದು ತಿಳಿಸಿರುವ ನ್ಯಾಯಪೀಠ, ಈ ಆದೇಶ ಮೊದಲ ಆರೋಪಿಗೆ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. 

ಅಪ್ಪಯ್ಯ ಅಲಿಯಾಸ್‌ ರಾಜು ಎಂಬಾತನನ್ನು 2021ರ ಸೆ.23ರಂದು ಬೆಂಗಳೂರಿನ ಕೋರಮಂಗಲದಲ್ಲಿ ಬಂಧಿಸಿದ್ದ ಮಾದಕವಸ್ತುಗಳ ನಿಯಂತ್ರಣ ಸಂಸ್ಥೆಯ (ಎನ್‌ಸಿಬಿ) ಅಧಿಕಾರಿಗಳು, ಆರೋಪಿಯಿಂದ 12.20 ಗ್ರಾಂ ನಷ್ಟು ಎಂಡಿಎಂಎ ಜಪ್ತಿ ಮಾಡಿದ್ದರು. ತನಿಖೆ ವೇಳೆ ಅಪ್ಪಯ್ಯನ ತಪ್ಪೊಪ್ಪಿಗೆ ಹೇಳಿಕೆ ಆಧರಿಸಿ ವಿಲ್ಸನ್‌ ಗಾರ್ಡನ್‌ ನಾಗನ ವಿರುದ್ಧ ವಿರುದ್ಧ ಪ್ರಕರಣ ದಾಖಲಿಸಿ, ಎರಡನೇ ಆರೋಪಿಯನ್ನಾಗಿ ಮಾಡಿದ್ದರು. ಅದನ್ನು ಪ್ರಶ್ನಿಸಿ ನಾಗ ಹೈಕೋರ್ಟ್​ ಮೆಟ್ಟಿಲೇರಿದ್ದರು.

ವಾಹನಗಳಿಗೆ ಎಫ್‌ಸಿ ನೀಡಲು 32 ಕಡೆ ಎಟಿಎಸ್‌: ಕಾರಣವೇನು?

ಸಂಘದ ಮೇಲೆ ಬಲವಂತ ಕ್ರಮ ಬೇಡ: ಐದು ವರ್ಷಕ್ಕಿಂತ ಹೆಚ್ಚಿನ ಸೇವಾವಧಿ ಪೂರೈಸಿರುವ ತನ್ನ ಸಿಬ್ಬಂದಿಗೆ ಗ್ರಾಚ್ಯುಟಿ ವಿಮಾ ಪ್ರೀಮಿಯಂ ಮೊತ್ತವನ್ನು ಪಾವತಿಸದಿರುವ ಸಂಬಂಧ ಬೆಂಗಳೂರು ಹೋಟೆಲ್‌ ಅಸೋಸಿಯೇಷನ್‌ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಹೈಕೋರ್ಟ್‌ ಆದೇಶ ನೀಡಿದೆ. ಈ ಕುರಿತು ಬೆಂಗಳೂರು ಹೋಟೆಲ್‌ ಅಸೋಸಿಯೇಷನ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್‌ ಪ್ರಸಾದ್‌ ಅವರ ಪೀಠ ಈ ಆದೇಶ ಮಾಡಿದೆ.

ಪ್ಯಾರಾ ಮೆಡಿಕಲ್‌ ಬೋರ್ಡಲ್ಲಿ ಮಾರ್ಕ್ಸ್‌ ಕಾರ್ಡ್‌ ಟೆಂಡರ್‌ ಅಕ್ರಮ: ಛಲವಾದಿ ನಾರಾಯಣಸ್ವಾಮಿ

ಐದು ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ಉದ್ಯೋಗಿಗಳಿಗೆ ಪಾವತಿಸಬೇಕಾದ ವಿಮೆಯನ್ನು ವಿಮಾ ನಿಯಮಗಳ ಅಡಿಯಲ್ಲಿ ಗ್ರಾಚ್ಯುಟಿ ವಿಮಾ ಪ್ರೀಮಿಯಂ ಪಾವತಿಸುವಲ್ಲಿ ವಿಫಲರಾಗಿರುವುದಕ್ಕೆ ಅರ್ಜಿದಾರರ ವಿರುದ್ಧ ಮುಂದಿನ ವಿಚಾರಣೆಯ ದಿನಾಂಕದವರೆಗೆ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಜೂ.3ಕ್ಕೆ ಮುಂದೂಡಿತು.

PREV
Read more Articles on
click me!

Recommended Stories

ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ
ಅಡಕೆ ಬೆಳೆಗಾರರ ನೆರವಿಗೆ ಕೇಂದ್ರ ತುರ್ತಾಗಿ ಮಧ್ಯಪ್ರವೇಶಿಸಲಿ: ಸಂಸದ ಬಿ.ವೈ.ರಾಘವೇಂದ್ರ