ಸೂಲಿಬೆಲೆ ಕಲಬುರಗಿ ಪ್ರವೇಶ ನಿರ್ಬಂಧ ತೆರವು

By Kannadaprabha News  |  First Published Mar 1, 2024, 6:00 AM IST

ಕಲಬುರಗಿ ಉಪ ವಿಭಾಗಾಧಿಕಾರಿ ರೂಪೇಂದ್ರ ಕೌರ್‌ ಸೂಲಿಬೆಲೆಗೆ ಕಲಬುರಗಿ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಿದ್ದರು. ಅದರಂತೆ ಜಿಲ್ಲಾ ಪೊಲೀಸರು ಭಾಲ್ಕಿಯಿಂದ ಕಲಬುರಗಿಗೆ ಆಗಮಿಸುತ್ತಿದ್ದ ಚಕ್ರವರ್ತಿ ಸೂಲಿಬಲೆ ಅವರನ್ನು ಕಮಲಾಪುರ ಬಳಿಯೇ ವಶಕ್ಕೆ ಪಡೆದು ಹಳ್ಳಿಖೇಡ ಊರಲ್ಲಿ ರಾತ್ರಿ ತಂಗುವಂತೆ ಮಾಡಿದ್ದರು. ಇದರ ವಿರುದ್ಧ ಕೋರ್ಟ್‌ ಮೆಟ್ಟಿಲೇಗಿದ್ದರು.


ಕಲಬುರಗಿ(ಮಾ.01):  ಪ್ರಚೋದನಕಾರಿ ಹಾಗೂ ಆಕ್ಷೇಪಾರ್ಹ ಭಾಷಣ ಮಾಡುತ್ತಾರೆಂಬ ಕಾರಣ ಮುಂದೊಡ್ಡಿ ನಮೋ ಬ್ರಿಗೇಡ್‌ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಅವರಿಗೆ ಕಲಬುರಗಿ ಜಿಲ್ಲೆ ಪ್ರವೇಶವನ್ನು ನಿಷೇಧಿಸಿ ಫೆ.28ರಂದು ಜಿಲ್ಲಾಡಳಿತ ಹೊರಡಿಸಿದ್ದ ಆದೇಶವನ್ನು ಕಲಬುರಗಿ ಹೈಕೋರ್ಟ್‌ ಪೀಠ ತೆರವುಗೊಳಿಸಿದ್ದು, ಗುರುವಾರ ಸಂಜೆ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಅವಕಾಶವನ್ನೂ ನೀಡಿದೆ. 

ಇಲ್ಲಿನ ಕಲಬುರಗಿ ಉಪ ವಿಭಾಗಾಧಿಕಾರಿ ರೂಪೇಂದ್ರ ಕೌರ್‌ ಸೂಲಿಬೆಲೆಗೆ ಕಲಬುರಗಿ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಿದ್ದರು. ಅದರಂತೆ ಜಿಲ್ಲಾ ಪೊಲೀಸರು ಭಾಲ್ಕಿಯಿಂದ ಕಲಬುರಗಿಗೆ ಆಗಮಿಸುತ್ತಿದ್ದ ಚಕ್ರವರ್ತಿ ಸೂಲಿಬಲೆ ಅವರನ್ನು ಕಮಲಾಪುರ ಬಳಿಯೇ ವಶಕ್ಕೆ ಪಡೆದು ಹಳ್ಳಿಖೇಡ ಊರಲ್ಲಿ ರಾತ್ರಿ ತಂಗುವಂತೆ ಮಾಡಿದ್ದರು. ಇದರ ವಿರುದ್ಧ ಕೋರ್ಟ್‌ ಮೆಟ್ಟಿಲೇಗಿದ್ದರು.

Latest Videos

undefined

ಕಲಬುರಗಿ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ: ಚಕ್ರವರ್ತಿ ಸೂಲಿಬಲೆ ತಡೆದು ವಾಪಸ್ ಕಳುಹಿಸಿದ ಪೊಲೀಸರು

ಅದಕ್ಕೆ ಎಸ್ಪಿಯವರ ಪತ್ರ, ಅವರು ನೀಡಿರುವಂತಹ ಶಾಂತಿ ಭಂಗದ ಕಾರಣಗಳನ್ನು ಉಲ್ಲೇಖಿಸಿ ಫೆ. 28 ರಿಂದ ಮಾ.4ರ ವರೆಗೂ ಸೂಲಿಬೆಲೆ ಅವರಿಗೆ ಕಲಬುರಗಿ ಪ್ರವೇಶಿಸದಂತೆ ನಿಷೇಧ ಹೇರಲಾಗಿತ್ತು. ಕೋರ್ಟ್‌ ತೀರ್ಪಿನಿಂದಾಗಿ ಸಂಜೆ ಚಿತ್ತಾಪುರಕ್ಕೆ ಹೋಗಿ ನಮೋ ಬ್ರಿಗೇಡ್‌ ಆಯೋಜಿಸಿದ್ದ ಸಮಾರಂಭಧಲ್ಲಿ ಸೂಲಿಬೆಲೆ ಪಾಲ್ಗೊಂಡಿದ್ದಾರೆ.

click me!