ಅತಿಯಾಗಿ ಸುರಿಯುವ ಮಳೆಯಿಂದಾಗಿ ಆಗುಂಬೆ ಘಾಟಿ ರಸ್ತೆ ಸಂಚಾರವನ್ನು ನಿಷೇಧಿಸಲಾಗಿದೆ. ಯಾವಾಗಿನಿಂದ..?
ಶಿವಮೊಗ್ಗ, (ಜೂನ್. 16): ಆಗುಂಬೆ ಘಾಟಿ ರಸ್ತೆಯಲ್ಲಿ ಅಧಿಕ ಭಾರದ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಒಂದು ತಿಂಗಳು ನಿಷೇಧ ಹೇರಲಾಗಿದೆ.
ಜೂನ್ 15ರಿಂದ ಅಕ್ಟೋಬರ್ 15ರವರೆಗೆ ಭಾರಿ ವಾಹನಗಳ ಸಂಚಾರ ನಿಷೇಧಿಸಿ ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.
ಗುಂಡಿನ ದಾಳಿ ಮಾಡಿದ ಚೀನಾ, ಬಯಲಾಯ್ತು ಸುಶಾಂತ್ ಆತ್ಮಹತ್ಯೆ ಕಾರಣ; ಜೂ.16ರ ಟಾಪ್ 10 ಸುದ್ದಿ!
ಆಗುಂಬೆ ಭಾಗದಲ್ಲಿ ಅತಿಯಾಗಿ ಸುರಿಯುವ ಮಳೆಯಿಂದ ಘಾಟಿ ರಸ್ತೆ ಕುಸಿಯುವ ಭೀತಿ ಹಿನ್ನೆಲೆಯಲ್ಲಿ ಭಾರಿ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ.
ಜೂನ್ 15ರಿಂದ ಅಕ್ಟೋಬರ್ 15ರವರೆಗೆ ಭಾರಿ ವಾಹನಗಳ ಸಂಚಾರ ನಿಷೇಧ ಹೇರಲಾಗಿದ್ದು, ಈ ಸಮಯದಲ್ಲಿ12 ಟನ್ ಗಿಂತ ಅಧಿಕ ಭಾರದ ಸರಕು ಸಾಗಣೆ ವಾಹನಗಳಿಗೆ ಆಗುಂಬೆ ಘಾಟಿ ರಸ್ತೆಯಲ್ಲಿ ಸಂಚರಿಸುವಂತಿಲ್ಲ.
ಅಧಿಕ ಭಾರದ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಜಿಲ್ಲಾಧಿಕಾರಿಗಳು ಎರಡು ಪರ್ಯಾಯ ಮಾರ್ಗ ಸೂಚಿಸಿದ್ದಾರೆ. ಒಂದು ಶಿವಮೊಗ, ತೀರ್ಥಹಳ್ಳಿ, ಶೃಂಗೇರಿ, ಕೆರೆಕಟ್ಟೆ, ಕಾರ್ಕಳ, ಉಡುಪಿ, ಮಂಗಳೂರ ಮಾರ್ಗವಾಗಿ ಸಂಚರಿಸಬಹುದು.
ಇಲ್ಲ ಶಿವಮೊಗ್ಗ, ತೀರ್ಥಹಳ್ಳಿ, ಮಾಸ್ತಿಕಟ್ಟೆ, ಹುಲಿಕಲ್, ಹೊಸಂಗಡಿ, ಸಿದ್ದಾಪುರ, ಉಡುಪಿ, ಮಂಗಳೂರು ಮಾರ್ಗದಲ್ಲಿ ಸಂಚರಿಸಲು ಸೂಚನೆ ನೀಡಿದ್ದಾರೆ.