ಉಡುಪಿಯಲ್ಲಿ ಭಾರೀ ಮಳೆ: ಹತ್ತಾರು ಮನೆಯೊಳಗೆ ನೀರು

Kannadaprabha News   | Asianet News
Published : May 17, 2020, 08:25 AM IST
ಉಡುಪಿಯಲ್ಲಿ ಭಾರೀ ಮಳೆ: ಹತ್ತಾರು ಮನೆಯೊಳಗೆ ನೀರು

ಸಾರಾಂಶ

ಉಡುಪಿ- ಕಾರ್ಕಳ ರಾಷ್ಟ್ರೀಯ ಹೆದ್ದಾರಿ 169ಎ ಕಾಮಗಾರಿಯ ಆಮೆಗತಿಯಿಂದಾಗಿ ಶುಕ್ರವಾರ ಸುರಿದ ಮಳೆಯ ನೀರು ಇಲ್ಲಿನ ಬಾಸೆಲ್‌ ಮಿಷನ್‌ ಶಾಲಾ ಬಳಿಯ ಹತ್ತಾರು ಮನೆಗಳೊಳಗೆ ನುಗ್ಗಿ ಆವಾಂತರ ಸೃಷ್ಟಿಸಿದೆ.

ಉಡುಪಿ(ಮೇ 17): ಉಡುಪಿ- ಕಾರ್ಕಳ ರಾಷ್ಟ್ರೀಯ ಹೆದ್ದಾರಿ 169ಎ ಕಾಮಗಾರಿಯ ಆಮೆಗತಿಯಿಂದಾಗಿ ಶುಕ್ರವಾರ ಸುರಿದ ಮಳೆಯ ನೀರು ಇಲ್ಲಿನ ಬಾಸೆಲ್‌ ಮಿಷನ್‌ ಶಾಲಾ ಬಳಿಯ ಹತ್ತಾರು ಮನೆಗಳೊಳಗೆ ನುಗ್ಗಿ ಆವಾಂತರ ಸೃಷ್ಟಿಸಿದೆ.

ಕಳೆದೆರಡು ವರ್ಷಗಳಿಂದ ಈ ರಾ.ಹೆ.ಯ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು, ರಸ್ತೆಯನ್ನು ಹಿಂದಿನ ನೆಲಮಟ್ಟದಿಂದ ನಾಲ್ಕೈದು ಅಡಿ ಎತ್ತರಿಸಲಾಗಿದೆ. ನೀರು ಹರಿಯುವ ಚರಂಡಿಯನ್ನು ಪೂರ್ಣಗೊಳಿಸದೆ, ನೀರು ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದೆ.

ಹಿಂದಿನ ತಿಂಗಳ ವಿದ್ಯುತ್‌ ಬಿಲ್ ಸರಾಸರಿ ಆಧಾರದ ಮೇಲೆ ಈ ತಿಂಗಳ ಬಿಲ್

ಮನೆಯೊಳಗಿನ ಕೋಣೆ, ಅಡುಗಮನೆಗೂ ನೀರು ನುಗ್ಗಿ ವಸ್ತುಗಳೆಲ್ಲಾ ಒದ್ದೆಯಾಗಿವೆ, ಪಾತ್ರೆ ಪಗಡಿಗಳು ನೀರಿನಲ್ಲಿ ತೇಲುತ್ತಿದ್ದು, ರಾತ್ರಿ ಮತ್ತೆ ಮಳೆ ಸುರಿದರೆ ಜನರು ಮಲಗುವುದಕ್ಕೂ ಸಾಧ್ಯವಾಗದಂತಾಗಿದೆ. ಮಳೆಗಾಲದಲ್ಲಿ ಈ ಸಮಸ್ಯೆಯ ಸಾಧ್ಯತೆಯ ಬಗ್ಗೆ ಇಲ್ಲಿನ ಜನರು ಅಧಿಕಾರಿಗಳ ಗನಮಕ್ಕೆ ತಂದಿದ್ದರೂ ಕಾಮಗಾರಿ ತ್ವರಿತಗೊಳಿಸದೆ, ಜನರ ಬವಣೆಗೆ ಕಾರಣರಾಗಿದ್ದಾರೆ. ಪೂರ್ಣ ಮುಂಗಾರು ಆರಂಭವಾದಲ್ಲಿ ಇಲ್ಲಿನ ಹಲವಾರು ಮನೆಗಳು ನೀರಿನಲ್ಲಿ ಮುಳುಗುವ, ಕುಸಿದು ಬೀಳುವ ಅಪಾಯವಿದೆ.

PREV
click me!

Recommended Stories

ವನ್ಯಜೀವಿ ಸಂರಕ್ಷಣೆ: ಏಷ್ಯಾನೆಟ್ ಸುವರ್ಣ ನ್ಯೂಸ್ & ಕನ್ನಡಪ್ರಭದ ಅಭಿಯಾನಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಸಾಥ್!
ಚಿಕ್ಕಮಗಳೂರು: ಹೈಟೆಕ್ ಕಾರ್‌ನಲ್ಲಿ ಗೋ ಕಳ್ಳತನ; ಸಿನಿಮೀಯ ಶೈಲಿಯಲ್ಲಿ ಹಿಂದೂಪರ ಸಂಘಟನೆ ಕಾರ್ಯಕರ್ತರಿಂದ ಚೇಸಿಂಗ್!