Davanagere: ತುಂಗಾಭದ್ರಾ ಪ್ರವಾಹಕ್ಕೆ ಸಿಲುಕಿದ ಗಂಗಾನಗರ ನಿವಾಸಿಗಳ ಬದುಕು!

By Govindaraj S  |  First Published Jul 17, 2022, 3:01 AM IST

ತುಂಗಾಭದ್ರಾ ನದಿ ಉಕ್ಕಿ ಹರಿಯುತ್ತಿದ್ದು, ಹರಿಹರ ತಾಲೂಕಿನ ತುಂಗಾಭದ್ರಾ ನದಿ ತಟದಲ್ಲಿ ಅಕ್ಷರಶಃ ಪ್ರವಾಹ ಉಂಟಾಗಿದೆ. ತುಂಗಾಭದ್ರಾ ನದಿ ಪ್ರವಾಹದಲ್ಲಿ ಹರಿಹರ ಗಂಗಾನಗರದ 30ಕ್ಕೂ ಹೆಚ್ಚು ಕುಟುಂಬಗಳ ಬದುಕು ಮೂರಾಬಟ್ಟೆಯಾಗಿದೆ. 


ವರದಿ: ವರದರಾಜ್, ದಾವಣಗೆರೆ 

ದಾವಣಗೆರೆ (ಜು.17): ತುಂಗಾಭದ್ರಾ ನದಿ ಉಕ್ಕಿ ಹರಿಯುತ್ತಿದ್ದು, ಹರಿಹರ ತಾಲೂಕಿನ ತುಂಗಾಭದ್ರಾ ನದಿ ತಟದಲ್ಲಿ ಅಕ್ಷರಶಃ ಪ್ರವಾಹ ಉಂಟಾಗಿದೆ. ತುಂಗಾಭದ್ರಾ ನದಿ ಪ್ರವಾಹದಲ್ಲಿ ಹರಿಹರ ಗಂಗಾನಗರದ 30ಕ್ಕೂ ಹೆಚ್ಚು ಕುಟುಂಬಗಳ ಬದುಕು ಮೂರಾಬಟ್ಟೆಯಾಗಿದೆ. ಗಂಟೆ ಗಂಟೆಗು ನದಿ ನೀರಿನ ಮಟ್ಟ ಹೆಚ್ಚುತ್ತಿದ್ದು 30ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ದೊಡ್ಡ ಅವಾಂತರವಾಗಿದೆ. ಪ್ರವಾಹದ ನೀರಲ್ಲಿ ಪಾತ್ರೆ ಬಟ್ಟೆ ಬರೆ ಸಾಮಾನು ಸರಂಜಾಮುಗಳು ತೇಲಿಹೋಗಿವೆ. ಚಿಕ್ಕ ಚಿಕ್ಕ ಮನೆ ಗುಡಿಸಲು ಸಂಪೂರ್ಣ ಮುಳುಗಡೆ ಯಾಗಿದ್ದು ಸಂತ್ರಸ್ಥರು ಸರ್ವಸ್ವವನ್ನು‌ ಕಳೆದುಕೊಂಡಿದ್ದಾರೆ. ಪ್ರತಿ ಮಳೆಗಾಲದಲ್ಲು ನಮಗೆ ಇದು ಒಂಥರ ಶಿಕ್ಷೆಯಾಗಿದ್ದು ಇದರಿಂದ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ ಹಾದಿ ತುಳಿದಿದ್ದಾರೆ.

Tap to resize

Latest Videos

ಕಾಳಜಿ ಕೇಂದ್ರದಲ್ಲಿ ಪ್ರವಾಹ ಸಂತ್ರಸ್ಥ ಕುಟುಂಬಗಳು: ನೆರೆಯ ಹೊಡೆತಕ್ಕೆ ಸಿಲುಕಿರುವ 30 ಕ್ಕು ಹೆಚ್ಚು ಕುಟುಂಬಗಳಿಗೆ ಎಪಿಎಂಸಿ ಆವರಣದಲ್ಲಿ ಗಂಜಿಕೇಂದ್ರ ತೆರೆಯಲಾಗಿದೆ. ಸಂತ್ರಸ್ಥ ಕುಟುಂಬಗಳನ್ನು ಸ್ಥಳಾಂತರ ಮಾಡಿ ಅವರ ವಸತಿಗೆ ವ್ಯವಸ್ಥೆ ಮಾಡಿದೆ. ಆದ್ರೆ ನಮಗೆ ಕಾಳಜಿ ಕೇಂದ್ರದ ವಸತಿ ಬೇಡ ಎಂದು ಶಾಶ್ವತ ಸೂರು ಬೇಕೆಂದು ಸಂತ್ರಸ್ಥರು ಪಟ್ಟು ಹಿಡಿದಿದ್ದಾರೆ.

