ಬಟ್ಟೆ ವರ್ತಕನಿಂದ 17 ಮಂದಿಗೆ ಕೊರೋನಾ ಸೋಂಕು: ಬೆಚ್ಚಿ ಬಿದ್ದ ಕಲಬುರಗಿ ಜನತೆ..!

By Kannadaprabha NewsFirst Published Apr 29, 2020, 12:27 PM IST
Highlights

ಬಟ್ಟೆ ವರ್ತಕನಿಂದ 17 ಮಂದಿಗೆ ಕೋವಿಡ್‌-19 ಸೋಂಕು| ದೆಹಲಿ ತಬ್ಲೀಘಿ ಜಮಾತ್‌ ಸಭೆಯಲ್ಲಿ ಭಾಗವಹಿಸಿ ಕಲಬುರಗಿಗೆ ಆಗಮಿಸಿದ್ದ ವ್ಯಕ್ತಿ ಜೊತೆ ಬಟ್ಟೆ ವರ್ತಕನ ಸಂಪರ್ಕ| ಜಿಲ್ಲೆಯಲ್ಲಿ 21 ಸಕ್ರಿಯ ಕಂಟೈನ್ಮೇಂಟ್‌ ಝೋನ್‌ ರಚನೆ| ಅಲ್ಲಿ ಸೀಲ್‌ಡೌನ್‌ ಕಟ್ಟುನಿಟ್ಟಾಗಿ ಜಾರಿಗೆ ತರುವ ಮೂಲಕ ಸೋಂಕನ್ನು ಕಟ್ಟಿಹಾಕುವ ಕೆಲಸ|

ಕಲಬುರಗಿ(ಏ.29):  ರಾಜ್ಯದೆಲ್ಲೆಡೆ ಕೊರೋನಾ ಮಹಾಮಾರಿ ಸೋಂಕಿನ ಇಳಿಮುಖ ಗೋಚರಿಸುತ್ತಿದ್ದರೆ ಕಲಬುರಗಿಯಲ್ಲಿ ಮಾತ್ರ ಇದರ ಅಬ್ಬರ ಇನ್ನೂ ತಗ್ಗಿಲ್ಲ, ಏ.27ರ ಸೋಮವಾರ ಒಂದೇ ದಿನ 6 ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಜಿಲ್ಲೆಯಲ್ಲಿ ಆತಂಕ ಹೆಚ್ಚುವಂತಾಗಿದೆ.

ಕಳೆದ ಒಂದೂವರೆ ತಿಂಗಳಲ್ಲಿ ಜಿಲ್ಲೆಯಲ್ಲಿ ಸೋಂಕು 44 ಜನರಲ್ಲಿ ಕಂಡಿದೆ, ಸಾವಿರಾರು ಜನರನ್ನು ಕ್ವಾರಂಟೈನ್‌ನಲ್ಲಿಟ್ಟಿದೆ, ಇನ್ನೂ ನೂರಾರು ಜನ ಸ್ವಯಂ ವರದಿ ಮಾಡಿಕೊಳ್ಳುತ್ತಿದ್ದಾರೆ. ಸಾವಿರಾರು ಆರೋಗ್ಯ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತರು ಸೋಂಕಿತರು, ಶಂಕಿತರ ಮೇಲೆ ನಿಗಾ ಇಡುವಲ್ಲಿಯೇ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ನಾಲ್ಕು ತಿಂಗಳು ಮಗು ಸೇರಿದಂತೆ ಐವರಿಗೆ ಕೊರೋನಾ ಸೋಂಕು ದೃಢ: ಆತಂಕದಲ್ಲಿ ಕಲಬುರಗಿ ಜನತೆ

ಜಿಲ್ಲೆಯಲ್ಲಿ 21 ಸಕ್ರಿಯ ಕಂಟೈನ್ಮೇಂಟ್‌ ಝೋನ್‌ ರಚಿಸಿ ಅಲ್ಲಿ ಸೀಲ್‌ಡೌನ್‌ ಕಟ್ಟುನಿಟ್ಟಾಗಿ ಜಾರಿಗೆ ತರುವ ಮೂಲಕ ಸೋಂಕನ್ನು ಕಟ್ಟಿಹಾಕುವ ಕೆಲಸ ಒಂದೇ ಸವನೆ ಸಾಗಿದೆಯಾದರೂ ಸೋಂಕಿತರ ಸಂಖ್ಯಾಬಲ ಹೆಚ್ಚುತ್ತಲೇ ಇದೆ, ಜೊತೆಗೇ ಸಾವಿನ ಪ್ರಮಾಣವೂ ಹೆಚ್ಚುತ್ತಿದೆ.

