Bengaluru Rains: ಮಳೆ ನಡುವೆ ಬಿಬಿಎಂಪಿ ಆಯುಕ್ತರ ಸಿಟಿ ರೌಂಡ್ಸ್

Published : Sep 03, 2022, 11:39 PM IST
Bengaluru Rains: ಮಳೆ ನಡುವೆ ಬಿಬಿಎಂಪಿ ಆಯುಕ್ತರ ಸಿಟಿ ರೌಂಡ್ಸ್

ಸಾರಾಂಶ

ರಾಜಧಾನಿ ಬೆಂಗಳೂರಿನಲ್ಲಿ ವರುಣನ ಆರ್ಭಟ ಮುಂದುವರೆದಿದೆ. ನಗರದ ಹಲವು ಬಡಾವಣೆಗಳು ಜಲಾವೃತವಾಗಿದೆ. ಈ ನಡುವೆ ಮಳೆ ಮಧ್ಯೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಸಿಟಿ ರೌಂಡ್ಸ್ ಮಾಡಿದ್ದಾರೆ.

ಬೆಂಗಳೂರು (ಸೆ. 3): ರಾಜಧಾನಿ ಬೆಂಗಳೂರಿನಲ್ಲಿ ಮಳೆ ಆರಂಭವಾಗಿದೆ. ನಗರದ ಹಲವೆಡೆ ಮಳೆ ಪ್ರಾರಂಭಗೊಂಡಿದೆ. ಪ್ಯಾಲೇಸ್ ರಸ್ತೆ, ಹೆಬ್ಬಾಳ, ಕೋಡಿಗೆಹಳ್ಳಿ ಸುತ್ತಮುತ್ತ ಮಳೆ ಬಂದಿರುವ ಕಾರಣ ಅಲ್ಲಲ್ಲಿ ಟ್ರಾಫಿಕ್ ಜಾಮ್ ಆಗಿದೆ. ಈ ನಡುವೆ ಮಳೆ ಮಧ್ಯೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಸಿಟಿ ರೌಂಡ್ಸ್ ಮಾಡಿದ್ದಾರೆ. ಮಳೆ ಹಾನಿ ಸಂಬಂಧ ತಪಾಸಣೆ ನಡೆಸಿದ್ದಾರೆ. ಕೆ.ಆರ್.ಪುರಂ, ಗೊರುಗುಂಟೆಪಾಳ್ಯ, ಸುಮನಹಳ್ಳಿ ಸೇರಿ ಹಲವೆಡೆ  ಭೇಟಿ ನೀಡಿದ್ದಾರೆ. ಅಧಿಕಾರಿಗಳ ಜತೆ ವಿವಿಧ ಪ್ರದೇಶಗಳಿಗೆ ಭೇಟಿ ಕೊಟ್ಟ ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್. ಆಯುಕ್ತರಿಗೆ ಅಧಿಕಾರಿಗಳ ಸಾಥ್. ನೈಟ್ ಸಿಟಿ ರೌಂಡ್ ಕೈಗೊಂಡ ಬಿಬಿಎಂಪಿ ಕಮಿಷನರ್ ಮಳೆಯಿಂದ ಸಾಕಷ್ಟು ಕಡೆ ತೊಂದರೆಗಳು ಆಗಿರೋದು ಗಮನಕ್ಕೆ ಬಂದಿದೆ. ಹೀಗಾಗಿ ನಾವು ಪರಿಶೀಲನೆಗೆ ಮುಂದಾಗಿದ್ದೇವೆ. ಹೆಬ್ಬಾಳ ಸಮೀಪ ಫುಟ್ ಪಾತ್ ಸಮಸ್ಯೆ ಇರೋದು ತಿಳಿದಿದೆ. ಕೇಬಲ್ ಗಳು ಅಲ್ಲಲ್ಲಿ ನೇತಾಡಿ ಸಮಸ್ಯೆ ತಂದೊಡ್ಡಿದೆ. ಪಾದಚಾರಿಗಳ ಮುಖಕ್ಕೆ ಈ ಕೇಬಲ್ ಗಳು ತಗುಲುತ್ತಿರೋ ಬಗ್ಗೆ ಗಮನಕ್ಕೆ ಬಂದಿದೆ. ಬೀದಿ ದೀಪಗಳು ಇಲ್ಲದೆ ಸಮಸ್ಯೆಯಾಗಿದೆ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಲು ನಾನು ಸೂಚಿಸಿದ್ದೇನೆ. 

