ಬೆಳಗಾವಿಯಲ್ಲಿ ಭಾರೀ ಮಳೆ: ಕರ್ನಾಟಕ- ಗೋವಾ ಸಂಪರ್ಕ ಕಡಿತ

By Kannadaprabha NewsFirst Published Jun 17, 2020, 11:13 AM IST
Highlights

ಬೆಳಗಾವಿ- ಗೋವಾ ರಸ್ತೆ ಸಂಪರ್ಕ ಕಡಿತ| ರಸ್ತೆ ಸಂಪರ್ಕ ಕಡಿತಗೊಂಡಿರುವುದರಿಂದ ಸಾಲುಗಟ್ಟಿ ರಸ್ತೆ ಮಾರ್ಗದಲ್ಲೇ ನಿಂತ ನೂರಾರು ವಾಹನಗಳು| ರಸ್ತೆಯ ಮಾರ್ಗದಲ್ಲೇ ಗುಡ್ಡ ಕುಸಿದು ಬಿದ್ದಿದ್ದು, ಅದನ್ನು ತೆರವುಗೊಳಿಸಲು ಗೋವಾ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಪ್ರಯತ್ನ| 

ಬೆಳಗಾವಿ(ಜೂ.17): ಪಶ್ಚಿಮ ಘಟ್ಟದಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಗೋವಾದ ಚೋರ್ಲಾ ಘಾಟ ಬಳಿ ಗುಡ್ಡ ಕುಸಿತವಾಗಿರುವುದರಿಂದ ಬೆಳಗಾವಿ- ಗೋವಾ ರಸ್ತೆ ಸಂಪರ್ಕ ಕಡಿತಗೊಂಡಿದೆ.

ರಸ್ತೆ ಸಂಪರ್ಕ ಕಡಿತಗೊಂಡಿರುವುದರಿಂದ ನೂರಾರು ವಾಹನಗಳು ಸಾಲುಗಟ್ಟಿ ರಸ್ತೆ ಮಾರ್ಗದಲ್ಲೇ ನಿಂತಿವೆ. ರಸ್ತೆಯ ಮಾರ್ಗದಲ್ಲೇ ಗುಡ್ಡ ಕುಸಿದು ಬಿದ್ದಿದ್ದು, ಅದನ್ನು ತೆರವುಗೊಳಿಸಲು ಗೋವಾ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಪ್ರಯತ್ನಿಸುತ್ತಿದ್ದಾರೆ. 

ಮಹಾರಾಷ್ಟ್ರದಲ್ಲಿ ವರುಣನ ಆರ್ಭಟ: ಚಿಕ್ಕೋಡಿಯಲ್ಲಿ ಪ್ರವಾಹ ಭೀತಿ

ಕಳೆದ ಒಂದು ವಾರದಿಂದ ಬಿಟ್ಟುಬಿಡದೇ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ರಸ್ತೆ ಮಾರ್ಗದಲ್ಲೇ ಬೃಹತ್‌ ಗಿಡಮರಗಳು ಬಿದ್ದಿದ್ದು, ಬೃಹತ್‌ ಪ್ರಮಾಣದ ಮಣ್ಣು ಕಲ್ಲು ಬಿದ್ದಿದೆ. ರಸ್ತೆ ಮೇಲೆ ಬಿದ್ದಿರುವ ಕಲ್ಲು ಮಣ್ಣು ತೆರವುಗೊಳಿಸಿದ ಬಳಿಕವಷ್ಟೇ ಚೋರ್ಲಾ ಮಾರ್ಗದಲ್ಲಿ ಸಂಚಾರ ಪುನಾರಂಭವಾಗಲಿದೆ.
 

click me!