ನೇತ್ರಾವತಿಯಲ್ಲಿ ನೀರಿನ ಮಟ್ಟ ಏರಿಕೆ, ದ.ಕದಲ್ಲಿ ಹೈ ಅಲರ್ಟ್‌

By Kannadaprabha News  |  First Published Aug 7, 2019, 2:29 PM IST

ಕರಾವಳಿಯಲ್ಲಿ ಮಳೆ ಮುಂದುವರಿದಿದ್ದು ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಏರುತ್ತಲೇ ಇದೆ. ನೆರೆ ಭೀತಿಯಿರುವುರಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಬಂಟ್ವಾಳ ತಾಲೂಕಿನ ಎಲ್ಲ ಅಧಿಕಾರಿಗಳು ಹೈ ಅಲರ್ಟ್‌ ಅಗಿರುವಂತೆ ಬಂಟ್ವಾಳ ಶಾಸಕ ರಾಜೇಶ್‌ ನಾಯ್ಕ್ ಉಳಿಪ್ಪಾಡಿಗುತ್ತು ತಿಳಿಸಿದ್ದಾರೆ.


ಮಂಗಳೂರು(ಆ.07): ಜಿಲ್ಲಾದ್ಯಂತ ಭಾರಿ ಮಳೆಯಾಗುತ್ತಿರುವುದರಿಂದ ನೇತ್ರಾವತಿ ನದಿಯ ನೀರಿನ ಮಟ್ಟಏರಿಕಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನ ಎಲ್ಲ ಅಧಿಕಾರಿಗಳು ಹೈ ಅಲರ್ಟ್‌ ಅಗಿರುವಂತೆ ಬಂಟ್ವಾಳ ಶಾಸಕ ರಾಜೇಶ್‌ ನಾಯ್ಕ್ ಉಳಿಪ್ಪಾಡಿಗುತ್ತು ತಿಳಿಸಿದ್ದಾರೆ.

ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನೆರೆ ಭೀತಿಯಿರುವುರಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 24 ಗಂಟೆಯೂ ಅಧಿಕಾರಿಗಳು ಸಂಪರ್ಕಕ್ಕೆ ಸಿಗುವಂತೆ ತಿಳಿಸಿದ್ದಾರೆ.

Tap to resize

Latest Videos

ಸೋಮವಾರ ರಾತ್ರಿಯಿಂದ ದಿನವಿಡೀ ಸುರಿಯುತ್ತಿರುವ ಮಳೆಯಿಂದ ಬಂಟ್ವಾಳ ತಾಲೂಕಿನ ಕೆಲ ತಗ್ಗು ಪ್ರದೇಶಗಳಿಗೆ ಹಾಗೂ ಎ.ಎಂ.ಆರ್‌ ಡ್ಯಾಂ ಹಾಗೂ ಇನ್ನಿತರ ಅಪಾಯದ ಪ್ರದೇಶಗಳಿಗೆ ಶಾಸಕ ರಾಜೇಶ್‌ ನಾಯ್ಕ… ಉಳಿಪ್ಪಾಡಿಗುತ್ತು ಹಾಗೂ ತಹಸೀಲ್ದಾರ್‌ ರಶ್ಮಿ ಎಸ್‌.ಆರ್‌., ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ರೇಖಾ ಶೆಟ್ಟಿಭೇಟಿ ನೀಡಿ ಪರಿಶೀಲಿಸಿದರು.

ನದಿ ನೀರಿನ ಮಟ್ಟಏರಿಕೆ:

ಬೆಳಗ್ಗೆ 7.7 ಮೀಟರ್‌ ಇದ್ದ ನೇತ್ರಾವತಿ ನದಿ ನೀರಿನ ಮಟ್ಟಸಂಜೆಯ ವೇಳೆ 7.9 ಮೀಟರ್‌ಗೆ ಏರಿಕೆಯಾಗಿದೆ. ನೇತ್ರಾವತಿ ನದಿಯ ನೀರಿನ ಅಪಾಯದ ಮಟ್ಟ8.5 ಅಗಿದ್ದು ಒಂದು ವೇಳೆ ರಾತ್ರಿಯ ವೇಳೆ ಘಟ್ಟಪ್ರದೇಶದಲ್ಲಿ ಮಳೆ ಜೊತೆ ಗಾಳಿಯೂ ಜಾಸ್ತಿಯಾಗಿ ಬಂದರೆ ಬುಧವಾರ ಮತ್ತಷ್ಟುನೀರಿನ ಮಟ್ಟಹೆಚ್ಚಾಗುವ ಸಾಧ್ಯತೆ ಗಳಿವೆ.

ಭಾರೀ ಮಳೆ: ಘಾಟಿಯಲ್ಲಿ10ಕ್ಕೂ ಹೆಚ್ಚು ಕಡೆ ಭೂ ಕುಸಿತ

click me!