Karnataka rains: ಸಿಡಿಲು ಸಹಿತ ಗಾಳಿ ಮಳೆಗೆ ಅಪಾರ ಹಾನಿ: ಮಂಡ್ಯದಲ್ಲಿ ಜೋಡೆತ್ತುಗಳು ಬಲಿ!

By Kannadaprabha News  |  First Published May 27, 2023, 5:56 AM IST

ಗುರುವಾರ ಸಂಜೆ ಸುರಿದ ಸಿಡಿಲು ಸಹಿತ ಗಾಳಿ ಮಳೆಗೆ ಮರ್ಕಂಜದಲ್ಲಿ ಅಪಾರ ಹಾನಿ ಸಂಭವಿಸಿರುವುದಾಗಿ ತಿಳಿದು ಬಂದಿದೆ. ಸಂಜೆ ವೇಳೆ ಬೀಸಿದ ರಭಸದ ಗಾಳಿಗೆ ಮರ್ಕಂಜದ ಹಲವು ಕಡೆಗಳಲ್ಲಿ ರಬ್ಬರ್‌ ಮರಗಳು, ಅಡಕೆ ಮರಗಳು ಧರೆಗುರುಳಿವೆ. ಮರಗಳು ಬಿದ್ದು ವಿದ್ಯುತ್‌ ಕಂಬಗಳಿಗೂ ಹಾನಿಯುಂಟಾಗಿದೆ.


ಸುಳ್ಯ (ಮೇ.27): ಗುರುವಾರ ಸಂಜೆ ಸುರಿದ ಸಿಡಿಲು ಸಹಿತ ಗಾಳಿ ಮಳೆಗೆ ಮರ್ಕಂಜದಲ್ಲಿ ಅಪಾರ ಹಾನಿ ಸಂಭವಿಸಿರುವುದಾಗಿ ತಿಳಿದು ಬಂದಿದೆ. ಸಂಜೆ ವೇಳೆ ಬೀಸಿದ ರಭಸದ ಗಾಳಿಗೆ ಮರ್ಕಂಜದ ಹಲವು ಕಡೆಗಳಲ್ಲಿ ರಬ್ಬರ್‌ ಮರಗಳು, ಅಡಕೆ ಮರಗಳು ಧರೆಗುರುಳಿವೆ. ಮರಗಳು ಬಿದ್ದು ವಿದ್ಯುತ್‌ ಕಂಬಗಳಿಗೂ ಹಾನಿಯುಂಟಾಗಿದೆ.

ಈ ಭಾಗದಲ್ಲಿ ಕಳೆದ ವರ್ಷವೂ ಮಳೆಗಾಲದ ಆರಂಭದಲ್ಲಿ ಬೀಸಿದ ರಭಸದ ಗಾಳಿಗೆ ಅನೇಕ ಕಡೆಗಳಲ್ಲಿ ಅಡಕೆ, ರಬ್ಬರ್‌, ತೆಂಗು ಮತ್ತಿತರ ಮರಗಳು ಮುರಿದು ಬಿದ್ದ ಪರಿಣಾಮ ಕೃಷಿಕರ ಬೆಳೆಗಳಿಗೆ ಹಾನಿಯಾಗಿತ್ತು. ಈ ವರ್ಷವೂ ಮಳೆಗಾಲದ ಆರಂಭದಲ್ಲಿ ಬೀಸುತ್ತಿರುವ ಗಾಳಿಗೆ ತಮ್ಮ ಕೃಷಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಅಡಕೆ ಹಳದಿ ರೋಗದಿಂದ ತತ್ತರಿಸಿರುವ ಈ ಭಾಗದ ಜನರು ಮಳೆಗಾಲರಂಭದ ಗಾಳಿಯ ರುದ್ರನರ್ತನಕ್ಕೆ ಮತ್ತಷ್ಟುಕೃಷಿಯನ್ನು ಕಳೆದುಕೊಂಡು ಸಂಕಷ್ಟಸಿಲುಕಿದಂತಾಗಿದೆ.

Tap to resize

Latest Videos

ಚಿಕ್ಕಮಗಳೂರಲ್ಲಿ ರೇನ್ ಅಲರ್ಟ್, ಮಳೆ ಆರಂಭಕ್ಕೂ ಮುನ್ನವೇ ಎಲ್ಲ ಸಿದ್ಧತೆ

ಸಿಡಿಲು ಬಡಿದು ಮನೆಗೆ ಹಾನಿ: ಜಟ್ಟಿಪಳ್ಳದ ಪದ್ಮಾವತಿ ಮತ್ತು ಮೋಹಿನಿ ಎಂಬವರ ಮನೆಗೆ ಶುಕ್ರವಾರ ಸಂಜೆ ಸುರಿದ ಭಾರಿ ಮಳೆಗೆ ಮನೆಗೆ ಮತ್ತು ಹತ್ತಿರದ ಕೊಟ್ಟಿಗೆಗೆ ಸಿಡಿಲು ಬಡಿದು ಹಾನಿಯಾಗಿದೆ. ಮನೆಯ ಸ್ವಿಚ್‌ ಬೋರ್ಡ್‌, ಎಲೆಕ್ಟ್ರಿಕಲ್‌ ವಸ್ತುಗಳು, ಮನೆಯ ಕೊಟ್ಟಿಗೆಯ ಗೋಡೆ ಹಾನಿಗೊಂಡಿದೆ.

