ದಾವಣಗೆರೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆ: ಹರಪನಹಳ್ಳಿ ಗಡಿಯಲ್ಲಿ ಫುಲ್‌ ಟೈಟ್‌

By Kannadaprabha News  |  First Published May 2, 2020, 10:15 AM IST

ದಾವಣಗೆರೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 10ಕ್ಕೆ ಏರಿಕೆ|  ದಾವಣಗೆರೆಗೆ ಹೋಗುವ ಮಾರ್ಗ ಕಂಚಿಕೇರಿ ರಸ್ತೆಯ ರೇಲ್ವೆ ಬ್ರಿಡ್ಜ್‌ ಬಳಿ, ಹರಿಹರ ರಸ್ತೆಯ ಆಶ್ರಯ ಬಡಾವಣೆ ಬಳಿ ಹಾಗೂ ಅರಸಿಕೇರಿ ರಸ್ತೆಯ ದೇವರ ತಿಮಲಾಪುರ ಬಳಿ ಮೂರು ಹೊಸದಾಗಿ ಚೆಕ್‌ ಪೋಸ್ಟ್‌ ತೆರೆಯಲಾಗಿದೆ|


ಹರಪನಹಳ್ಳಿ(ಮೇ.02):  ಕೊರೋನಾ ವೈರಸ್‌ ಸೋಂಕಿತರ ಸಂಖ್ಯೆ ದಾವಣಗೆರೆಯಲ್ಲಿ ಹೆಚ್ಚಳವಾದ ಹಿನ್ನೆಲೆಯಲ್ಲಿ ದಾವಣಗೆರೆಗೆ ಹೋಗುವ ಹರಪನಹಳ್ಳಿ ಗಡಿ ಭಾಗಗಳಲ್ಲಿ ಹೆಚ್ಚುವರಿ ಮೂರು ಚೆಕ್‌ ಪೋಸ್ಟ್‌ ಸ್ಥಾಪನೆ ಸೇರಿದಂತೆ ವಿವಿಧ ರೀತಿಯಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಇಲ್ಲಿಯ ಡಿವೈಎಸ್ಪಿ ಮಲ್ಲೇಶ ದೊಡ್ಮನಿ ಅವರು ದಾವಣಗೆರೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 10ಕ್ಕೆ ಏರಿದ್ದರಿಂದ ಇಲ್ಲಿಯ ಗಡಿ ಭಾಗದಲ್ಲಿ ಅಂದರೆ ದಾವಣಗೆರೆಗೆ ಹೋಗುವ ಮಾರ್ಗದಲ್ಲಿ ಅಂದರೆ ಕಂಚಿಕೇರಿ ರಸ್ತೆಯ ರೇಲ್ವೆ ಬ್ರಿಡ್ಜ್‌ ಬಳಿ, ಹರಿಹರ ರಸ್ತೆಯ ಆಶ್ರಯ ಬಡಾವಣೆ ಬಳಿ ಹಾಗೂ ಅರಸಿಕೇರಿ ರಸ್ತೆಯ ದೇವರ ತಿಮಲಾಪುರ ಬಳಿ ಮೂರು ಹೊಸದಾಗಿ ಚೆಕ್‌ ಪೋಸ್ಟ್‌ ಗಳನ್ನು ತೆರೆಯಲಾಗಿದೆ ಎಂದು ತಿಳಿಸಿದರು. ಇದರಿಂದ ಚೆಕ್‌ ಪೋಸ್ಟ್‌ ಗಳ ಸಂಖ್ಯೆ 9ಕ್ಕೆ ಏರಿದಂತಾಯಿತು.

Latest Videos

undefined

ಸುಧಾರಿಸದ ಜನ: ಕೊರೋನಾ ಬಗ್ಗೆ ಜಾಗೃತಿಗಾಗಿ ರೋಡಿಗಿಳಿದ ದೇವಾನು ದೇವತೆಗಳು..!

ದಾವಣಗೆರೆಗೆ ಹೋಗುವ ಒಳ ಮಾರ್ಗಗಳನ್ನು ಅಂದರೆ ಹೊಲದ ಕಾಲು ದಾರಿಯಲ್ಲಿ ಸಹ ಟೆಂಟ್‌ ಹೊಡೆದು ತಡೆ ಮಾಡಲು ಕ್ರಮ ಕೈಗೊಳ್ಳುತ್ತೇವೆ, ಶುಕ್ರವಾರ ಮ​ಧ್ಯಾಹ್ನದಿಂದ ಹರಪನಹಳ್ಳಿಯಿಂದ ಯಾರೂ ದಾವಣಗೆರೆ ಕಡೆಗೆ ಹೋಗುವ ಹಾಗಿಲ್ಲ, ಅಲ್ಲಿಂದ ಬರುವ ಹಾಗಿಲ್ಲ, ಅಗತ್ಯ ಸೇವೆಗಳಿಗೆ ಮಾತ್ರ ಅದೂ ಪಾಸ್‌ ಇದ್ದರೆ ಅವಕಾಶವಿದೆ ಎಂದು ತಿಳಿಸಿದರು.

ಬಂದ ವ್ಯಕ್ತಿ ವಾಪಸ್‌

ಕೊರೋನಾ ಸೋಂಕಿತ ವ್ಯಕ್ತಿ ಕಾಣಿಸಿಕೊಂಡ ದಾವಣಗೆರೆ ಜಾಲಿ ನಗರದಿಂದ ಭಯಗೊಂಡು ಹರಪನಹಳ್ಳಿ ಪಟ್ಟಣದ ಬಳಗಾರಗೇರಿಯ ಮಗಳ ಮನೆಗೆ ಬಂದಂತಹ ವ್ಯಕ್ತಿಯನ್ನು ಪೊಲೀಸರು ಸಂಜೆ ಆ್ಯಂಬುಲೆನ್ಸ್‌ನಲ್ಲಿ ವಾಪಸ್‌ ದಾವಣಗೆರೆಯ ಬಸವನಗರ ಪೊಲೀಸ್‌ ಠಾಣೆಗೆ ಕಳಿಸಿಕೊಡಲಾಯಿತು, ಅಲ್ಲಿಂದ ಆ ವ್ಯಕ್ತಿಯನ್ನು ದಾವಣಗೆರೆಯ ಕೋವಿಡ್‌ ಆಸ್ಪತ್ರೆಯಾಗಿರುವ ಸಿಜಿ ಆಸ್ಪತ್ರೆಗೆ ದಾಖಲಿಸಿ ದ್ರವ ಪರೀಕ್ಷೆಗೆ ಕಳಿಸಿ ಕೊಡಲಾಗಿದೆ.
ಹರಪನಹಳ್ಳಿಯಲ್ಲಿರುವ ಆತನ ಮಗಳ ಮನೆಯವರನ್ನು ಹೋಮ್‌ ಕ್ವಾಂರಟೈನ್‌ಗೆ ಅಳವಡಿಸಲಾಗಿದೆ ಎಂದು ಡಿವೈಎಸ್ಪಿ ಮಲ್ಲೇಶ ದೊಡ್ಮನಿ ತಿಳಿಸಿದ್ದಾರೆ.
 

click me!