ಬೇಸಿಗೆ ಆರಂಭದಲ್ಲೇ ಸುರಿದ ವರುಣ : ತಂಪೆರೆದ ವರ್ಷಧಾರೆ

By Suvarna NewsFirst Published Mar 2, 2020, 1:08 PM IST
Highlights

ಬಿರು ಬೇಸಿಗೆ ನಡುವೆ ರಾಜ್ಯದ ಹಲವು ಪ್ರದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ. ಹಲವು ಜಿಲ್ಲೆಗಳು ವರುಣನ ಆಗಮನದಿಂದ ತಂಪಾಗಿವೆ. 

ಬೆಂಗಳೂರು [ಮಾ.02]:  ಬಿರು ಬಿಸಿಲಿನಿಂದ ಕಂಗಾಲಾದ ರಾಜ್ಯದ ಕಂಗಾಲಾದ ರಾಜ್ಯದ ವಿವಿಧ ಪ್ರದೇಶಗಳಲ್ಲಿ ವರುಣ ಅಬ್ಬರಿಸಿದ್ದಾರೆ. 

ಎಲ್ಲೆಡೆ ತೀವ್ರ ಬಿಸಿಲಿನ ತಾಪ ಹೆಚ್ಚಾಗುತ್ತಿರುವಾಗಲೇ ದಕ್ಷಿಣ ಕನ್ನಡ, ಮಂಡ್ಯ, ಉಡುಪಿ, ಮಡಿಕೇರಿ, ದಾವಣಗೆರೆ ಜಿಲ್ಲೆಗಳಲ್ಲಿ ಇಂದು ಬೆಳಗ್ಗಿನಿಂದಲೇ ಮಳೆ ಸುರಿದಿದೆ. 

ದಕ್ಷಿಣ ಕನ್ನಡದಲ್ಲಿ ಸೋಮವಾರ ಬೆಳಗ್ಗಿನಿಂದಲೇ ಧಾರಾಕಾರ ಮಳೆಯಾಗಿದೆ. ಇನ್ನು ಉಡುಪಿ ಜಿಲ್ಲೆಯಲ್ಲಿ ಭಾನುವಾರ ಮಧ್ಯ ರಾತ್ರಿಯಿಂದಲೂ ಕೂಡ ಎಡಬಿಡದೇ ಮಳೆ ಸುರಿದಿದೆ. 

ರಾಜ್ಯದ ಹಲವೆಡೆ ಸುರಿದ ಮಳೆ : ಮೋಡ ಕವಿದ ವಾತಾವರಣ..

ಇತ್ತ ಕಳೆದ ಮಳೆಗಾಲದಲ್ಲಿ ಭಾರೀ ಅನಾಹುತ ಎದುರಿಸಿದ್ದ ಮಡಿಕೇರಿಯಲ್ಲಿ ವರುಣನ ಸಿಂಚನವಾಗಿದ್ದು, ಸೋಮವಾರ ಮುಂಜಾನೆಯಿಂದ ತುಂತುರು ಮಳೆ ಸುರಿದಿದೆ.  ಮಡಿಕೇರಿ, ಭಾಗಮಂಡಲ, ಸುಂಟಿಕೊಪ್ಪ, ಹಾಕತ್ತೂರು, ನಾಪೊಕ್ಲು, ಗಾಳಿ ಬೀಡಿನಲ್ಲಿ ಮಳೆಯಾಗಿದೆ. 

ಇನ್ನು ಮಂಡ್ಯ ಜಿಲ್ಲೆಯಲ್ಲಿಯೂ ಕೂಡ ಜೋರಾಗಿಯೇ ಸುರಿದಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಭುವಿಗೆ ತಂಪೆರೆದಂತಾಯಿತು. 

ದಾವಣಗೆರೆ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿದೆ. 130 ಮಿಲಿ ಮೀಟರ್ ಮಳೆ ಸುರಿದಿದೆ.  

 

24 ಗಂಟೆಗಳ ಮಳೆ ನಕ್ಷೆ: 1st
ಮಾರ್ಚ್ 2020ರ 8.30AM ರಿಂದ 2nd
ಮಾರ್ಚ್ 2020 ರ 8.30AM ರವರೆಗೆ, ಅತ್ಯಧಿಕ 130 ಮಿಮೀ @ದಾವಣಗೇರೆ_ಹದಡಿ. pic.twitter.com/k5QcvLU9eG

— KSNDMC (@KarnatakaSNDMC)
click me!