ಮಳೆರಾಯನ ಆರ್ಭಟ; ಹಳ್ಳದಲ್ಲಿ ಕೊಚ್ಚಿಕೊಂಡು ಹೋದ ಯುವಕ!

By Ravi NayakFirst Published Sep 12, 2022, 1:30 PM IST
Highlights

ಗಡಿ ಜಿಲ್ಲೆ ಬೀದರ್ ನಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು,  ಚಿಡಗುಪ್ಪ  ತಾಲೂಕಿನ ಬೆಳಕೇರಾ ಗ್ರಾಮದ ಯುವಕ ಹಳ್ಳದಲ್ಲಿ ಉಂಟಾದ ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ದುರಂತ ಘಟನೆ ಬೆಳಕಿಗೆ ಬಂದಿದೆ.

ಬೀದರ್ (ಸೆ.12) : ಗಡಿ ಜಿಲ್ಲೆ ಬೀದರ್ ನಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು ಜಿಲ್ಲೆಯಲ್ಲಿ ಹಳ್ಳ ಕೆರೆ ಕಟ್ಟೆ ತುಂಬಿ ಕೋಡಿ ಹರಿದಿದೆ. ಕೆಲವೆಡೆ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ನಿರಂತರ ಮಳೆಯಿಂದ ರೈತರು ಕಂಗಾಲಾಗಿದ್ದು, ಬೆಳೆ ಉಳಿಸಿಕೊಳ್ಳಲು ಪರದಾಡುವಂತಾಗಿದೆ. ಇನ್ನೊಂದೆಡೆ ನಿರಂತರ ಮಳೆಯಿಂದ  ಹಲವೆಡೆ ಜನಜೀವನ ಅಸ್ತವೆಸ್ತಗೊಂಡಿದೆ, ಮತ್ತೊಂದು ಕಡೆ ರೈತರ ಹೊಲಗಳಲ್ಲಿ ನೀರು ನಿಂತು ಸಾಕಷ್ಟು ಪ್ರಮಾಣದಲ್ಲಿ ಬೆಳೆ ಹಾನಿ ಕೂಡ ಸಂಭವಿಸಿದೆ,. ಈ ನಡುವೆ  ಚಿಡಗುಪ್ಪ  ತಾಲೂಕಿನ ಬೆಳಕೇರಾ ಗ್ರಾಮದ ಯುವಕ ಹಳ್ಳದಲ್ಲಿ ಉಂಟಾದ ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ದುರಂತ ಘಟನೆ ಬೆಳಕಿಗೆ ಬಂದಿದೆ.

ಮುಂಜಾನೆ ಹಳ್ಳದ ಹರಿವು ಕಡಿಮೆ ಇತ್ತು. ಯುವಕ ಹಳ್ಳದಾಟಿ ಹೊಲಕ್ಕೆ ಹೋಗಿದ್ದ  ಸಂಜೆ ಹೊತ್ತಿಗೆ ಹೊಲದಿಂದ ವಾಪಸು ಮನೆಗೆ ಬರುವಾಗ ಹಣದಿ ಹಾದಿಯಲ್ಲಿರುವ ಹಳ್ಳದ ನೀರಿನ ಹರಿವು ಹೆಚ್ಚಾಗಿದೆ. ಆಪಾಯದ ಮುನ್ಸೂಚನೆ ಅರಿಯದೆ. ಯುವಕ ಹಳ್ಳ ದಾಟುವ ಪ್ರಯತ್ನ ಮಾಡಿದ್ದಾನೆ. ಈ ವೇಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ. ಚಳಕೇರಾ ಗ್ರಾಮದ ನಿವಾಸಿ ದತ್ತು ಶರಣಪ್ಪ(30) ಕೊಚ್ಚಿಕೊಂಡು ಹೋಗಿ ಪ್ರಾಣ ಕಳೆದುಕೊಂಡಿರುವ ದುರ್ದೈವಿ. ಮಗನ ಕಳೆದುಕೊಂಡ ಈ ದುರ್ಘಟನೆಯಿಂದ ದತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ,.‌ ಸುದ್ದಿ ತಿಳಿಯುತಲ್ಲೇ ಗ್ರಾಮಕ್ಕೆ ಭೇಟಿ ನೀಡಿದ ಸ್ಥಳೀಯ ಶಾಸಕ ರಾಜಶೇಖರ ಪಾಟೀಲ್... ಕುಟುಂಬಸ್ಥರಿಗೆ ಧೈರ್ಯ ತುಂಬಿ ಸಾಂತ್ವನ ಹೇಳುವ ಮೂಲಕ ಸರ್ಕಾರದಿಂದ 5 ಲಕ್ಷ ರೂ. ಪರಿಹಾರದ ಭರವಸೆ ನೀಡಿ ವೈಯಕ್ತಿಕ 25 ಸಾವಿರ ರೂಪಾಯಿ ಧನ ಸಹಾಯ ಮಾಡಿದ್ದಾರೆ.

ರಾಜ್ಯದಲ್ಲಿ ನಿಲ್ಲದ ಮಳೆ: ವರುಣನ ಅಬ್ಬರಕ್ಕೆ ಕೊಚ್ಚಿ ಹೋದ ಕಾಫಿ ತೋಟ, ಮತ್ತೆ ಮೂವರು ಬಲಿ

click me!