ಬೆಂಗಳೂರಲ್ಲಿ ಇಂದೂ ಕೂಡ ಭಾರೀ ಮಳೆ ಸಾಧ್ಯತೆ

By Kannadaprabha NewsFirst Published Oct 22, 2020, 8:08 AM IST
Highlights

ಬೆಂಗಳೂರಿಗೆ ಇಂದು ‘ಯೆಲ್ಲೋ ಅಲರ್ಟ್‌’| ಬಂಗಾಳಕೊಲ್ಲಿಯಲ್ಲಿ ಗಾಳಿಯ ತೀವ್ರತೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ಮಳೆ ಕ್ಷಿಣ| ಅ.23ರಂದು ನಗರದಲ್ಲಿ ಮಳೆ ತಗ್ಗುವ ನಿರೀಕ್ಷೆ ಇದ್ದು, ಕೆಲವು ಬಡಾವಣೆಗಳಲ್ಲಿ ಮಾತ್ರ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆ ಬರಬಹುದು. ಜೊತೆಗೆ ಎಲ್ಲೆಡೆ ಮೋಡ ಕವಿದ ಹಾಗೂ ಚಳಿಯ ವಾತಾವರಣ ಇರಲಿದೆ| 

ಬೆಂಗಳೂರು(ಅ.22): ಕಳೆದ ಮೂರು ದಿನದಿಂದ ನಗರದಲ್ಲಿ ಅಬ್ಬರಿಸುತ್ತಿರುವ ವರುಣ ಇಂದೂ ಕೂಡ(ಗುರುವಾರ) ಆರ್ಭಟಿಸುವ ಸಾಧ್ಯತೆ ಇದೆ.

ಅ.22ರಂದು ನಗರದಲ್ಲಿ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆ ಬೀಳಲಿದೆ. ಮಂಗಳವಾರ ತಡರಾತ್ರಿ ಅಂದಾಜು 70 ಮಿ.ಮೀ ನಷ್ಟು ಮಳೆ ಬಂದಿತ್ತು. ಅದೇ ರೀತಿ ಗುರುವಾರವೂ ಮಳೆ ಬರುವ ಸಾಧ್ಯತೆ ಇದೆ. ಈ ಕಾರಣದಿಂದ ಬೆಂಗಳೂರು ನಗರ ಜಿಲ್ಲೆಗೆ ‘ಯೆಲ್ಲೋ ಅಲರ್ಟ್‌’ ಎಚ್ಚರಿಕೆ ನೀಡಲಾಗಿದೆ.

‘ಮಹಾಮಳೆ’ಗೆ ತೊಯ್ದು ತೊಪ್ಪೆಯಾದ ಬೆಂಗ್ಳೂರು: 23 ವರ್ಷದ 3ನೇ ಮಹಾಮಳೆ

ಬಂಗಾಳಕೊಲ್ಲಿಯಲ್ಲಿ ಗಾಳಿಯ ತೀವ್ರತೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಮಳೆ ಕ್ಷಿಣಿಸಲಿದೆ. ಆದ್ದರಿಂದ ಅ.23ರಂದು ನಗರದಲ್ಲಿ ಮಳೆ ತಗ್ಗುವ ನಿರೀಕ್ಷೆ ಇದ್ದು, ಕೆಲವು ಬಡಾವಣೆಗಳಲ್ಲಿ ಮಾತ್ರ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆ ಬರಬಹುದು. ಜೊತೆಗೆ ಎಲ್ಲೆಡೆ ಮೋಡ ಕವಿದ ಹಾಗೂ ಚಳಿಯ ವಾತಾವರಣ ಇರಲಿದೆ.

ಬುಧವಾರ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣದ ಜೊತೆಗೆ ಆಗಾಗ ಬಿಸಿಲು ಕಂಡು ಬಂತು. ಮಧ್ಯಾಹ್ನದ ನಂತರ ವಿಜಯನಗರ, ಹಂಪಿನಗರ, ಅತ್ತಿಗುಪ್ಪೆ, ಆರ್‌.ಆರ್‌.ನಗರ, ನೆಲಗುಳಿ, ಕಾಡುಗೋಡಿ, ಹಗದೂರು, ದೇವನಹಳ್ಳಿಯ ಕೊಯಿರಾ ಭಾಗದಲ್ಲಿ ತುಂತು ಮಳೆ ಬಿದ್ದಿದೆ. ಇದರ ಹೊರತು ಎಲ್ಲಿಯೂ ಅಷ್ಟಾಗಿ ಮಳೆ ದಾಖಲಾದ ಬಗ್ಗೆ ವರದಿಯಾಗಿಲ್ಲ.
 

click me!