ಬೆಂಗಳೂರು ರಾಜಕಾಲುವೆ ನಿರ್ಮಾಣಕ್ಕೆ 1500 ಕೋಟಿ ಬಿಡುಗಡೆ: ಸಿಎಂ ಬೊಮ್ಮಾಯಿ

ಬೀದಿ ದೀಪ ಆದಷ್ಟು ಬೇಗ ಅಳವಡಿಕೆ ಮಾಡುವಂತೆ ಹೇಳಿದ್ದೇನೆ. ಅಕ್ಟೋಬರ್, ನವೆಂಬರ್ ತಿಂಗಳ ವೇಳೆಗೆ ರಾಜಧಾನಿಯ ರಸ್ತೆಗಳು ನೀಟ್ ಆಗಲಿವೆ. ರಸ್ತೆಗುಂಡಿ ಮುಕ್ತ ಮಾಡಲು ಬಿಬಿಎಂಪಿ ಪ್ಲಾನ್ ಮಾಡಿದೆ. ಇನ್ನೆರಡು ತಿಂಗಳಲ್ಲಿ ಮಳೆ ಕೂಡ ಕಂಪ್ಲೀಟ್ ಕಡಿಮೆ ಆಗಲಿದೆ. ಮಳೆ ಕಡಿಮೆ ಆಗದಿದ್ದರೂ ಕೋಲ್ಡ್ ಮಿಕ್ಸ್ ನೊಂದಿಗೆ ರಸ್ತೆ ಮಾಡ್ತೇವೆ. ಮಳೆ ಕಡಿಮೆ ಆದರೆ ಯಥಾಪ್ರಕಾರ ಹಾಟ್ ಮಿಕ್ಸ್ ನೊಂದಿಗೆ ರಸ್ತೆ ಮಾಡ್ತೆವೆ.  ಇನ್ನೆರಡು ತಿಂಗಳೊಳಗೆ ರಸ್ತೆ ಗುಂಡಿ ಮುಕ್ತ ‌ಮಾಡಲು ಗುರಿ ಹೊಂದಿದ್ದೇವೆ ಎಂದು ಇದೇ ವೇಳೆ ಬಿಬಿಎಂಪಿ ಆಯುಕ್ತ ಹೇಳಿದರು.

Bengaluru Rain: ಸಂಜೆ 4 ಗಂಟೆಗೆ ಸಿಎಂ ಬೊಮ್ಮಾಯಿ‌ ಸಿಟಿ ರೌಂಡ್ಸ್

ಕಳೆದ ಹಲವು ದಿನಗಳಿಂದ ಸಿಲಿಕಾನ್ ಸಿಟಿಯಲ್ಲಿ ಒಂದಲ್ಲ ಒಂದು ಕಡೆ ನಿರಂತರವಾಗಿ ಸುರಿಯುತ್ತಿದೆ. ಮಳೆಯಿಂದ ನೂರಾರು ಮನೆಗಳಿಗೆ ನೀರು ನುಗ್ಗಿ ಇಡೀ ಬಡಾವಣೆಗಳೇ ಸಂಪರ್ಕ ಕಳೆದುಕೊಂಡಿದ್ದವು. ಹಲವು ಬಡಾವಣೆಗಳು ದ್ವೀಪದಂತಾಗಿತ್ತು.  ಬಿಬಿಎಂಪಿ ಮತ್ತು ಸರಕಾರದ ಅಸಮರ್ಪಕ ಯೋಜನೆಗಳಿಂದ ಈ ರೀತಿಯ ಅನಾಹುತ ಸಂಭವಿಸುತ್ತವೆ ಎಂದು ಜನರು ಆಕ್ರೋಶ ಹೊರ ಹಾಕಿದ್ದರು.

PREV
Read more Articles on
click me!

Recommended Stories

4,808 ಕೋಟಿ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು