ಉತ್ತರಕನ್ನಡದಲ್ಲಿ ಭಾರೀ ಮಳೆ: ರಸ್ತೆಗಳು ಜಲಾವೃತ, ಪರದಾಡಿದ ಜನ..!

By Girish Goudar  |  First Published Jul 5, 2023, 3:30 AM IST

ಕಾರವಾರದ ಹಬ್ಬುವಾಡದಲ್ಲಿರುವ ಸರಕಾರಿ ಬಸ್ ನಿಲ್ದಾಣ ಡಿಪೋ ಕಚೇರಿಯೊಳಗೂ ಮಳೆ‌ ನೀರು ಹೊಕ್ಕಿದ್ದು, ಡಿಪೋ ಕಚೇರಿಯ ಎಲೆಕ್ಟ್ರಾನಿಕ್ ವಸ್ತುಗಳು, ದಾಖಲೆಗಳು ನೀರು ಪಾಲಾಗಿವೆ. ಇನ್ನು ಅಂಕೋಲಾ, ಕುಮಟಾ, ಹೊನ್ನಾವರದಲ್ಲೂ ಭಾರೀ ಮಳೆಯಾಗಿದ್ದು, ಭಟ್ಕಳ ತಾಲೂಕಿನಲ್ಲಂತೂ ರಾಷ್ಟ್ರೀಯ ಹೆದ್ದಾರಿ 66 ಸಂಶುದ್ಧೀನ್ ಸರ್ಕಲ್‌, ರಂಗಿನಕಟ್ಟೆ ಹಾಗೂ ಮಣ್ಕುಳಿ ಸೇರಿದಂತೆ ಮೂರು-ನಾಲ್ಕು ಕಡೆಗಳಲ್ಲಿ ನೀರು ನಿಂತು 2-3 ತಾಸುಗಳ ಕಾಲ ಸಂಚಾರ ವ್ಯತ್ಯಯವಾಗಿತ್ತು. 

ಬೆಂಗಳೂರು(ಜು.05):  ಉತ್ತರಕನ್ನಡ ಜಿಲ್ಲೆಯ ಹಲವೆಡೆ ಅಬ್ಬರದ ಮಳೆಯಾಗುತ್ತಿದ್ದು, ಭಾರೀ ಮಳೆಗೆ ಕಾರವಾರ, ಭಟ್ಕಳ ನಗರ ರಸ್ತೆಗಳು ಜಲಾವೃತಗೊಂಡಿವೆ.‌ ಕಾರವಾರ ನಗರದ ರೈಲ್ವೆ ನಿಲ್ದಾಣಕ್ಕೆ ಸಾಗುವ ರಸ್ತೆ, ಹಬ್ಬುವಾಡ, ಕೆಎಚ್‌ಬಿ ಕಾಲೋನಿ, ಶಿರವಾಡ ರಸ್ತೆ, ಗುನಗಿ ವಾಡ ರಸ್ತೆಗಳು ಜಲಾವೃತವಾಗಿದ್ದು, ನಗರದ ತಗ್ಗು ಪ್ರದೇಶದಲ್ಲಿ ಮಳೆ ನೀರು ನುಗ್ಗಿದೆ. ಚರಂಡಿ ವ್ಯವಸ್ಥೆ ಸರಿಯಾಗಿಲ್ಲದ ಕಾರಣ ನಗರದ ರಸ್ತೆಯಲ್ಲೇ ಮಳೆ‌ ನೀರು ತುಂಬಿಕೊಂಡಿದ್ದು, ಹೆಚ್ಚಿನ ಮಳೆಯಾದಲ್ಲಿ ಸೋನಾರವಾಡ, ಎಲ್.ಐಸಿ ಕಾಲೋನಿ, ಗುನಿಗಿ ವಾಡ, ಸೋನಾರವಾಡದಲ್ಲಿ ಮನೆಗಳಿಗೆ ಹಾಗೂ ಹೋಟೆಲ್‌ಗಳಿಗೆ ನೀರು ಹೊಕ್ಕುವ ಆತಂಕವಿದೆ.

ಕಾರವಾರದ ಹಬ್ಬುವಾಡದಲ್ಲಿರುವ ಸರಕಾರಿ ಬಸ್ ನಿಲ್ದಾಣ ಡಿಪೋ ಕಚೇರಿಯೊಳಗೂ ಮಳೆ‌ ನೀರು ಹೊಕ್ಕಿದ್ದು, ಡಿಪೋ ಕಚೇರಿಯ ಎಲೆಕ್ಟ್ರಾನಿಕ್ ವಸ್ತುಗಳು, ದಾಖಲೆಗಳು ನೀರು ಪಾಲಾಗಿವೆ. ಇನ್ನು ಅಂಕೋಲಾ, ಕುಮಟಾ, ಹೊನ್ನಾವರದಲ್ಲೂ ಭಾರೀ ಮಳೆಯಾಗಿದ್ದು, ಭಟ್ಕಳ ತಾಲೂಕಿನಲ್ಲಂತೂ ರಾಷ್ಟ್ರೀಯ ಹೆದ್ದಾರಿ 66 ಸಂಶುದ್ಧೀನ್ ಸರ್ಕಲ್‌, ರಂಗಿನಕಟ್ಟೆ ಹಾಗೂ ಮಣ್ಕುಳಿ ಸೇರಿದಂತೆ ಮೂರು-ನಾಲ್ಕು ಕಡೆಗಳಲ್ಲಿ ನೀರು ನಿಂತು 2-3 ತಾಸುಗಳ ಕಾಲ ಸಂಚಾರ ವ್ಯತ್ಯಯವಾಗಿತ್ತು. 

Tap to resize

Latest Videos

undefined

ಚಿಕ್ಕಮಗಳೂರಲ್ಲಿ ವರುಣನ ಅಬ್ಬರಕ್ಕೆ ಧರೆಗುರುಳಿದ ಮರಗಳು: ಮುಂದಿನ 3 ದಿನ ಭಾರೀ ಮಳೆ..!

ವಾಹನ ಸವಾರರಂತೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಲಾರದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ದ್ವಿಚಕ್ರ ವಾಹನ ಹಾಗೂ ಲಘು ವಾಹನಗಳ ಸೈಲೆನ್ಸರ್ ಒಳಗೆ ನೀರು ಹೋದ ಕಾರಣ ನೀರಿನಲ್ಲಿಯೇ ಬಂದ್ ಬಿದ್ದು ಅಧ್ವಾನವಾದ ಪ್ರಸಂಗ ಕೂಡಾ ನಡೆಯಿತು. ಅಲ್ಲದೇ, ಭಟ್ಕಳದ‌ಲ್ಲಿ ತಗ್ಗು ಪ್ರದೇಶಗಳಲ್ಲೂ ನೀರು ಹೊಕ್ಕಿದ್ದರಿಂದ ಅನೇಕ ಮನೆಗಳಿಗೆ ನೀರು ನುಗ್ಗಿದ್ದು, ಜನರು ಸಂಕಷ್ಟಕ್ಕೀಡಾಗಿದ್ದಾರೆ. 

click me!