ಶಿವಮೊಗ್ಗದಲ್ಲಿ ಮತ್ತೆ ಚುರುಕುಗೊಂಡ ಮುಂಗಾರು

Published : Jul 26, 2019, 09:54 AM IST
ಶಿವಮೊಗ್ಗದಲ್ಲಿ ಮತ್ತೆ  ಚುರುಕುಗೊಂಡ ಮುಂಗಾರು

ಸಾರಾಂಶ

ಕೆಲ ದಿನಗಳಿಂದ ಕುಂಠಿತಗೊಂಡಿದ್ದ ಮಳೆ ಸ್ವಲ್ಪಮಟ್ಟಿಗೆ ಚುರುಕಾಗಿದ್ದು, ತೀರ್ಥಹಳ್ಳಿ, ಹೊಸನಗರ, ಸಾಗರ ಹಾಗೂ ಸೊರಬ, ಭದ್ರಾವತಿಯಲ್ಲಿ ಮಳೆಯಾಗಿದೆ. ಆರಂಭದಲ್ಲಿ ಮಳೆಯಾಗಿದ್ದರೂ ಕೆಲವು ದಿನಗಳ ಹಿಂದೆ ಮಳೆ ಕುಂಠಿತಗೊಂಡಿತ್ತು. ಇದೀಗ ಮಲೆನಾಡಿನಲ್ಲಿ ಮುಂಗಾರು ಮತ್ತೆ ಚುರುಕುಗೊಂಡಿದೆ.

ಶಿವಮೊಗ್ಗ(ಜು.26): ಕೆಲ ದಿನಗಳಿಂದ ಕುಂಠಿತಗೊಂಡಿದ್ದ ಮಳೆ ಸ್ವಲ್ಪಮಟ್ಟಿಗೆ ಚುರುಕಾಗಿದ್ದು, ತೀರ್ಥಹಳ್ಳಿ, ಹೊಸನಗರ, ಸಾಗರ ಹಾಗೂ ಸೊರಬ, ಭದ್ರಾವತಿಯಲ್ಲಿ ಮಳೆಯಾಗಿದೆ. ಆರಂಭದಲ್ಲಿ ಮಳೆ ಸುರಿದಿದ್ದರೂ ನಂತರದ ದಿನಗಳಲ್ಲಿ ಮಳೆ ಪ್ರಮಾಣ ಕುಂಠಿತವಾಗಿತ್ತು. ಇದೀಗ ಮತ್ತೆ ಮುಂಗಾರು ಚುರುಕುಗೊಂಡಿರುವುದು ಮಲೆನಾಡಿಗರಲ್ಲಿ ಸಂತಸ ತಂದಿದೆ.

ಶಿವಮೊಗ್ಗ ನಗರದಲ್ಲಿ ಮಧ್ಯಾಹ್ನದ ನಂತರ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಸಂಜೆಯ ವೇಳೆಗೆ ಮಳೆಯಾಗಿದೆ. ಲಿಂಗನಮಕ್ಕಿ ಜಲಾಶಯಕ್ಕೆ 15,323 ಸಾವಿರ ಕ್ಯುಸೆಕ್‌ ಹಾಗೂ ಭದ್ರಾ ಜಲಾಶಯಕ್ಕೆ 4, 842 ಸಾವಿರ ಕ್ಯುಸೆಕ್‌, ತುಂಗಾ ಜಲಾಶಯಕ್ಕೆ 10, 648 ಕ್ಯುಸೆಕ್‌ ನೀರು ಹರಿದು ಬರುತ್ತಿದೆ.
ತರೀಕೆರೆ: ತಾಲೂಕಿನಾದ್ಯಂತ ಕುಡಿವ ನೀರಿಗೆ ಹಾಹಾಕಾರ

ಗುರುವಾರ ಬೆಳಗ್ಗೆ 8ರ ವರೆಗೆ ಶಿವಮೊಗ್ಗ 9 ಮಿ.ಮೀ., ಭದ್ರಾವತಿ 19 ಮಿ.ಮೀ., ತೀರ್ಥಹಳ್ಳಿ 25.40 ಮಿ.ಮೀ., ಸಾಗರ 13 ಮಿ.ಮೀ., ಶಿಕಾರಿಪುರ 2.80 ಮಿ.ಮೀ., ಸೊರಬ 11.20 ಮಿ.ಮೀ ಹಾಗೂ ಹೊಸನಗರ 15.40 ಮಿ.ಮೀ., ಮಳೆಯಾಗಿದೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV
click me!

Recommended Stories

ಅಣ್ಣನ ಮನೆ ಹಾಳು ಮಾಡಲು ಹೋದ ಕನ್ನಡಿಗನಿಗೆ ಕ್ಷಣಾರ್ಧದಲ್ಲಿ ತಿರುಗಿಸಿಕೊಟ್ಟ ಕರ್ಮ; Karma Returns!
ಸಕ್ಕರೆ ಕಾರ್ಖಾನೆ ಬಾಯ್ಲರ್‌ ಸ್ಫೋಟ ಕೇಸ್‌ನಲ್ಲಿ ಸಾವಿನ ಸಂಖ್ಯೆ 8ಕ್ಕೇರಿಕೆ