ಗುರುವಾರ ಸಂಜೆ ಸುರಿದ ಭಾರೀ ಮಳೆಗೆ ಮರಗಳು ರಸ್ತೆ ಉರುಳಿ ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಬಳಿ ನಡೆದಿದೆ.
ತೀರ್ಥಹಳ್ಳಿ (ಏ.18): ಗುರುವಾರ ಸಂಜೆ ಸುರಿದ ಭಾರೀ ಮಳೆಗೆ ಮರಗಳು ರಸ್ತೆ ಉರುಳಿ ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಬಳಿ ನಡೆದಿದೆ.
ದೇಮ್ಲಾಪುರ ಗ್ರಾಪಂ ವ್ಯಾಪ್ತಿಯ ಸಂಪಗಾರು ಗ್ರಾಮದ ಜಯಂತ್ ಭಟ್(64) ಮೃತ ದುರ್ದೈವಿ. ಕೋಣಂದೂರಿನಿಂದ ಅವರ ಊರು ಸಂಪಗಾರುಗೆ ಹೋಗುತ್ತಿದ್ದ ವೇಳೆ ನಡೆದಿರುವ ದುರ್ಘಟನೆ. ಕೋಣಂದೂರಿನಿಂದ ಸ್ಕೂಟಿಯಲ್ಲಿ ಹಿಂತಿರುಗುವ ವೇಳೆ ಬೀಸಿದ ಭಾರೀ ಬಿರುಗಾಳಿಗೆ ರಸ್ತೆಯ ಬದಿಯಲ್ಲಿದ್ದ ಪೈನಸ್ ಮರ ಉರುಳಿ ಜಯಂತ್ ಭಟ್ ಮೈಮೇಲೆ ಬಿದ್ದಿದೆ. ಬಿದ್ದ ರಭಸಕ್ಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
undefined
ಸಂಜೆ ಸುರಿದ ಗಾಳಿ ಮಳೆಗೆ ಈ ಮಾರ್ಗದಲ್ಲಿ ಹಲವಾರು ಮರಗಳು ರಸ್ತೆಗೆ ಉರುಳಿದ್ದು, ಸಂಚಾರ ಬಂದ್ ಆಗಿದೆ. ರಸ್ತೆ ಬದಿಯಲ್ಲಿ ಬೆಳೆಸಲಾಗಿರುವ ಮರಗಳನ್ನು ಎಂಪಿಎಂ ಇಲಾಖೆ ಸಕಾಲದಲ್ಲಿ ಕಟಾವ್ ಮಾಡದ ಕಾರಣ ಈ ಅವಘಢ ಸಂಭವಿಸಿದ್ದು ಸಾರ್ವಜನಿಕರ ವಿರೋದಕ್ಕೂ ಕಾರಣವಾಗಿದೆ. ಪ್ರಕರಣ ಕೋಣಂದೂರು ಠಾಣೆಯಲ್ಲಿ ದಾಖಲಾಗಿದೆ.
ಕರ್ನಾಟಕದ 10 ಜಿಲ್ಲೆಗಳಲ್ಲಿ ಬೇಸಿಗೆ ಮಳೆ: ಸಿಡಿಲಿಗೆ ಮೂವರು ಸಾವು