ಬಾಗೇಪಲ್ಲಿಯಲ್ಲಿ ಮಳೆ: ಸಂಚಾರ ಅಸ್ತವ್ಯಸ್ತ

By Kannadaprabha News  |  First Published Oct 6, 2019, 3:15 PM IST

ಬಾಗೇಪಲ್ಲಿಯ ಹಲವು ಕಡೆ ಭಾರೀ ಮಳೆಯಾಗಿದ್ದು, ಬಾಗೇಪಲ್ಲಿಯಲ್ಲಿ ಸುರಿದ ಮಳೆಯಿಂದಾಗಿ ಡಾ. ಎಚ್‌.ಎನ್‌ ವೃತ್ತದಲ್ಲಿ ಮಳೆಯ ನೀರು ಆವೃತಗೊಂಡು, ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಚರಂಡಿ ಮತ್ತು ರಸ್ತೆಗಳ ಮೂಲಕ ಹರಿದು ಬರುವ ಮಳೆಯ ನೀರು ನಿಂತು ಕೆರೆಯಂತಾಗುತ್ತದೆ.


ಚಿಕ್ಕಬಳ್ಳಾಪುರ(ಅ.06): ಶನಿವಾರ ಸಂಜೆ ಸುರಿದ ಮಳೆಯಿಂದಾಗಿ ಪಟ್ಟಣದ ಡಾ. ಎಚ್‌.ಎನ್‌ ವೃತ್ತದಲ್ಲಿ ಮಳೆಯ ನೀರು ಆವೃತಗೊಂಡು, ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಇಲ್ಲಿನ ಮೋರಿ ದುರಸ್ತಿಗೊಳಿಸುವಲ್ಲಿ ನಿರ್ಲಕ್ಷ್ಯ ಮಾಡುತ್ತಿರುವ ಲೋಕೋಪಯೋಗಿ, ಪುರಸಭೆ ಸೇರಿದಂತೆ ಜನಪ್ರತಿಧಿಗಳಿಗೆ ಸಾರ್ವಜನಿಕರು ಹಿಡಿಶಾಪ ಹಾಕಿದರು.

ದಶಕದಿಂದ ಇದೇ ಸಮಸ್ಯೆ

Tap to resize

Latest Videos

ಮಳೆ ಬಂದ ಪ್ರತಿ ಬಾರಿಯೂ ಪಟ್ಟಣದ ಡಾ.ಎಚ್‌.ಎನ್‌ ವೃತ್ತದಲ್ಲಿ ಚರಂಡಿ ಮತ್ತು ರಸ್ತೆಗಳ ಮೂಲಕ ಹರಿದು ಬರುವ ಮಳೆಯ ನೀರು ನಿಂತು ಕೆರೆಯಂತಾಗುತ್ತದೆ. ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಸೇರಿದಂತೆ ಸಾರ್ವಜನಿಕರು ಕಳೆದ ಸುಮಾರು 10 ವರ್ಷಗಳಿಂದಲ್ಲೂ ಇದೇ ಸಮಸ್ಯೆ ಅನುಭವಿಸುತ್ತಿದ್ದರೂ ಸಮಸ್ಯೆಗೂ ತಮಗೂ ಯಾವುದೇ ಸಂಬಂಧ ಇಲ್ಲ ಎನ್ನುವಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಚರಂಡಿ ಅವೈಜ್ಞಾನಿಕ ನಿರ್ಮಾಣ

ಪಟ್ಟಣದ ಡಾ.ಎಚ್‌.ಎನ್‌ ವೃತ್ತದಲ್ಲಿ ನಿರ್ಮಿಸಿರುವ ಚರಂಡಿ ಅವೈಜ್ಞಾನಿಕವಾಗಿದೆ, ಇಲ್ಲಿ ಚರಂಡಿ ನಿರ್ಮಿಸುವ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಹಾಗೂ ಗುತ್ತಿಗೇದಾರರ ನಿರ್ಲಕ್ಷ್ಯದಿಂದ ಕಲ್ಲು ಸೇರಿದಂತೆ ಚರಂಡಿ ಕಾಮಗಾರಿಗೆ ಉಪಯೋಗಿಸಿದ್ದ ಹಲವು ಉಪಕರಣಗಳನ್ನು ತೆರವುಗೊಳಿಸದ ಪರಿಣಾಮ ನಾನಾ ಕಡೆಗಳಲ್ಲಿನ ಚರಂಡಿಯ ಕೊಳಚೆ ನೀರು ಹಾಗೂ ಮಳೆಯ ನೀರು ಸರಾಗವಾಗಿ ಹರಿಯದೆ ರಸ್ತೆ ಮೂಲಕ ಇಲ್ಲಿ ಸಂಗ್ರಹವಾಗುತ್ತಿದೆ.

ತಂತಿ ನಡಿಗೆ: ವಯಸ್ಸಾಗಿದೆ, ಜಾರಿ ಬಿದ್ದೀರಿ..! ಬಿಎಸ್‌ವೈಗೆ ಸಿದ್ದು ಟಾಂಗ್..!

ಇದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ತಕ್ಷಣ ಸಂಬಂಧಪಟ್ಟಅಧಿಕಾರಿಗಳು ಇತ್ತ ಗಮನಹರಿಸಿ ಇಲ್ಲಿನ ಚರಂಡಿಯಲ್ಲಿ ಬಿಟ್ಟಿರುವ ಕಲ್ಲು, ನಾನಾ ತ್ಯಾಜ್ಯ ಸೇರಿದಂತೆ ಚರಂಡಿಗೆ ಉಪಯೋಗಿಸಿದ್ದ ಉಪಕರಣಗಳನ್ನು ತೆರವುಗೊಳಿಸುವ ಮೂಲಕ ಚರಂಡಿಯನ್ನು ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಆಗುತ್ತಿರುವ ಕಿರಿಕಿರಿಯಿಂದ ತಪ್ಪಿಸುವಂತೆ ಸಾರ್ವಜನಿಕರು ಆಗ್ರಹಿಸಿದರು.

ಯೂಟ್ಯೂಬ್ ನೋಡಿ ಕಳ್ಳತನಕ್ಕಿಳಿದ ಖತರ್ನಾಕ್ ಕಳ್ಳರು

click me!