ಜಿಲ್ಲೆಯಲ್ಲಿ ಕಾಡಾನೆಗಳು ಹಾಗೂ ಮಾನವನ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಕಾಡಾನೆಗಳು ಪದೆ ಪದೇ ದಾಳಿ ನಡೆಸುತ್ತಿದ್ದು, ರೈತರು, ಜನರು ಆತಂಕದಿಂದ ಜೀವನ ಸಾಗಿಸುತ್ತಿದ್ದಾರೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಸೆ.03): ಜಿಲ್ಲೆಯಲ್ಲಿ ಕಾಡಾನೆಗಳು ಹಾಗೂ ಮಾನವನ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಕಾಡಾನೆಗಳು ಪದೆ ಪದೇ ದಾಳಿ ನಡೆಸುತ್ತಿದ್ದು, ರೈತರು, ಜನರು ಆತಂಕದಿಂದ ಜೀವನ ಸಾಗಿಸುತ್ತಿದ್ದಾರೆ. ಇದೀಗ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಕಾಡಾನೆ ದಾಳಿ ಹೆಚ್ಚಾಗಿದೆ. ಮೊದಲೇ ಭಾರೀ ಮಳೆಯಿಂದ ಪ್ರಮುಖ ಬೆಳೆಗಳು ಮಣ್ಣು ಪಾಲಾಗಿದೆ. ಇದರ ನಡುವೆ ಕಳೆದ ಒಂದು ವಾರದಿಂದ ಕಾಡಾನೆಗಳ ಹಿಂಡು ದಾಳಿ ಮಾಡಿದ್ದು ಕಾಫಿ, ಅಡಿಕೆ ಮುಂತಾದ ಬೆಳೆಗಳಿಗೆ ಹಾನಿ ಮಾಡಿದ್ದು ರೈತರು ಆತಂಕದಿಂದ ಬದುಕುತ್ತಿದ್ದಾರೆ.
ಕಾಡಾನೆಗಳ ಅಟ್ಟಹಾಸಕ್ಕೆ ರೈತರು ಕಂಗಾಲು: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಅಲೇಖಾನ್ ,ಮೇಗೂರು, ಕುಂದೂರು, ಮಲೆಮನೆ, ಕೋಗಿಲೇ, ಹೊರಟ್ಟಿ ಅಕ್ಕಪಕ್ಕದ ಗ್ರಾಮಗಳಲ್ಲಿ ಕಾಡಾನೆ ದಾಳಿ ವಿಪರೀತವಾಗಿದ್ದು ಅನ್ನದಾತರು ಆತಂಕದಲ್ಲಿ ಜೀವನ ನಡೆಸುತ್ತಿದ್ದಾರೆ. ಈ ಗ್ರಾಮದ ಪ್ರತಿಯೊಂದು ತೋಟಗಳಲ್ಲಿ ಅಡಿಕೆ, ಕಾಫಿ ಗಿಡಗಳು ನಾಶವಾಗಿರುವುದು, ನೆಲಸಮವಾಗಿರುವ ಬಾಳೆಗಿಡ. ಭತ್ತದ ಗದ್ದೆಯಲ್ಲಿ ಆನೆಗಳ ಹೆಜ್ಜೆಯ ದೃಶ್ಯ ಕಾಣ್ಣು ಸಿಗುತ್ತದೆ.
ಸಂಸ್ಕೃತ ಕಲಿಯೋಕೆ Chikkamagaluru ಗೆ ಬಂದ ಇಸ್ರೇಲ್ ತಂಡ
ಇದಕ್ಕೆ ಕಾರಣವಾಗಿರುವುದು ಕಳೆದ ಒಂದು ವಾರದಿಂದ ಕಾಡಾನೆಗಳ ಹಿಂಡು ರೈತರ ತೋಟದಲ್ಲಿ ಸವಾರಿ ಮಾಡಿದ್ದು, ಮನಸೋ ಇಚ್ಚೆ ಸಿಕ್ಕಿದ ಗಿಡಗಳನ್ನು ಮುರಿದು ಹಾಕಿದೆ. ರೈತರು ಕಷ್ಟಪಟ್ಟು ಸಾಕಿ ಸಲಹಿದ ಕಾಫಿ ಗಿಡಗಳು, ಅಡಿಕೆ ಗಿಡ,ಬಾಳೆಗಿಡ ಸಂಪೂರ್ಣ ನಾಶವಾಗಿದ್ದು, ಆನೆಗಳ ಅಟ್ಟಹಾಸಕ್ಕೆ ರೈತರು ಕಂಗಾಲಾಗಿದ್ದಾರೆ. ತಾವು ಬೆಳೆದ ಬೆಳೆಯಿಂದ ಲಾಭ ಬರುತ್ತೆ ಅನ್ನುವಾಗಲೇ ಆನೆಗಳು ಸರ್ವನಾಶ ಮಾಡಿ ರೈತರನ್ನು ಸಂಕಷ್ಚಕ್ಕೆ ದೂಡಿದೆ. ಮೊದಲೇ ಈ ವರ್ಷ ಮಹಾಮಳೆ ಆವಾಂತರ ಸೃಷ್ಟಿ ಮಾಡಿದ್ರೆ, ಕಾಡನಾನೆಗಳು ಬೆಳೆಯನ್ನೇ ಸರ್ವನಾಶ ಮಾಡಿದ್ದು, ನಾವು ಬದುಕುವುದಾದರೂ ಹೇಗೆ ಎನ್ನುವಂತಾಗಿದೆ ಎಂದು ಬಣಕಲ್ ಗ್ರಾಮದ ಸಂತೋಷ್ ಪ್ರಶ್ನೆ ಮಾಡಿದ್ದಾರೆ.
