ಬೀದರ್‌ನಲ್ಲಿ ಭಾರಿ ಮಳೆ: ಹಳ್ಳ ದಾಟಲು ಹೋಗಿ ಮಕ್ಕಳು ಸೇರಿ ಕುಟುಂಬದ ಮೂವರು ನೀರುಪಾಲು

By BK AshwinFirst Published May 1, 2023, 9:01 AM IST
Highlights

ಬೀದರ್‌ ಜಿಲ್ಲೆಯಲ್ಲಿ  ಭಾರಿ ಬಿರುಗಾಳಿ ಜೊತೆ ಸುರಿದ ಅಕಾಲಿಕ ಮಳೆಯಿಂದ ಹೆಡಗಾಪುರ ಗ್ರಾಮದ ಹಳ್ಳ ಉಕ್ಕಿ ಹರಿದಿದೆ. ಆದರೂ, ಉಕ್ಕಿ ಹರಿಯುತ್ತಿದ್ದ ಹಳ್ಳವನ್ನೇ ಸಂಗಪ್ಪ ರೈತ ಕುಟುಂಬ ದಾಟಲು ಮುಂದಾಗಿದ್ದು, ಮೂವರು ನೀರು ಪಾಲಾಗಿದ್ದಾರೆ. 

ಬೀದರ್‌ (ಮೇ 1, 2023): ಬೀದರ್ ಜಿಲ್ಲೆಯ ಹಲವೆಡೆ ಭಾರಿ ಮಳೆ ಸುರಿದಿದ್ದು, ಈ ಹಿನ್ನೆಲೆ ಹಳ್ಳ ದಾಟಲು ಹೋಗಿ ಒಂದೇ ಕುಟುಂಬದ ಮೂವರು ನೀರುಪಾಲಾಗಿರುವ ದುರ್ಘಟನೆ ನಡೆದಿದೆ. ಜಿಲ್ಲೆಯ ಔರಾದ್ ತಾಲೂಕಿನ ಹೆಡಗಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಘಟನೆಯಲ್ಲಿ 42 ವರ್ಷದ ಸುನಂದಾ ಸಂಗಪ್ಪಾ ಲದ್ದೆ, 12 ವರ್ಷದ ಮಗ ಸುಮಿತ್ ಹಾಗೂ 14 ವರ್ಷದ ಮಗಳು ಐಶ್ವರ್ಯಾ ಲದ್ದೆ ಮೃತ ದುರ್ದೈವಿಗಳಾಗಿದ್ದಾರೆ. ಹೊಲದಲ್ಲಿ ಕೆಲಸ ಮಾಡಿ ಮನೆಗೆ ತೆರಳುವಾಗ ಈ ದುರ್ಘಟನೆ ನಡೆದಿದೆ ಎಂದೂ ತಿಳಿದುಬಂದಿದೆ.

ಬೀದರ್‌ ಜಿಲ್ಲೆಯಲ್ಲಿ  ಭಾರಿ ಬಿರುಗಾಳಿ ಜೊತೆ ಸುರಿದ ಅಕಾಲಿಕ ಮಳೆಯಿಂದ ಹೆಡಗಾಪುರ ಗ್ರಾಮದ ಹಳ್ಳ ಉಕ್ಕಿ ಹರಿದಿದೆ. ಆದರೂ, ಉಕ್ಕಿ ಹರಿಯುತ್ತಿದ್ದ ಹಳ್ಳವನ್ನೇ ಸಂಗಪ್ಪ ರೈತ ಕುಟುಂಬ ದಾಟಲು ಮುಂದಾಗಿದ್ದಾರೆ. 

ಇದನ್ನು ಓದಿ: ಪರೀಕ್ಷೆಯಲ್ಲಿ ಫೇಲಾಗಿದ್ದಕ್ಕೆ ಪ್ರಾಣ ಕಳೆದುಕೊಂಡ 9 ವಿದ್ಯಾರ್ಥಿಗಳು; ಮತ್ತಿಬ್ಬರಿಂದ ಆತ್ಮಹತ್ಯೆಗೆ ಯತ್ನ

ಮೃತ ಸುನಂದಾ ಪತಿ ಹಳ್ಳ ದಾಟಿದ್ದು, ಆದರೆ, ಪತ್ನಿ ಹಾಗೂ ಮಕ್ಕಳು ಸೇರಿ ಮೂವರು ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನು, ಘಟನೆ ಸಂಬಂಧ ಅಗ್ನಿ ಶಾಮಕ ದಳದ ಸಿಬ್ಬಂದಿ, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಈ ಮೂವರು ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಅಗ್ನಿ ಶಾಮಕ‌ ದಳದ ಸಿಬ್ಬಂದಿ ಇವರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದೂ ತಿಳಿದುಬಂದಿದೆ. 
 

ಇದನ್ನೂ ಓದಿ: ನಿದ್ರೆ ಹಾಳು ಮಾಡಿದ್ದಕ್ಕೆ ಗೆಳೆಯನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರ ಹತ್ಯೆ ಮಾಡಿದ ಪಾಪಿ!

click me!