ಶಿರಾ : ಒಂದೆಡೆ ಚುನಾವಣೆ ಅಬ್ಬರ -ಇನ್ನೊಂದೆಡೆ ರೈತರು ಕಂಗಾಲು

Kannadaprabha News   | Asianet News
Published : Oct 22, 2020, 07:30 AM IST
ಶಿರಾ : ಒಂದೆಡೆ ಚುನಾವಣೆ ಅಬ್ಬರ -ಇನ್ನೊಂದೆಡೆ ರೈತರು ಕಂಗಾಲು

ಸಾರಾಂಶ

ತುಮಕೂರು ಜಿಲ್ಲೆಯಲ್ಲಿ ಒಂದೆಡೆ ಚುನಾವಣಾ ಅಬ್ಬರ ಜೋರಾಗಿದ್ದರೆ ಇನ್ನೊಂದೆಡೆ ಅನ್ನದಾತರು ಕಂಗಾಲಾಗಿದ್ದಾರೆ

ತುಮಕೂರು(ಅ.22): ಒಂದು ಕಡೆ ಉಪಚುನಾವಣೆಯ ಅಬ್ಬರದಲ್ಲಿ ಶಿರಾ ಮುಳುಗೇಳುತ್ತಿದ್ದರೆ ಮತ್ತೊಂದೆಡೆ ಬಿದ್ದ ಭಾರಿ ಮಳೆಗೆ ಶೇಂಗಾ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿ ಅನ್ನದಾತ ಕಣ್ಣೀರಿಡುವ ಪರಿಸ್ಥಿತಿ ನಿರ್ಮಾಣವಾಗಿದೆ. 

ಮಳೆ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ಶೇಂಗಾ ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದು ಕೊಚ್ಚಿ ಹೋಗುತ್ತಿರುವ ಕಡ್ಲೆಕಾಯಿಯನ್ನು ಕೈಯಲ್ಲೇ ತಡೆ ಹಿಡಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಮಳೆ ನಿಂತರೂ ತಗ್ಗದ ಪ್ರವಾಹ; ಉತ್ತರ ಕರ್ನಾಟಕ ಭಾಗದ ಜನರ ಸ್ಥಿತಿ ಹರೋಹರ

ರೈತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸದ ರಾಜಕೀಯ ಮುಖಂಡರ ವಿರುದ್ಧ ರೈತರ ಸಮುದಾಯ ಅಸಮಾಧಾನಗೊಂಡಿದ್ದಾರೆ. ಮಳೆಯಿಂದ ಹಾಗೂ ಹೀಗೂ ಉಳಿದುಕೊಂಡ ಶೇಂಗಾ ಬೆಳೆಗೆ ಬೆಂಬಲ ಬೆಲೆಯೂ ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ. 

ಮಾರುಕಟ್ಟೆಆವರಣದಲ್ಲಿ ಮಳೆ ನೀರಿನ ಜೊತೆ ಹರಿದು ಹೋಗುತ್ತಿದ್ದ ಶೇಂಗಾ ಕಾಯಿಯನ್ನು ಕೆಲ ರೈತರು ಪೂರಕೆಗಳಿಂದ ಗುಡಿಸಿ ಪುನಃ ಗುಡ್ಡೆ ಹಾಕಿಕೊಳ್ಳುತ್ತಿದ್ದರೆ ಇನ್ನೊಂದೆಡೆ ಕೆಲ ರೈತರು ಖಾಲಿ ಗೋಣಿ ಚೀಲಗಳಿಂದ ಶೇಂಗಾ ರಕ್ಷಣೆ ಮಾಡಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

PREV
click me!

Recommended Stories

Uttara Kannada: ಆಸ್ಪತ್ರೆಗೆ ಹೋಗಿದ್ದ ಗರ್ಭಿಣಿ ಹುಟ್ಟುಹಬ್ಬದಂದೇ ಸಾವು; ಹೊಟ್ಟೆಯಲ್ಲೇ ಅಸುನೀಗದ ಮಗು!
ಯಕ್ಷಗಾನ ಕಲಾವಿದರ ಅಪಮಾನ: 'ಬಿಳಿಮಲೆಗೆ ಒಂದು ನೋಟಿಸ್ ಕೊಡೋಕೂ ಕಷ್ಟವೇ? ಸುನೀಲ್ ಕುಮಾರ್ ಪ್ರಶ್ನೆ, ಈ ವಿಷಯ ದೊಡ್ಡದು ಮಾಡೋದು ಬೇಡ ಎಂದ ತಂಗಡಗಿ