52 ಕೆರೆಗೆ ಹರಿಯಲಿದೆ ‘ಹೇಮೆ’: ಸುರೇಶ್‌ಗೌಡ

By Kannadaprabha News  |  First Published Aug 20, 2023, 7:55 AM IST

ಹೆಬ್ಬೂರು, ಗೂಳೂರು ಏತ ನೀರಾವರಿ ಯೋಜನೆಯಡಿ ಕರಡಿಗೆರೆ ಕಾವಲ…ನಲ್ಲಿ ನಿರ್ಮಾಣವಾಗಿರುವ ಪಂಪ್‌ ಹೌಸ್‌ನಲ್ಲಿ ಬಟನ್‌ ಒತ್ತುವುದರ ಮೂಲಕ ಬಾಣಾವರ ಮತ್ತು ನರುಗನಹಳ್ಳಿ ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ. ಸುರೇಶಗೌಡ ಚಾಲನೆ ನೀಡಿದರು.


  ತುಮಕೂರು :  ಹೆಬ್ಬೂರು, ಗೂಳೂರು ಏತ ನೀರಾವರಿ ಯೋಜನೆಯಡಿ ಕರಡಿಗೆರೆ ಕಾವಲ…ನಲ್ಲಿ ನಿರ್ಮಾಣವಾಗಿರುವ ಪಂಪ್‌ ಹೌಸ್‌ನಲ್ಲಿ ಬಟನ್‌ ಒತ್ತುವುದರ ಮೂಲಕ ಬಾಣಾವರ ಮತ್ತು ನರುಗನಹಳ್ಳಿ ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ. ಸುರೇಶಗೌಡ ಚಾಲನೆ ನೀಡಿದರು.

ಗ್ರಾಮಾಂತರ ಕ್ಷೇತ್ರದ ಕನಸಿನ ಕೂಸು ಇದು. ಇದನ್ನು ನನಸು ಮಾಡಿಕೊಟ್ಟಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಬಸವರಾಜ… ಬೊಮ್ಮಾಯಿ ಅವರಿಗೆ ನಮ್ಮ ಕ್ಷೇತ್ರದ ಹೆಬ್ಬೂರು, ಗೂಳೂರು ಹೋಬಳಿ ಜನ ಕೃತಜ್ಞರು ಎಂದು ಸುರೇಶಗೌಡ ಹೇಳಿದರು.

Latest Videos

undefined

ಇಲ್ಲಿಂದ ಪಂಪ್‌ ಆದ ನೀರು 52 ಕೆರೆಗಳಿಗೆ ಹರಿಯಲಿದೆ. ಮೊದಲ ಹಂತದ 10 ದಿನಗಳಲ್ಲಿ ಬಾಣಾವರ ಹಾಗೂ ನರಗುನಹಳ್ಳಿ ಕೆರೆಗಳು ತುಂಬುತ್ತವೆ. ಈ ಏತ ನೀರಾವರಿ ಯೋಜನೆಗೆ ಅಡಿಗಲ್ಲು ಕಾರ್ಯಕ್ರಮಕ್ಕೆ ಸಿದ್ಧಗಂಗೆಯ ಶಿವಕುಮಾರ ಸ್ವಾಮೀಜಿಗಳು ಹಾಗೂ ಆದಿ ಚುಂಚನಗಿರಿಯ ಬಾಲಗಂಗಾಧರನಾಥ ಸ್ವಾಮೀಜಿಗಳು ಸಾಕ್ಷೀಕರಿಸಿದ್ದರು. ಈ ಯೋಜನೆಯ ಉದ್ಘಾಟನೆಗೂ ಈ ಇಬ್ಬರೂ ಬಂದಿದ್ದರು. ನಿಗದಿತ ಕಾಲಮಿತಿಯಲ್ಲಿ ಹೆಬ್ಬೂರು, ಗೂಳೂರು ಏತ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಿ ಲೋಕಾರ್ಪಣೆಗೊಳಿಸಿರುವಂತ ಇತಿಹಾಸ ನನ್ನದು ಎಂದರು.