ಅರಣ್ಯ ಇಲಾಖೆಯ ವಿರುದ್ದ ಗ್ರಾಮಸ್ಥರ ಆಕ್ರೋಶ: ಕಾಡಾನೆಗಳ ದಾಳಿಯ ಬಗ್ಗೆ ಅರಣ್ಯ ಇಲಾಖೆ ಸ್ಥಳೀಯರು ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಮೂಡಿಗೆರೆಯ ವಿವಿಧ ಭಾಗಗಳಲ್ಲಿ ಕಾಡಾನೆಗಳು ಪದೇ ಪದೇ ದಾಳಿ ಮಾಡುತ್ತಿದ್ದು ಜನರು ಆತಂಕದಿಂದ ಬದುಕುತ್ತಿದ್ದಾರೆ. ಈ ಬಗ್ಗೆ ಕೋಗಿಲೇ ಗ್ರಾಮದ ಮಂಜುನಾಥ್ ಮಾತಾಡಿ ಕಾಡಾನೆಗಳು ತುಂಬಾ ಹಾನಿ ಮಾಡಿದ್ದಾವೆ. ಕೃಷಿಯನ್ನೆ ನಂಬಿರುವ ನಮಗೆ ಇವುಗಳ ಉಪಟಳದಿಂದ ಸಾಕಷ್ಟು ಹಿಂಸೆ ಅನುಭವಿಸುವಂತ್ತಾಗಿದೆ.
ಕಾಫಿನಾಡು ಜಿಲ್ಲೆಯಾದ್ಯಂತ ವರುಣನಬ್ಬರ: ಮಲೆನಾಡಿನಲ್ಲಿ ಅಪಾರ ಹಾನಿ
ಆನೆಗಳ ದಾಳಿಯಿಂದ ನಮ್ಮಗೆ ಬೆಳೆ ಸಿಗುತ್ತಿಲ್ಲ, ನಮ್ಮನ್ನ ಬೇರೆಡೆ ಸ್ಥಳಾಂತರ ಮಾಡ್ತಿವೆ ಅಂದ್ರು ಮಾಡಿಲ್ಲ, ನಮ್ಮ ಜಮೀನನ್ನ ದಯವಿಟ್ಟು ಅರಣ್ಯ ಇಲಾಖೆಯವರೆ ತೆಗೆದುಕೊಂದು ಸೂಕ್ತ ಪರಿಹಾರವನ್ನು ಒದಗಿಸಬೇಕೆಂಬುದು ಒತ್ತಾಯಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಜನರ ಈ ಸಮಸ್ಯೆಯನ್ನ ಗಂಭೀರವಾಗಿ ಪರಿಗಣಿಸಿದಂತಿಲ್ಲ. ಶಾಶ್ವತ ಪರಿಹಾರದ ಅಲೋಚನೆ ಇದ್ದಂತಿಲ್ಲ. ಕಾಡಲ್ಲಿ ಇರಬೇಕಾದ ಆನೆಗಳು ನಾಡಲ್ಲೆ ಬೀಡುಬಿಟ್ಟಿವೆ. ಇದ್ರಿಂದಾಗಿ ಇಲ್ಲಿ ವಾಸ ಮಾಡುತ್ತಿರುವ ಜನರು ಊರುಬಿಡೋಕು ಆಗದೆ ಸಂಕಷ್ಟದಲ್ಲಿ ದಿನ ದೂಡುವಂತ್ತಾಗಿದ್ದು, ಇನ್ನಾದ್ರು ಸಂಬಂಧಪಟ್ಟವರು ಇತ್ತ ಗಮನ ಹರಿಸುತ್ತಾರ ಎಂಬುದನ್ನ ಕಾದು ನೋಡಬೇಕಿದೆ.