ಗಾಳಿ ಮಳೆಯ ಆರ್ಭಟ, ನೆಲಕ್ಕುರುಳಿದ ಮರ

ತುರುವೇಕೆರೆ: ತಾಲೂಕಿನಲ್ಲಿ ಮಳೆ ಮತ್ತು ಗಾಳಿಯ ಆರ್ಭಟ ಮುಂದುವರೆದಿದೆ. ಇದರ ಪರಿಣಾಮವಾಗಿ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಗಿಡ ಮರಗಳು ಮತ್ತು ವಿದ್ಯುತ್‌ ಕಂಬಗಳು ನೆಲಕ್ಕುರುಳಿರುವ ಘಟನೆ ನಡೆದಿದೆ. ಗುರುವಾರ ಸಾಯಂಕಾಲ ಕಸಬಾ ಹೋಬಳಿಯಲ್ಲಿ ಮಳೆ ಬಿದ್ದ ಕಾರಣ 6 ವಿದ್ಯುತ್‌ ಕಂಬಗಳು ಮುರಿದು ಬಿದ್ದಿವೆ. ದಂಡಿನಶಿವರ, ಮಾಯಸಂದ್ರ, ಸಂಪಿಗೆ ವ್ಯಾಪ್ತಿಯಲ್ಲಿ 16 ವಿದ್ಯುತ್‌ ಕಂಬಗಳು ಧರೆಗುರುಳಿವೆ. ತೋಟಗಳ ಸಾಲಿನಲ್ಲಿದ್ದ ತೆಂಗಿನ ಮರಗಳು ಮತ್ತು ಅಡಿಕೆ ಮರಗಳು ಸಹ ಧರೆಗುರುಳಿವೆ. ಪೂರ್ವ ಮುಂಗಾರು ಬೆಳೆಗಳಾದ ಹಲಸಂದಿ, ಉದ್ದು, ತೊಗರಿ ಸೇರಿದಂತೆ ಇನ್ನಿತರ ಬೆಳೆಗಳಿಗೆ ಚೇತರಿಕೆ ಮೂಡಿದೆ.

ಉಡುಪಿ ಜಿಲ್ಲೆಯಾದ್ಯಂತ ವ್ಯಾಪಕ ಮಳೆ ಹಾನಿ, ಇಬ್ಬರು ಸಾವು!

ಸಿಡಿಲಿಗೆ ಜೋಡೆತ್ತುಗಳು ಬಲಿ

ಮಂಡ್ಯ: ಸಿಡಿಲು ಬಡಿದು ಜೋಡೆತ್ತುಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ವಡ್ಡರಹಳ್ಳಿಯಲ್ಲಿ ನಡೆದಿದೆ. ಗ್ರಾಮದ ಶ್ರೀನಿವಾಸ್‌ ಮೂರ್ತಿ ಎಂಬ ರೈತನಿಗೆ ಸೇರಿದ ಜೋಡೆತ್ತುಗಳನ್ನು ವ್ಯವಸಾಯಕ್ಕಾಗಿ 80 ಸಾವಿರ ಸಾಲ ಮಾಡಿ ತಂದಿದ್ದರು. ಜಮೀನು ಉಳುಮೆ ಮಾಡಿ ಜಮೀನಿನ ಬಳಿಯೇ ಎತ್ತುಗಳನ್ನು ಕಟ್ಟಿಹಾಕಿದ್ದರು. ಈ ವೇಳೆ ಸಿಡಿಲು ಬಡಿದು ಸ್ಥಳದಲ್ಲಿಯೇ ಜೋಡೆತ್ತುಗಳು ಸಾವನ್ನಪ್ಪಿವೆ. ಎತ್ತುಗಳನ್ನು ಕಳೆದುಕೊಂಡ ರೈತ ಕಣ್ಣೀರಿಡುತ್ತಿದ್ದ ದೃಶ್ಯ ನೋವು ತರುತ್ತಿತ್ತು. ಎತ್ತುಗಳನ್ನು ಕಳೆದುಕೊಂಡ ರೈತನಿಗೆ ಪರಿಹಾರ ನೀಡುವಂತೆ ಗ್ರಾಮಸ್ಥರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಘಟನೆ ಬಸರಾಳು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

 

click me!