ಕಲಬುರಗಿ ಜಿಲ್ಲೆಯಲ್ಲಿ ಧಾರಾಕಾರ ಮಳೆ| ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಇಬ್ಬರ ಸಾವು| ಚಿಂಚೋಳಿ ತಾಲೂಕಿನ ಕೋಡ್ಲಿ ಗ್ರಾಮದಲ್ಲಿ ಸಿಡಿಲಿಗೆ ಓರ್ವ ರೈತ ಬಲಿ| ಘಟನೆಯಲ್ಲಿ ಓರ್ವನಿಗೆ ಗಾಯ|
ಕಲಬುರಗಿ(ಏ.29): ಜಿಲ್ಲೆಯಲ್ಲಿ ಮಂಗಳವಾರ ಕಂಡುಬಂದ ಮಳೆಯಬ್ಬರ ಹಾಗೂ ಸಿಡಿಲಿನ ಆರ್ಭಟಕ್ಕೆ ಕಮಲಾಪುರ ತಾಲೂಕಿನ ಭೂಂಯಾರ್‌ನಲ್ಲಿ ಇಬ್ಬರು ಹಾಗೂ ಚಿಂಚೋಳಿ ತಾಲೂಕಿನ ಕೋಡ್ಲಿ ಗ್ರಾಮದಲ್ಲಿ ಓರ್ವ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ.
ಕಮಲಾಪುರ ತಾಲೂಕಿನ ಭೂಂಯಾರ್‌ನಲ್ಲಿ ಸುಭಾಷ್ ಹಳಕೇರಿ(35), ಕುಪ್ಪಣ್ಣ ನವಲೆ(58) ಸಿಡಿಲಿಗೆ ಬಲಿಯಾದ ನತದೃಷ್ಟರಾಗಿದ್ದಾರೆ, ಇವರಿಬ್ಬರು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ, ಈ ಘಟನೆಯಲ್ಲಿ ಓರ್ವ ಗಂಭೀರ ಗಾಯಗೊಂಡಿದ್ದಾನೆ. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಲ್ಲಿ ಮುಂಜಾನೆಯಿಂದ ಸುರಿದ ಮಳೆಗೆ ಭೂ ಕುಸಿತ, ಎಲ್ಲಿ?
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಕೋಡ್ಲಿ ಗ್ರಾಮದಲ್ಲಿಯೂ ಸಿಡಿಲಿಗೆ ಓರ್ವ ಬಲಿಯಾಗಿರುವ ದಾರುಣ ಘಟನೆ ನಡೆದಿದೆ. ಕೋಡ್ಲಿ ಗ್ರಾಮದ ಅನೀಲ್ ಭೋವಿ 22 ಸಿಡಿಲು ಬಡಿದು ಸಾವನ್ನಪ್ಪಿರುವ ಕಾರ್ಮಿಕನಾಗಿದ್ದಾನೆ. ಕೆರೆ ಬಳಿ ಜೆಸಿಬಿಯಿಂದ ಕಾಮಾಗಾರಿ ನಡೆಸುತ್ತಿದ್ದ ಅನೀಲಗ ಬೋವಿಗೆ ಸಿಡಿಲು ತಾಕಿ ಸಾವಾಗಿದೆ, ಕಾಮಾಗಾರಿ ವೇಳೆ ಸಿಡಿಲು ಬಡಿದು ಸ್ಥಳದಲ್ಲೆ ಸಾವನ್ನಪ್ಪಿರುವ ಅನೀಲನ ಪ್ರಕರಣವನ್ನು ರಟಕಲ್ ಪೊಲೀಸ್ ದಾಖಲಿಸಿಕೊಂಡಿದ್ದಾರೆ.