ರೋಗಿ ಸಂಖ್ಯೆ 205 ರಿಂದ 17 ಮಂದಿಗೆ ಸೋಂಕು:

ಒಂದು ಕುತೂಹಲದ ಸಂಗತಿ ಎಂದರೆ ಕಲಬುರಗಿಯಲ್ಲಿ ಕೊರೋನಾ ಸೋಂಕಿಗೆ ಮೂರು ರೋಗಿಗಳು ಪ್ರಮುಖ ಕಾರಣರು, ಅವರಲ್ಲಿಯೂ ರೋಗಿ ಸಂಖ್ಯೆ 205 ಅತೀ ಹೆಚ್ಚು ಸೋಂಕು ಹಬ್ಬಿಸುವಲ್ಲಿ ಪ್ರಮುಖ ಕಾರಣರಾಗಿರೋದು ಕಟು ವಾಸ್ತ. ಇಲ್ಲಿನ ಸುಪ್ರಸಿದ್ಧ ಬಟ್ಟೆವರ್ತಕ ತಾನೆಲ್ಲಿಯೂ ಪ್ರಯಾಣ ಮಾಡದೆ ಇದ್ದರೂ ಸಹ ದೆಹಲಿ ತಬ್ಲಿಘಿ ಜಮಾತ್‌ ಸಭೆಗೆ ಹೋಗಿ ಬಂದಿರುವವರೊಂದಿಗಿನ ಸಂಪರ್ಕದಿಂದ ಸೋಂಕು ತಗುಲಿಸಿಕೊಂಡು ಇನ್ನೂ 17 ಮಂದಿಗೆ ಹೆಮ್ಮಾರಿ ಗಂಟು ಬೀಳುವಂತೆ ಮಾಡಿರೋದು ಗಮನಾರ್ಹ.

ಸೋಂಕಿನಿಂದಾಗಿ ತೀವ್ರ ಉಸಿರಾಟ ತೊಂದರೆಗೆ ಸಿಲುಕಿ ಏ.13ರಂದು ಸಾವನ್ನಪ್ಪಿರುವ ಬಟ್ಟೆವರ್ತಕ (ರೋಗಿ 205)ನ ಪ್ರತ್ಯಕ್ಷ, ಪರೋಕ್ಷ ಸಂಪರ್ಕಕ್ಕೆ ಬಂದಿರುವ 17 ಮಂದಿಗೆ ಸೋಂಕು ಧೃಢವಾಗಿದೆ.
ವರ್ತಕನ ನೇರ ಸಂಪರ್ಕಕ್ಕೆ ಬಂದಿರೋ ರೋಗಿ ಸಂಖ್ಯೆ 254ರ ಸಂಪರ್ಕದಿಂದ 10 ವರ್ಷದ ಬಾಲಕ, ಸಂಖ್ಯೆ 255ರ ಸಂಪರ್ಕದಿಂದ 51 ವರ್ಷದ ವ್ಯಕ್ತಿ, ರೋಗಿ ಸಂಖ್ಯೆ 315 ರ ಸಂಪರ್ಕದಿಂದ 5 ವರ್ಷದ ಗಂಡು ಮಗು, ರೋಗಿ ಸಂಖ್ಯೆ 360 ರ ಸಂಪರ್ಕದಿಂದ 34 ವರ್ಷದ ಕೆಲಸಗಾರ, ರೋಗಿ ಸಂಖ್ಯೆ 392 ರ ಸಂಪರ್ಕದಿಂದ 13 ವರ್ಷದ ಯುವತಿ, ರೋಗಿ ಸಂಖ್ಯೆ 393 ರ ಸಂಪರ್ಕದಿಂದ 30 ವರ್ಷದ ಮಹಿಳೆ, ರೋಗಿ ಸಂಖ್ಯೆ 395 ರ ಸಂಪರ್ಕದಿಂದ 19 ವರ್ಷದ ಯುವಕ ಸೇರಿದಂತೆ

7 ವರ್ಷದ ಬಾಲಕ, 22 ರ ಯುವತಿ, 43 ವರ್ಷದ ಪುರುಷ, 40 ವರ್ಷದ ಮಹಿಳೆ, 43 ಹಾಗೂ 55 ವರ್ಷದ ಪುರುಷರು ಸೇರಿದಂತೆ 17 ಮಂದಿಗೆ ರೋಗಿ ಸಂಖ್ಯೆ 205 ರಿಂದಲೇ ಸೋಂಕು ತಗುಲಿರೋದು ವೈದ್ಯಕೀಯ ವರದಿಯಿಂದ ಧೃಢವಾಗಿದೆ.
 

click me!