ಕರಡಿ ದಾಳಿಗೆ ವೃದ್ಧ ಬಲಿ, ಅರಣ್ಯಾಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ

By Ravi Janekal  |  First Published Apr 18, 2024, 5:45 PM IST

ಕರಡಿ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ವೃದ್ಧನೋರ್ವ ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ. ಚೆನ್ನಪ್ಪ ಮಡಿವಾಳರ್ (74), ಕರಡಿ ದಾಳಿಗೆ ಮೃತಪಟ್ಟ ವೃದ್ಧ. ಇಂದು ಮುಂಜಾನೆ ರಾಂಪುರ ಗ್ರಾಮದ ಹೊರವಲಯದ ಕೆರೆ ಬಳಿ ಇರುವ ಆಂಜನೇಯ ದೇವಸ್ಥಾನದ ಬಳಿ ದುರ್ಘಟನೆ ನಡೆದಿದೆ.


ಕೊಪ್ಪಳ (ಏ.18): ಕರಡಿ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ವೃದ್ಧನೋರ್ವ ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ.

ಚೆನ್ನಪ್ಪ ಮಡಿವಾಳರ್ (74), ಕರಡಿ ದಾಳಿಗೆ ಮೃತಪಟ್ಟ ವೃದ್ಧ. ಇಂದು ಮುಂಜಾನೆ ರಾಂಪುರ ಗ್ರಾಮದ ಹೊರವಲಯದ ಕೆರೆ ಬಳಿ ಇರುವ ಆಂಜನೇಯ ದೇವಸ್ಥಾನದ ಬಳಿ ದುರ್ಘಟನೆ ನಡೆದಿದೆ.

Tap to resize

Latest Videos

undefined

ನಿನ್ನೆ ರಾತ್ರಿ ದೇವಸ್ಥಾನ ದಲ್ಲಿನ ಎಣ್ಣೆ ಮತ್ತು ನೀರನ್ನು ಕುಡಿಯಲು ಬಂದಿದ್ದ ಕರಡಿ. ದೇವಸ್ಥಾನದೊಳಗೆ ಕರಡಿ ಬಂದಿರೋದನ್ನ ಗಮನಿಸಿದ್ದ ಗ್ರಾಮಸ್ಥರು. ಕರಡಿ ದೇವಸ್ಥಾನದೊಳಗಿರುವಾಗಲೇ ಬಾಗಿಲು ದೇವಸ್ಥಾನದಲ್ಲಿ ಕೂಡಿ ಹಾಕಿದ್ದರು. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಕರೆ ಮಾಡಿ ಮಾಹಿತಿ ನೀಡಿದ್ದರು.

ರೈತನ ಮೇಲೆ ಏಕಾಏಕಿ ದಾಳಿ ಮಾಡಿದ ಕರಡಿ: ತೀವ್ರ ಗಾಯ

ಸ್ಥಳಕ್ಕೆ ಆಗಮಿಸಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಕರಡಿ ಹಿಡಿಯಲು ಬೋನು ಇಟ್ಟು ನಿಂತಿದ್ದರು. ಈ ವೇಳೆ ತಪ್ಪಿಸಿಕೊಂಡು ಬಂದು ವೃದ್ದನ ಮೇಲೆ ದಾಳಿ ಮಾಡಿದ್ದ ಕರಡಿ ಕುತ್ತಿಗೆ ಮೈ ಮೇಲೆಲ್ಲ ಪರಚಿ ತೀವ್ರವಾಗಿ ಗಾಯಗೊಳಿಸಿತ್ತು. ಕೂಡಲೇ ವೃದ್ಧನನ್ನ ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದ ಅರಣ್ಯಾಧಿಕಾರಿಗಳು ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ವೃದ್ಧ. ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳನ್ನು ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡರು. ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ ಘಟನೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನಕಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ.

click me!