
ರಾಯಚೂರು (ಸೆ.04): ಕಾರು ಮತ್ತು ಲಾರಿ ಮುಖಾ ಮುಖಿ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವಿಗೀಡಾದ ಘಟನೆ ರಾಯಚೂರಿನಲ್ಲಿ ನಡೆದಿದೆ.
ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಚಿಂಚೋಡಿಯಲ್ಲಿ ಅಪಘಾತವಾಗಿದ್ದು, ಮೂವರು ಸಾವಿಗೀಡಾಗಿದ್ದು, ಓರ್ವನಿಗೆ ಗಂಭೀರಗಾಯಗಳಾಗಿದೆ.
ಗಾಯಗೊಂಡ ಕಾರು ಚಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
'ಡ್ರಗ್ಸ್‌ಗೂ ನನಗೂ ಸಂಬಂಧ ಇಲ್ಲರೀ, ಸುಮ್ಮನೆ ಟಾರ್ಗೆಟ್ ಮಾಡಬೇಡಿ' .
ಸ್ಥಳಕ್ಕೆ ಜಾಲಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತ ನಡೆದ ಸ್ಥಳದಲ್ಲಿ ಸದ್ಯ ಟ್ರಾಫಿಕ್ ಜಾಮ್ ಉಂಟಾಗಿದೆ.