ಮಧ್ಯಾಹ್ನ 3.15 ನಿಮಿಷಕ್ಕೆ ಶುರುವಾದ ಮಳೆ ಸಂಜೆ 4 ಗಂಟೆಯವರೆಗೆ ನಿರಂತರವಾಗಿ ಸುರಿಯಿತು. ಇದರಿಂದ ರಸ್ತೆಗಳೆಲ್ಲವೂ ಜಲಾವೃತಗೊಂಡವು. ದಟ್ಟವಾದ ಮೋಡಗಳು ಆವರಿಸಿದ್ದರಿಂಂದ ಮಳೆ ರೌದ್ರಾವತಾರ ತಾಳಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಮೋಡಗಳು ಚದುರಿಹೋಗಿದ್ದರಿಂದ ಮಳೆ ಹೆಚ್ಚು ಬಿರುಸನ್ನು ಪಡೆದುಕೊಳ್ಳಲಿಲ್ಲ.
ಮಂಡ್ಯ(ಜೂ.22): ನಗರದಲ್ಲಿ ಬುಧವಾರ ಮಧ್ಯಾಹ್ನ ಮುಂಗಾರು ಮಳೆ ಜೋರಾಗಿಯೇ ಸುರಿಯಿತು. ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಮಳೆ ಸುರಿದು ತಂಪನೆರೆಯಿತು. ಮಳೆಯನ್ನೇ ಕಾಣದಂತಾಗಿದ್ದ ನಗರದ ಜನರಿಗೆ ಇಂದಿನ ವರ್ಷಧಾರೆ ಹಿತಕರವಾದ ವಾತಾವರಣವನ್ನು ಉಂಟುಮಾಡಿತು.
ಮಧ್ಯಾಹ್ನ 3.15 ನಿಮಿಷಕ್ಕೆ ಶುರುವಾದ ಮಳೆ ಸಂಜೆ 4 ಗಂಟೆಯವರೆಗೆ ನಿರಂತರವಾಗಿ ಸುರಿಯಿತು. ಇದರಿಂದ ರಸ್ತೆಗಳೆಲ್ಲವೂ ಜಲಾವೃತಗೊಂಡವು. ದಟ್ಟವಾದ ಮೋಡಗಳು ಆವರಿಸಿದ್ದರಿಂಂದ ಮಳೆ ರೌದ್ರಾವತಾರ ತಾಳಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಮೋಡಗಳು ಚದುರಿಹೋಗಿದ್ದರಿಂದ ಮಳೆ ಹೆಚ್ಚು ಬಿರುಸನ್ನು ಪಡೆದುಕೊಳ್ಳಲಿಲ್ಲ.
undefined
ಮಳೆರಾಯನ ಆರ್ಭಟಕ್ಕೆ ಪರದಾಡಿದ ಬೆಂಗ್ಳೂರಿನ ಜನ..!
ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ಜನರಿಗೆ ಬುಧವಾರ ಸುರಿದ ಮಳೆ ಸಮಾಧಾನವನ್ನು ತಂದಿದೆ. ಮುಂದಿನ ದಿನಗಳಲ್ಲಿ ಮುಂಗಾರು ಬಿರುಸನ್ನು ಪಡೆದುಕೊಂಡರೆ ಕೃಷಿ ಚಟುವಟಿಕೆಗಳು ಚುರುಕನ್ನು ಪಡೆದುಕೊಳ್ಳಲಿದೆ.