2 ದಿನ ಕಿತ್ತೂರು ಉತ್ಸವಕ್ಕೆ ಮುಹೂರ್ತ ಫಿಕ್ಸ್: ದಿನಾಂಕ ಘೋಷಣೆ ಮಾಡಿದ ಕಾರಜೋಳ

By Suvarna News  |  First Published Oct 6, 2021, 5:14 PM IST

* ಕಿತ್ತೂರು ಉತ್ಸವ ಆಚರಣೆಗೆ ಮುಂದಾದ ಸರ್ಕಾರ
* 2 ದಿನ ಕಿತ್ತೂರು ಉತ್ಸವಕ್ಕೆ ಮುಹೂರ್ತ ಫಿಕ್ಸ್
* ದಿನಾಂಕ ಘೋಷಣೆ ಮಾಡಿದ ಸಚಿವ  ಗೋವಿಂದ್ ಕಾರಜೋಳ


ಬೆಳಗಾವಿ, (ಅ.06): ಎರಡು ದಿನ ಕಿತ್ತೂರು ಉತ್ಸವ (Kittur Utsav) ಆಚರಣೆಗೆ ಸರ್ಕಾರ ಮುಂದಾಗಿದೆ. ಈ ಬಗ್ಗೆ ಇಂದು (ಅ.06) ಬೆಳಗಾವಿಯಲ್ಲಿ ಕಿತ್ತೂರು ಉತ್ಸವ ಪೂರ್ವಭಾವಿಯಲ್ಲಿ ತೀರ್ಮಾನವಾಗಿದೆ.

ಕಿತ್ತೂರು ಉತ್ಸವ ಪೂರ್ವಭಾವಿ ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಗೋವಿಂದ್ ಕಾರಜೋಳ,  ಅಕ್ಟೋಬರ್ 23 ಮತ್ತು 24ರಂದು ಕಿತ್ತೂರು ಉತ್ಸವ ಆಯೋಜಿಸಲು ತೀರ್ಮಾನಿಸಿದ್ದೇವೆ ಎಂದು ಘೋಷಿಸಿದರು. 

Tap to resize

Latest Videos

ಬೆಳಗಾವಿ: ಕೊರೋನಾ ಕರಿನೆರಳು, ಸರಳವಾಗಿ ನಡೆದ ಕಿತ್ತೂರು ಉತ್ಸವ

 ಕಿತ್ತೂರು ಉತ್ಸವಕ್ಕೆ ಒಂದು ಕೋಟಿ ಅನುದಾನ ಒದಗಿಸುತ್ತೇವೆ. ಕೊರೋನಾ ನಿಯಮ ಪಾಲಿಸಿ ಉತ್ಸವ ಆಚರಿಸೋಣ ಎಂದು ತಿಳಿಸಿದರು.

ಎರಡು ದಿನ ಕಿತ್ತೂರು ಉತ್ಸವವನ್ನು ಎಲ್ಲ ಕಲಾವಿದರನ್ನು ಸೇರಿಸಿ ನಡೆಸೋಣ. ಕಿತ್ತೂರು ಗತವೈಭವದ ಅನಾವರಣ ಮಾಡುವಂತೆ ಉತ್ಸವ ಮಾಡೋಣ. 25ನೇ ಉತ್ಸವವನ್ನು ಅದ್ದೂರಿಯಾಗಿ, ಅರ್ಥಪೂರ್ಣವಾಗಿ ಆಚರಿಸುತ್ತೇವೆ ಎಂದು ಮಾಹಿತಿ ನೀಡಿದರು.

ಕೋವಿಡ್‌-19 ಕರಿನೆರಳಿನ ಹಿನ್ನೆಲೆಯಲ್ಲಿ ಕಳೆದ ವರ್ಷ ಕಿತ್ತೂರು ಉತ್ಸವವನ್ನು ಜಿಲ್ಲಾಡಳಿತದಿಂದ ಸರಳವಾಗಿ ಆಚರಿಸಲಾಗಿತ್ತು. ಆದ್ರೆ, ಈ ವರ್ಷ ಅದ್ಧೂರಿಯಾಗಿ ಆಚರಿಸಲಿ ತೀರ್ಮಾನವಾಗಿದೆ.

click me!