ಕೊರೋನಾ ವೈರಸ್ ಅಟ್ಟಹಾಸ ಮೆರೆಯುತ್ತಿದ್ದು, ಇದೀಗ ಕಠಿಣ ಕ್ರಮಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.
ಹಾಸನ [ಮಾ.18]: ವಿಶ್ವದಲ್ಲಿ ಸೋಂಕು ತನ್ನ ಕರಾಳ ರೂಪವನ್ನು ತೋರುತ್ತಿದ್ದು, ಜಾತ್ರೆಗಳು, ಮದುವೆ ಸಮಾರಂಭಗಳಲ್ಲಿ ಕಡಿಮೆ ಜನ ಸೇರುವಂತೆ ಜಾಗೃತಿ ಮೂಡಿಸುವ ಜೊತೆಗೆ ಮುಂಜಾಗ್ರತಾ ಕ್ರಮ ಅನುಸರಿಸಲಾಗುತ್ತಿದೆ ಎಂದು ಎಸ್ಪಿ ಶ್ರೀನಿವಾಸಗೌಡ ತಿಳಿಸಿದ್ದಾರೆ. ಜಿಲ್ಲೆಯ ಶಾಲಾ ಕಾಲೇಜು ಗಳಿಗೂ ರಜೆ ನೀಡಲಾಗಿದೆ.
ಆದರೆ, ಜಿಲ್ಲೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿಯೇ ಇದೆ. ಅಂಗಡಿ ಮುಂಗಟ್ಟುಗಳು ಎಂದಿ ನಂತೆ ತೆರೆಯುತ್ತಿವೆ. ವಾಹನ ಸವಾರರು ಹೆಲ್ಮೆಟ್ ಧರಿಸದೆ ಚಲಾವಣೆ ಮಾಡುತ್ತಿ ದ್ದಾರೆ ಹಾಗಾಗಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಲಾವಣೆ ಮಾಡಬೇಕು. ಆ ಮೂಲಕ ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಬಹುದು ಎಂದರು.
ಹಾವೇರಿಯಲ್ಲೂ ಕೊರೋನಾ ಕಾಟ: 165 ಜನರ ಆರೋಗ್ಯ ತಪಾಸಣೆ...
ಕೊರೋನಾ ಭೀತಿ ಕಡಿಮೆಯಾಗುವವರೆಗೂ ಜನರು ಜಾತ್ರೆ, ಸಮಾರಂಭ ಗಳಿಗೆ ಹೋಗುವುದನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದರು.