Heavy Rain in Mandya: ಕೆರೆ ಕೋಡಿ ಹರಿದು 45 ಆಡು, ಒಂದು ಕರು ಸಾವು

By Kannadaprabha News  |  First Published Sep 6, 2022, 10:54 AM IST

ಹಲಗೂರು ಸುತ್ತಮುತ್ತ ಭಾನುವಾರ ಸುರಿದ ಭಾರೀ ಮಳೆಗೆ ಹೊನಗಾನಹಳ್ಳಿ ಕೆರೆ ತುಂಬಿ ಕೋಡಿ ಹರಿದ ಪರಿಣಾಮ ಭೀಮಾ ಜಲಾಶಯ ಭರ್ತಿಯಾಗಿ ಹರಿದ ಹೆಚ್ಚುವರಿ ನೀರು ಶೆಡ್‌ವೊಂದಕ್ಕೆ ನುಗ್ಗಿದೆ. ಪರಿಣಾಮ 45 ಆಡುಗಳು ಮತ್ತು ಒಂದು ಕರು ಸ್ಥಳದಲ್ಲೇ ಮೃತಪಟ್ಟಿವೆ.


ಹಲಗೂರು (ಸೆ.6) : ಹಲಗೂರು ಸುತ್ತಮುತ್ತ ಭಾನುವಾರ ಸುರಿದ ಭಾರೀ ಮಳೆಗೆ ಹೊನಗಾನಹಳ್ಳಿ ಕೆರೆ ತುಂಬಿ ಕೋಡಿ ಹರಿದ ಪರಿಣಾಮ ಭೀಮಾ ಜಲಾಶಯ ಭರ್ತಿಯಾಗಿ ಹರಿದ ಹೆಚ್ಚುವರಿ ನೀರು ಶೆಡ್‌ವೊಂದಕ್ಕೆ ನುಗ್ಗಿದೆ. ಪರಿಣಾಮ 45 ಆಡುಗಳು ಮತ್ತು ಒಂದು ಕರು ಸ್ಥಳದಲ್ಲೇ ಮೃತಪಟ್ಟಿವೆ. ಮೂರು ಕರು ಹಾಗೂ ವ್ಯಕ್ತಿಯೊಬ್ಬನನ್ನು ತೆಪ್ಪದ ಮೂಲಕ ರಕ್ಷಣೆ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಬಳಿಯ ಜಮೀಲ್‌ ಪಾಷ ಅವರ ಆಡು ಸಾಕುವ ಶೆಡ್ಡಿಗೆ ನೀರು ನುಗ್ಗಿ ಅನಾಹುತ ಸಂಭವಿಸಿದ್ದು, ಇದರಿಂದ 8 ಲಕ್ಷ ರು. ನಷ್ಟಉಂಟಾಗಿದೆ. ಶೆಡ್‌ನಲ್ಲಿದ್ದ 3 ಕರು ಹಾಗೂ ರಾಜು ಎಂಬುವನನ್ನು ತೆಪ್ಪದ ಮೂಲಕ ಸುರಕ್ಷಿತವಾಗಿ ಹೊರೆಗೆ ಕರೆತರಲಾಯಿತು.

Heavy Rain: ಕರ್ನಾಟಕದ 11 ಜಿಲ್ಲೆಗಳಲ್ಲಿ ಮಳೆ ಆರ್ಭಟ: 3 ಸಾವು

Tap to resize

Latest Videos

ಆಡು(Goat) ಸಾಕುವ ಶೆಡ್‌(Tin Shed)ಗೆ ಭಾರೀ ಪ್ರಮಾಣದ ನೀರು(Floods) ನುಗ್ಗಿದ ಪರಿಣಾಮ ಕೆಲಸಗಾರÜ ರಾಜು ತಕ್ಷಣವೇ ನನಗೆ ದೂರವಾಣಿ ಮುಖಾಂತರ ಮಾಹಿತಿ ನೀಡಿದರು. ಮಳವಳ್ಳಿ(Malavalli)ಯಿಂದ ಬೋಟು(Boat)ಗಳನ್ನು ತರಿಸಿ ತೆಪ್ಪದಲ್ಲಿ ಶೆಡ್ಡಿನ ಹತ್ತಿರ ತೆರಳಿದೆವು. ಶೆಡ್‌ನ ಬಾಗಿಲು ತೆಗೆದಾಗ ಮೃತಪಟ್ಟಿದ್ದ ಆಡುಗಳು ಕೊಚ್ಚಿ ಹೋದವು. ತಕ್ಷಣ ಮೂರು ಕರುಗಳನ್ನು ಹಾಗೂ ರಾಜು ಎಂಬುವನನ್ನು ರಕ್ಷಣೆ ಮಾಡಿಕೊಂಡು ಬಂದೆವು. ನನಗೆ ಸೇರಿದ ಮೂರು ಜಟಕಾ ಗಾಡಿಗಳು ಹಾಗೂ ಟಿವಿಎಸ್‌ ಮೊಪೆಡ್‌ ಸ್ಕೂಟಡ್‌ ಹಾಗೂ ಒಮಿನಿ ಕಾರು ನೀರಿನಲ್ಲಿ ಮುಳುಗಿದ್ದು ಶೆಡ್ಡಿನಲ್ಲಿ ಒಂದು ಕರು ಹಾಗೂ ಹಲವು ಆಡಿನ ಶವಗಳು ದೊರಕಿದೆ. ಇದರಿಂದ ನಮಗೆ ಎಂಟು ಲಕ್ಷಕ್ಕೂ ಅಧಿಕ ನಷ್ಟಸಂಭವಿಸಿದೆ ಎಂದು ಜಮೀಲ್‌ ಪಾಷ ಅಳಲು ವ್ಯಕ್ಕತಪಡಿಸಿದರು.

ಸೇತುವೆ ಕಾಮಗಾರಿ ವಿಳಂಬ:

ಭೀಮಾ ನದಿ(Bhima river) ಅಕ್ಕ-ಪಕ್ಕದಲ್ಲಿದ್ದ ಎಲೆ ತೋಟ, ಇಟ್ಟಿಗೆ ಫ್ಯಾಕ್ಟರಿ ಮತ್ತು ಇತರೆÜ ಬೆಳೆಗಳು ಪೂರ್ಣ ನಷ್ಟಕ್ಕೊಳಗಾಗಿದೆ. ವೀರಶೈವ ರುದ್ರಭೂಮಿಯೂ ಸಹ ನೀರಿನಲ್ಲಿ ಮುಳುಗಡೆಯಾಗಿದೆ. ರಾಷ್ಟ್ರೀಯ ಹೆದ್ದಾರಿಯಿಂದ ಮುತ್ತತ್ತಿಗೆ ಹೋಗುವ ರಸ್ತೆ ಪೂರ್ಣಗೊಂಡಿಲ್ಲದ ಕಾರಣ ತಾತ್ಕಾಲಿಕವಾಗಿ ನಿರ್ಮಿಸಿದ ಸೇತುವೆಯ ಮೇಲೆ ನೀರು ಹರಿದು ರಸ್ತೆ ಸಂಪರ್ಕ ಇಲ್ಲದೆ ಸಾರ್ವಜನಿಕರು ತೊಂದರೆ ಎದುರಿಸುತ್ತಿದ್ದಾರೆ. ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಿದ್ದರೆ ತೊಂದರೆ ಆಗುತ್ತಿರಲಿಲ್ಲ. ತಕ್ಷಣವೇ ಸಂಬಂಧಪಟ್ಟಅಧಿಕಾರಿಗಳು ಕಾಮಗಾರಿಯನ್ನು ಪೂರ್ಣಗೊಳಿಸಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ .

ರಾಮನಗರ ಜಿಲ್ಲೆಯಲ್ಲಿ ಮುಂದುವರಿದ ಮಳೆ: ಜಮೀನುಗಳು ಜಲಾವೃತ

ಹಗದೂರಿಗೆ ಹೋಗುವ ರಸ್ತೆಯೂ ಸಹ ನೀರು ತುಂಬಿ ಹರಿಯುತ್ತಿದೆ. ಅಲ್ಲಿಯೂ ಸಹ ಸಂಪರ್ಕ ಇಲ್ಲದ ಪರಿಣಾಮ ಬೈಪಾಸ್‌ ರಸ್ತೆ ಮುಖಾಂತರ ತಮ್ಮ ತಮ್ಮ ಗ್ರಾಮಗಳಿಗೆ ಸಾರ್ವಜನಿಕರು ಹೋಗಬೇಕಾಗಿದೆ. ಸುಮಾರು ವರ್ಷಗಳ ನಂತರ ಭೀಮಾ ಜಲಾಶಯ ತುಂಬಿರುವ ಸುದ್ದಿಯನ್ನು ಕೇಳಿ ಹೆಚ್ಚಿನ ಸಾರ್ವಜನಿಕರು ಸ್ಥಳಕ್ಕೆ ಬಂದು ಜಲಧಾರೆ ಹರಿಯುವುದನ್ನು ವೀಕ್ಷಿಸುತ್ತಿದ್ದಾರೆ.

click me!