ಈ ಯೋಜನೆಯ ಬಗ್ಗೆ ಅನೇಕರು ಅನೇಕ ರೀತಿಯ ವ್ಯಾಖ್ಯಾನಗಳನ್ನು ಮಾಡಿದ್ದನ್ನು ಕೂಡ ಕಂಡಿದ್ದೇನೆ. ಪೈಪ್‌ ಮೂಲಕ ನೀರು ತುಂಬಿಸಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದಂತವರಿಗೆ ತಾಲೂಕಿನಲ್ಲೇ ಅತೀ ದೊಡ್ಡ ನಾಗವಲ್ಲಿ ಕೆರೆಯನ್ನು ತುಂಬಿಸಿ ಅವರಿಗೆ ಉತ್ತರಿಸಿದ್ದೇನೆ. ಇದೇ ರೀತಿಯಲ್ಲಿ 52 ಕೆರೆಗಳಿಗೆ ನೀರು ತುಂಬಿಸುವ ಮುಖೇನ ಸದರಿ ಕೆರೆಗಳಿಂದ 250 ಗ್ರಾಮಗಳಿಗೆ ಬೆಂಗಳೂರು ಮಾದರಿಯಲ್ಲಿ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಯನ್ನು ಜಾರಿಗೊಳಿಸಿ ಅನುಷ್ಠಾನ ಮಾಡಿ ತೋರಿಸಿದ್ದೇನೆ. ಬೃಹತ್‌ ಗಾತ್ರದ ಮೋಟಾರ್‌ಗಳು ಚಾಲನೆಯಲ್ಲಿ ಇರುವುದರಿಂದ ವಿದ್ಯುತ್‌ ಸಂಪರ್ಕ ಕಡಿತಗೊಳಿಸುವ ಮುನ್ನ ಸಂಬಂಧಪಟ್ಟಹೇಮಾವತಿ ನಾಲೆಯ ಪಂಪ್‌ ಆಪರೇಟರ್‌ಗಳಿಗೆ ತಿಳಿಸುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಸುರೇಶ ಗೌಡ ಸೂಚಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ಶಿವಕುಮಾರ್‌, ರಾಮಚಂದ್ರಯ್ಯ ಮುಖಂಡರಾದ ನರಸಿಂಹಮೂರ್ತಿ, ಪರಮೇಶ್ವರಪ್ಪ, ಈಶ್ವರಯ್ಯ, ವೀರಪ್ಪನ್‌, ಮಹದೇವಣ್ಣ, ಕೆಆರ್‌ಪಿ ಕಾರ್ಯಪಾಲಕ ಅಭಿಯಂತರ ವೀರೇಂದ್ರ, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಅಂಜನ್‌ ಉಪಸ್ಥಿತರಿದ್ದರು.

ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ನನ್ನ ಶಾಸಕತ್ವದ ಅವಧಿಯಲ್ಲಿ ಯಾವುದೇ ಒಂದು ಕಾಮಗಾರಿಯನ್ನು ಹಿಡಿದುಕೊಂಡರೆ ಅದು ತಾತ್ವಿಕ ಅಂತ್ಯ ಕಾಣುವವರಿಗೆ ನಾನು ವಿರಮಿಸುತ್ತಿರಲಿಲ್ಲ . ಈ ಯೋಜನೆ ಸಾಕಾರಗೊಳ್ಳಲು ಹಗಲು ರಾತ್ರಿ ಎನ್ನದೆ ಕೆಲಸ ಮಾಡಿದ್ದರ ಪರಿಣಾಮವಾಗಿ ಇಂದು ಕ್ಷೇತ್ರದ 52 ಕೆರೆಗಳಿಗೆ ನೀರು ಹರಿಯುವಂತಾಗಿದೆ. ಇದು ನನ್ನ ಜೀವಮಾನದ ಕನಸಾಗಿತ್ತು. ಈ ಕನಸನ್ನು ನನಸು ಮಾಡಿಸಿದಂತ ಕೀರ್ತಿ ನಮ್ಮ ಭಾರತೀಯ ಜನತಾ ಪಾರ್ಟಿಯ ಸರ್ಕಾರಕ್ಕೆ ಸಲ್ಲುತ್ತದೆ.

ಸುರೇಶ್‌ಗೌಡ ಶಾಸಕ

click me!