ಆಗುಂಬೆ ಘಾಟಿಯಲ್ಲಿ ಸಂಚಾರಕ್ಕೆ ‍ಷರತ್ತು: ಯಾವೆಲ್ಲ ವಾಹನ ಹೋಗಬಹುದು..?

By Kannadaprabha News  |  First Published Jun 20, 2020, 7:53 AM IST

ತೀರ್ಥಹಳ್ಳಿ - ಉಡುಪಿ ರಾಷ್ಟ್ರೀಯ ಹೆದ್ದಾರಿ 169ಎ ಇದರ ಆಗುಂಬೆ ಘಾಟಿಯಲ್ಲಿ ಹೆಚ್ಚಿನ ಭಾರದ ವಾಹನಗಳ ಸಂಚಾರವನ್ನು ಜೂ. 15ರಿಂದ ಅಕ್ಟೊಬರ್‌ 15ರವರೆಗೆ ನಿಷೇಧಿಸಿ ಉಡುಪಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಓದಿ


ಉಡುಪಿ(ಜೂ.20): ತೀರ್ಥಹಳ್ಳಿ - ಉಡುಪಿ ರಾಷ್ಟ್ರೀಯ ಹೆದ್ದಾರಿ 169ಎ ಇದರ ಆಗುಂಬೆ ಘಾಟಿಯಲ್ಲಿ 12 ಟನ್‌ಗಿಂತ ಹೆಚ್ಚಿನ ಭಾರದ ವಾಹನಗಳ ಸಂಚಾರವನ್ನು ಜೂ. 15ರಿಂದ ಅಕ್ಟೊಬರ್‌ 15ರವರೆಗೆ ನಿಷೇಧಿಸಿ ಉಡುಪಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಆಗುಂಬೆ ಘಾಟಿಯು ಅಗಲ ಕಿರಿದಾಗಿದ್ದು, ಅದರ ಕ್ಷಮತೆ ಕ್ಷೀಣಿಸುತ್ತಿದೆ. ಮಳೆಗಾಲದಲ್ಲಿ ಈ ಘಾಟಿಯಲ್ಲಿ ಭಾರಿ ಸರಕು ಸಾಗಣೆ ವಾಹನಗಳು ಸಂಚರಿಸುವುದರಿಂದ ಇಕ್ಕೆಲಗಳಲ್ಲಿ ಮಣ್ಣು ಕುಸಿಯುವ, ಅಪಘಾತಗಳಾಗುವ ಸಾಧ್ಯತೆ ಇದೆ.

Latest Videos

undefined

ಗಡಿನಾಡ ಶಾಲಾ ಮಕ್ಕಳಿಗೆ ಆನ್‌ಲೈನ್‌ ಕ್ಲಾಸ್: ಶಿಕ್ಷಣದಲ್ಲೂ ಕೇರಳ ಮಾಡೆಲ್‌ ಯತ್ನ!

ಈ ಹಿನ್ನೆಲೆಯಲ್ಲಿ ಪೊಲೀಸ್‌ ಅಧೀಕ್ಷಕ ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಸಲಹೆಯಂತೆ ಈ ಘಾಟಿಯಲ್ಲಿ ಮಳೆಗಾಲದ ಈ 4 ತಿಂಗಳ ಅವಧಿಯಲ್ಲಿ 12 ಟನ್‌ ಗಿಂತ ಜಾಸ್ತಿ ಭಾರದ ವಾಹನಗಳ ಸಂಚಾರವನ್ನು ನಿಷೇಧಿಸಿದ್ದಾರೆ.

ದಕ್ಷಿಣ ಕನ್ನಡ​ದಲ್ಲಿ 206 ಮಂದಿ ಕೊರೋನಾ ಗುಣಮುಖರು ಬಿಡುಗಡೆ

ಅಲ್ಲದೆ ಈ ವಾಹನಗಳನ್ನು ಉಡುಪಿ - ಬ್ರಹ್ಮಾವರ - ಬಾರ್ಕೂರು - ಶಂಕರನಾರಾಯಣ - ಸಿದ್ಧಾಪುರ - ಹೊಸಂಗಡಿ - ಹುಲಿಕಲ್‌ ಘಾಟಿ - ಹೊಸನಗರ - ತೀರ್ಥಹಳ್ಳಿ ಮೂಲಕ ಅಥವಾ ಉಡುಪಿ - ಕಾರ್ಕಳ - ಬಜಗೋಳಿ - ಎಸ್‌.ಕೆ.ಬಾರ್ಡರ್‌ - ಕೆರೆಕಟ್ಟೆ- ಶೃಂಗೇರಿ - ಶಿವಮೊಗ್ಗ ಮಾರ್ಗದಲ್ಲಿ ಸಂಚರಿಬಹುದು ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

click me!