ಶಿವಮೊಗ್ಗದಲ್ಲಿ ಭಾರೀ ಮಳೆ : ಜಲಾಶಯದಲ್ಲಿ ಏರಿದ ನೀರಿನ ಮಟ್ಟ

Published : Sep 20, 2020, 02:36 PM ISTUpdated : Sep 20, 2020, 03:39 PM IST
ಶಿವಮೊಗ್ಗದಲ್ಲಿ ಭಾರೀ ಮಳೆ : ಜಲಾಶಯದಲ್ಲಿ ಏರಿದ ನೀರಿನ ಮಟ್ಟ

ಸಾರಾಂಶ

ರಾಜ್ಯದ ಹಲವೆಡೆ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಮಲೆನಾಡು ಪ್ರದೇಶಗಳಲ್ಲಿಯೂ ಮಳೆಯ ಪ್ರಮಾಣ ಹೆಚ್ಚಿದೆ. 

ಶಿವಮೊಗ್ಗ  (ಸೆ.20): ಮಲೆನಾಡು ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಜನಜೀವನ ತತ್ತರಿಸಿದೆ. ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆಯ ಆರ್ಭಟ ಹೆಚ್ಚಿದೆ. 

ಭದ್ರಾ ಜಲಾಶಯದಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದ್ದು, ಒಟ್ಟು 50 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.

ಈ ಬಗ್ಗೆ ಬಿಆರ್‌ಪಿ ಎಇಇ ಮಂಜುನಾಥ್ ಮಾಹಿತಿ ನೀಡಿದ್ದು, ಈ ಮೊದಲು ಕ್ರಸ್ಟ್ ಗೇಟ್ ಮೂಲಕ 10 ಸಾವಿರ ಕ್ಯೂಸೆಕ್ಸ್ ನೀರು ಹೊರಬಿಡಲಾಗಿದ್ದು, ಮತ್ತೆ 30 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ ಎಂದು ಹೇಳಿದ್ದಾರೆ. 

ಭಾರೀ ಮಳೆ : ಕೃಷ್ಣ ಮಠಕ್ಕೆ ನುಗ್ಗಿದ ನೀರು, ಪ್ರವಾಹ ಸದೃಶ ವಾತಾವರಣ
 
 ಒಳಹರಿವಿನ ಪ್ರಮಾಣ ಹೆಚ್ಚಳವಾಗಿದ್ದು, ಮತ್ತೆ  45 ಸಾವಿರ ಕ್ಯೂಸೆಕ್ಸ್ ನೀರನ್ನು ಕ್ರಸ್ಟ್ ಗೇಟ್ ಮೂಲಕ ಬಿಡಲಾಗುತ್ತಿದೆ. ಇನ್ನು ಇದೇ ವೇಳೆಯಲ್ಲಿ 5 ಕ್ಯೂಸೆಕ್ ನೀರನ್ನು ಕೆನಾಲ್ ಮೂಲಕ ಹರಿಸಲಾಗುತ್ತಿದೆ ಎಂದರು. 

ಮಲೆನಾಡು ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಪರಿಣಾಮ  ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದ್ದು, ಕಳೆದ  24 ಗಂಟೆಯಲ್ಲಿ  50 ಸಾವಿರ ನಿರು ಹರಿದು ಬಂದಿದೆ.

"

PREV
click me!

Recommended Stories

Fake Doccument: ನಕಲಿ ದಾಖಲೆ ಸೃಷ್ಟಿಸಿ 5 ಕೋಟಿಯ 7 ಎಕರೆ ಜಮೀನು ಮಾರಾಟ; ಸಬ್ ರಿಜಿಸ್ಟ್ರಾರ್ ಕಚೇರಿಗೆ ಮುಗಿಬಿದ್ದ ಸಂತ್ರಸ್ತರು!
ಕೋಟೆಹುಂಡಿ ಸರ್ಕಾರಿ ಶಾಲೆಗೆ ₹32 ಲಕ್ಷ ಖರ್ಚು; ಅಭಿವೃದ್ಧಿ ಮಾಡಿದ ಮಹಿಳೆಗೆ 'ನೀವ್ಯಾರು' ಎಂದು ಕೇಳಿದ್ಯಾರು?