
ಬೆಂಗಳೂರು(ಜೂ.05): ನಗರದಲ್ಲಿ ಶನಿವಾರ ಸಂಜೆ ಮುಂಗಾರು ಮಳೆ ಆರ್ಭಟಿಸಿದ್ದು, ನಗರದ ಮಧ್ಯ ಭಾಗಕ್ಕೆ ಹೋಲಿಸಿದರೆ ಹೊರವಲಯದಲ್ಲಿ ಮಳೆಯ ಅಬ್ಬರ ಹೆಚ್ಚಿತ್ತು. ಸಿಡಿಲು, ಮಿಂಚು ಸಹಿತ ಮಳೆಯ ಜೊತೆಗೆ ಗಾಳಿ ಬೀಸಿದ ಪರಿಣಾಮ ನಗರದ ನಾಲ್ಕೈದು ಕಡೆ ಮರಗಳು ಧರೆಗುರುಳಿದೆ.
ಅತ್ತಿಗುಪ್ಪೆ, ಐಟಿಐ ಬಡಾವಣೆ, ಜಸ್ಮಾ ಭವನ, ಕುಂದನಹಳ್ಳಿ, ಮಲ್ಲಸಂದ್ರ, ಎಜಿಬಿ ಬಡಾವಣೆ, ಜಯನಗರ 4ನೇ ಬ್ಲಾಕ್‌ನಲ್ಲಿ ಮರ ಉರುಳಿ ಬಿದ್ದಿದ್ದು, ಇನ್ನೂ ಹಲವೆಡೆ ಮರದ ಕೊಂಬೆಗಳು ಮುರಿದು ಬಿದ್ದಿರುವುದು ವರದಿಯಾಗಿದೆ.
ಸಂಜೆಯ ಮಳೆ ಸುರಿದಿದ್ದುದ್ದರಿಂದ ಮನೆ ಸೇರುವ ಧಾವಂತದಲ್ಲಿದ್ದವರು ತೊಂದರೆ ಅನುಭವಿಸಿದರು. ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡಿದರು. ಬೈಕ್ ಸವಾರರು, ಜನರು ಮೇಲ್ಸೆತುವೆ, ಮೆಟ್ರೋ ಮಾರ್ಗದ ಕೆಳಗೆ, ಅಂಗಡಿ ಮುಂಗಟ್ಟುಗಳ ಮುಂದೆ ನಿಂತು ಮಳೆಯಿಂದ ರಕ್ಷಣೆ ಪಡೆದರು. ಬೀದಿ ವ್ಯಾಪಾರಿಗಳ ವ್ಯಾಪಾರಕ್ಕೆ ಕಷ್ಟವಾಯಿತು.
Land Slides: ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೆ ಶುರುವಾಗಿದೆ ಗುಡ್ಡ ಕುಸಿತದ ಆತಂಕ!
ದೇವಸಂದ್ರ 5 ಸೆಂ.ಮೀ, ಗರುಡಾಚಾರ್ ಪಾಳ್ಯ 3.4, ಕೆ.ಆರ್.ಪುರಂ 3.3, ದೊಡ್ಡಾನೆಕುಂದಿ 3.3, ಹೂಡಿ 2.3, ವರ್ತೂರು 2.1, ಬಾಗಲಕುಂಟೆ, ಎಚ್‌ಎಎಲ್ ವಿಮಾನ ನಿಲ್ದಾಣ, ಶೆಟ್ಟಿಹಳ್ಳಿ ತಲಾ 2 ಸೆಂ.ಮೀ, ಹೊರಮಾವು 1.7 ಸೆಂ.ಮೀ, ರಾಮಮೂರ್ತಿ ನಗರ 1.4, ಮಾರತ್ತಹಳ್ಳಿ 1.3, ಎಚ್‌ಎಂಟಿ 1.2, ಹಾಗೂ ಹಗದೂರು 1.1 ಸೆಂ.ಮೀ ಮಳೆ ಸುರಿದಿದೆ.
ಇಂದೂ ಭಾರಿ ಮಳೆ?
ನಗರದಲ್ಲಿ ಭಾನುವಾರ ಭಾರಿ ಮಳೆಯಾಗುವ ಸಂಭವವಿದ್ದು, ಹವಾಮಾನ ಇಲಾಖೆ ಯೆಲ್ಲೋ ಅಲರ್ಚ್ ನೀಡಿದೆ. ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ ಕ್ರಮವಾಗಿ 33 ಮತ್ತು 20 ಡಿಗ್ರಿ ಸೆಲ್ಸಿಯಸ್ ಇರುವ ನಿರೀಕ್ಷೆಯಿದೆ.