ಬೆಳಗಾವಿ: ಭಾರೀ ಮಳೆಗೆ ಮನೆ ಕುಸಿದು ಒಂದೇ ಕುಟಂಬದ 6 ಜನ ಸಾವು

By Suvarna NewsFirst Published Oct 6, 2021, 10:23 PM IST
Highlights

* ಭಾರೀ ಮಳೆಗೆ ಮನೆ ಕುಸಿದು ಒಟ್ಟು  7 ಜನರು ಸಾವು
* ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ನಡೆದ ಘಟನೆ 
* 7 ವರ್ಷದ ಮಗು ಸೇರಿ ಒಂದೇ ಕುಟಂಬದ ಆರು ಜನ ಸಾವು

ಬೆಳಗಾವಿ, (ಅ.06): ಭಾರೀ ಮಳೆಯಿಂದಾಗಿ (Rain) ಮನೆ ಕುಸಿದು ಒಟ್ಟು 7 ಜನ ಸಾವನ್ನಪ್ಪಿರುವ ದುರ್ಘಟನೆ ಬೆಳಗಾವಿ (Belagavi) ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ಸಂಭವಿಸಿದೆ. 

 ಭಾರೀ ಮಳೆ ಹಿನ್ನೆಲೆಯಲ್ಲಿ ಇಂದು (ಅ.06) ಭೀಮಪ್ಪ ಖನಗಾಂವಿ ಎಂಬುವವರಿಗೆ ಸೇರಿದ ಮನೆ ಕುಸಿದು ಬಿದ್ದಿದ್ದು, 7 ವರ್ಷದ ಮಗು ಸೇರಿ ಒಂದೇ ಕುಟುಂಬದ 6 , ಪಕ್ಕದ ಮನೆಯ ಒಬ್ಬರು ಒಟ್ಟು 7 ಜನರು ಮೃತಪಟ್ಟಿದ್ದಾರೆ. 

"

ಬೆಳಗಾವಿ: ವಿದ್ಯುತ್‌ ಅವಘಡಕ್ಕೆ ಅಜ್ಜಿ-ಮೊಮ್ಮಗ ಸಾವು

ಗಂಗವ್ವ ಭೀಮಪ್ಪ(80), ಸತ್ಯವ್ವ ಅರ್ಜುನ್‌(45), ಕಾಶವ್ವ(8), ಪೂಜಾ ಅರ್ಜುನ್‌(8), ಸವಿತಾ ಭೀಮಪ್ಪ(28) ಮೃತಟ್ಟಿದ್ದಾರೆ. ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ. ಘಟನಾ ಸ್ಥಳಕ್ಕೆ ಹಿರೇಬಾಗೇವಾಡಿ ಪೊಲೀಸರ ಭೇಟಿ ನೀಡಿ ಸ್ಥಳೀಯರ ಜತೆಗೂಡಿ ಬಿದ್ದ ಮನೆಯ ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ.

ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ

ಘಟನಾ ಸ್ಥಳಕ್ಕೆ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ನೀಡಿ ಮೃತ ಸಂಬಂಧಿಕರಿಗೆ ಸಾಂತ್ವಾನ ಹೇಳಿದರು. ಇನ್ನು ಈ ಘಟನೆ ಬಗ್ಗೆ ಹೆಬ್ಬಾಳ್ಕರ್ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದು, ಅದು ಈ ಕೆಳಗಿನಂತಿದೆ.
 
ಇವತ್ತು ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ಕ್ಷೇತ್ರದ ಬಡಾಲ ಅಂಕಲಗಿಯ ಖನಗಾವಿ ಎನ್ನುವರಿಗೆ ಸೇರಿದ್ದ ಮನೆಯ ಗೋಡೆ ಕುಸಿದಿದ್ದರ ಪರಿಣಾಮ ಮನೆಯ ಒಳಗಡೆಯಿದ್ದ 7 ಜನರ ಪೈಕಿ ಐದು ಜನ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರನ್ನು ಆಸ್ಪತೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಮೃತಪಟ್ಟಿರುವುದು ಮನಸ್ಸಿಗೆ ತೀವ್ರ ನೋವನ್ನುಂಟು ಮಾಡಿದೆ, ನಿಜಕ್ಕೂ ವಿಧಿ ಎಷ್ಟು ಕ್ರೂರಿ ಎನಿಸುತ್ತಿದೆ. 

ಅರ್ಜುನ ಹ ಖನಗಾವಿ, ಸತ್ಯವ್ವ ಅ ಖನಗಾವಿ, ಲಕ್ಷ್ಮೀ ಅ ಖನಗಾವಿ, ಪೂಜಾ ಅ ಖನಗಾವಿ, ಕಾಶೆವ್ವ ಕೊಳೆಪ್ಪನವರ, ಗಂಗವ್ವ ಭೀ ಖನಗಾವಿ, ಸವಿತಾ ಖನಗಾವಿ ಎಂಬುವವರೇ ಮೃತ ದುರ್ದೈವಿಗಳಾಗಿದ್ದಾರೆ.

ಮೃತರ ಕುಟುಂಬದವರ ನೋವಿನಲ್ಲಿ ನಾನು ಭಾಗಿಯಾಗಿದ್ದೇನೆ, ಅಗಲಿದ ಆತ್ಮಗಳಿಗೆ ಭಗವಂತ ಶಾಂತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ. ಸದ್ಯ ಘಟನೆಯ ಸ್ಥಳದಲ್ಲಿ ತಹಸಿಲ್ದಾರ, ಜಿಲ್ಲಾಧಿಕಾರಿಗಳು, ಸಿಪಿಆಯ್ ಹಾಗೂ ಮುಂತಾದ ಅಧಿಕಾರಿಗಳು ಹಾಜರಿದ್ದು, ಘಟನೆಯ ಕುರಿತು ಚರ್ಚಿಸಲಾಗುತ್ತಿದೆ.

click me!