ಮಲೆನಾಡಿನಲ್ಲಿ ಮತ್ತೆ ಮಳೆಯಬ್ಬರ: ಅನೇಕ ಕಡೆ ರಸ್ತೆ, ಭೂಕುಸಿತ

ಕಾಂಗ್ರೆಸ್ ಶಾಸಕರಿಗೆ ಹಿಡಿಶಾಪ ಹಾಕುತ್ತಿರುವ ಸಂತ್ರಸ್ಥರು: ಪ್ರವಾಹ ಪೀಡಿತ ಸಂತ್ರಸ್ಥರಿಂದ ಪ್ರತಿಭಟನೆಗೆ ಕಾಂಗ್ರೇಸ್ ಮುಖಂಡರ ವಿರೋಧ ವ್ಯಕ್ತಪಡಿಸಿದ್ದಾರೆ. ಹರಿಹರದ ಗಂಗಾನಗರ ನಿವಾಸಿಗಳಿಂದ ಕಳೆದ ಎರಡು ದಿನಗಳಿಂದ  ಪ್ರತಿಭಟನೆ  ನಡೆಯುತ್ತಿದೆ. ಪ್ರವಾಹದ ನೀರು ನುಗ್ಗಿ ಮನೆ ಬಿಟ್ಟು ಕಾಳಜಿ ಕೇಂದ್ರದಲ್ಲಿ ಆಸರೆ ಪಡೆದಿದ್ದಾರೆ. ಶಾಶ್ವತ ಸೂರು ಬೇಕೆಂದು ನಿನ್ನೆ ನಗರಸಭೆ ಮುಂದೆ ಪ್ರತಿಭಟನೆ ನಡೆಸಿದ್ದರು. ಅದಕ್ಕೆ ಕಾಂಗ್ರೆಸ್ ನಗರಸಭೆ ಸದಸ್ಯರು, ಸ್ಥಳೀಯ  ಮುಖಂಡರ ವಿರೋಧ ವ್ಯಕ್ತಪಡಿಸಿದ್ದಾರೆ.

ಶಾಶ್ವತ ಸೂರು ಕೊಡದ ಕಾಂಗ್ರೆಸ್ ಶಾಸಕ ಎಸ್ ರಾಮಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳೀಯ  ಜನಪ್ರತಿನಿಧಿಗಳಿಗೆ ನಾಚಿಕೆಯಾಗಬೇಕು ಎಂದು ಗಂಗಾನಗರ ಪ್ರವಾಹ ಪೀಡಿತ ಸಂತ್ರಸ್ಥರು ಹಿಡಿಶಾಪ ಹಾಕಿದ್ದಾರೆ‌. ಪ್ರವಾಹ ಪೀಡಿತ ಸಂತ್ರಸ್ಥರಿಂದ ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಶನಿವಾರ ಹರಿಹರ ತಾಲ್ಲೂಕ್ ಕಚೇರಿ ಮುಂದೆ ಗಂಗಾನಗರ ನಿವಾಸಿಗಳು ಮಕ್ಕಳು‌ ಮರಿಸಮೇತ ಪ್ರತಿಭಟನೆ ನಡೆಸಿದರು. 30ಕ್ಕು ಹೆಚ್ಚು ಕುಟುಂಬಗಳು ನಮಗೆ ನಿವೇಶನ ಕೊಡಿ ಎಂದು ಪಟ್ಟು ಹಿಡಿದು ಜಿಲ್ಲಾಧಿಕಾರಿ ಕಚೇರಿ ಬಾಗಿಲು ತಟ್ಟಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಮುಂದೆ ಗಂಗಾನಗರ ನಿವಾಸಿಗಳ ಪ್ರತಿಭಟನೆ: ಹರಿಹರ ತಾಲ್ಲೂಕ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಗಂಗಾನಗರ ನಿವಾಸಿಗಳು ದಾವಣಗೆರೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗವು ಪ್ರತಿಭಟನೆ ಧರಣಿ ನಡೆಸಿದ್ದಾರೆ.‌ ಕಚೇರಿ ಮುಂಭಾಗ ಮಕ್ಕಳ ಜೊತೆ ಅಡುಗೆ ಮಾಡಿ ಶಾಶ್ವತ ಸೂರಿಗೆ ಆಗ್ರಹಿಸಿದ್ದಾರೆ. ತುಂಗಾಭದ್ರ ನದಿಯ ನೀರಿನ ಮಟ್ಟ ಹೆಚ್ಚಾಗಿ 30 ಮನೆಗಳು ಜಲಾವೃತವಾಗಿವೆ. ಪ್ರತಿ ವರ್ಷಕೂಡ ಇದೇ ಪರಿಸ್ಥಿತಿ ಇಲ್ಲಿನ ಜನರು ಅನುಭವಿಸುತ್ತಿದ್ದಾರೆ.ಬೇರಡೆ ನಿವೇಶನ ನೀಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬೆಳಗ್ಗೆಯಿಂದಲೂ ಪ್ರತಿಭಟನೆ ನಡೆಸಿದ್ದಾರೆ. 

ಮಕ್ಕಳು ಹೊರಹೋದ ಅರ್ಧ ತಾಸಲ್ಲಿ ಸರ್ಕಾರಿ ಶಾಲೆ ಚಾವಣಿ ಪದರ ಕುಸಿತ!

ಪುಟ್ಟ ಪುಟ್ಟ ಕಂದಮ್ಮಗಳನ್ನು ಹಿಡಿದು ಪ್ರತಿಭಟನೆಗೆ ಕೂತ ಮಹಿಳೆಯರು ಬೇಡಿಕೆ ಈಡೇರದ ಹೊರತು ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಕಾಳಜಿ ಕೇಂದ್ರದ ಬದಲು ಜಿಲ್ಲಾಧಿಕಾರಿ ಕಚೇರಿಗಳ ಮುಂಭಾಗವೇ ಇರುತ್ತೆವೆ. ಜಿಲ್ಲಾಧಿಕಾರಿಗಳು ಬಂದು ಮನವಿ ಸ್ವೀಕಾರ ಮಾಡುವರೆಗೂ ಸ್ಥಳದಿಂದ ಹೋಗುವುದಿಲ್ಲ ಎಂದು ನಿವಾಸಿಗಳ ಪ್ರತಿಭಟನೆಗೆ ನಡೆಸಿದ್ದಾರೆ. ಪ್ರತಿಭಟನೆಗೆ ಜಯಕರ್ನಾಟಕ ಸಂಘಟನೆ ಸಾಥ್ ನೀಡಿದೆ.

click me!