ದೈವಜ್ಞ ಕಲ್ಯಾಣ ಮಂಟಪ ಎದುರಿನ ರಸ್ತೆ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಇದರಿಂದ ವಾಹನ ಸವಾರರು ಪರದಾಡಿದ್ದಾರೆ. ಬಿ.ಆರ್.ಟಿ.ಎಸ್. ಕಾರಿಡಾರ್ ರಸ್ತೆಯನ್ನು ನೀರು ಆವರಿಸಿಕೊಂಡಿದೆ.
ಧಾರವಾಡ(ಜೂ.07): ಧಾರಾಕಾರ ಮಳೆ ಸುರಿದ ಪರಿಣಾಮ ರಸ್ತೆಗೆ ಮಳೆ ನೀರು ನುಗ್ತಿದ್ದರಿಂದ ವಾಹನಗಳು ನೀರಿನಲ್ಲೇ ನಿಂತ ಘಟನೆ ನಗರದಲ್ಲಿ ಇಂದು(ಶುಕ್ರವಾ) ನಡೆದಿದೆ. ನಗರದ ಎನ್.ಟಿ.ಟಿ.ಎಫ್ ಬಳಿಯ ರಸ್ತೆಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ನೀರು ಹರಿದಿದೆ.
ದೈವಜ್ಞ ಕಲ್ಯಾಣ ಮಂಟಪ ಎದುರಿನ ರಸ್ತೆ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಇದರಿಂದ ವಾಹನ ಸವಾರರು ಪರದಾಡಿದ್ದಾರೆ. ಬಿ.ಆರ್.ಟಿ.ಎಸ್. ಕಾರಿಡಾರ್ ರಸ್ತೆಯನ್ನು ನೀರು ಆವರಿಸಿಕೊಂಡಿದೆ.
ಕರ್ನಾಟಕದ 10 ಜಿಲ್ಲೆಗಳಲ್ಲಿ ಭಾರೀ ಮಳೆ: ಡ್ಯಾಂಗಳಿಗೆ ಒಳಹರಿವು ಪ್ರಾರಂಭ
ನಿಂತ ನೀರಿನಲ್ಲಿಯೇ ವಾಹನಗಳು ನಿಧಾನವಾಗಿ ಚಲಿಸುತ್ತಿವೆ. ಮಳೆ ನೀರು ದಾಟಲು ಸರಿಯಾದ ವ್ಯವಸ್ಥೆ ಇಲ್ಲದ ಹಿನ್ನೆಲೆ ರಸ್ತೆಯಲ್ಲೇ ನೀರು ನಿಂತಿದೆ. ಮೇಲ್ಭಾಗದಿಂದ ಬಂದ ನೀರೆಲ್ಲ ರಸ್ತೆಯಲ್ಲೇ ಜಲಾವೃತವಾಗಿದೆ. ಇದರಿಂದ ಜನರು ಪಡಬಾರದ ಕಷ್ಟಗಳನ್ನ ಎದುರಿಸುತ್ತಿದ್ದಾರೆ.