ಕೋಲಾರ ಜಿಲ್ಲೆಗೆ ಅವಧಿಗೂ ಮುನ್ನವೇ ಮುಂಗಾರು ಮಳೆ ಆಗಮನ!

By Govindaraj S  |  First Published Jul 17, 2022, 2:02 AM IST

* ಜಿಲ್ಲೆಯಲ್ಲಿ ಕೃಷಿ ಬೆಳೆಗಳಿಗೆ ಅನುಕೂಲಕರ ವಾತಾವರಣ ನಿರ್ಮಾಣ!
* ಬಿತ್ತನೆ ಬೀಜ, ರಸಗೊಬ್ಬರ ಬೆಲೆ ಏರಿಕೆಯಾಗದಂತೆ ರೈತರ ಒತ್ತಾಯ!
* ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ, ರಸಗೊಬ್ಬರಕ್ಕೆ ಅನ್ನದಾತರ ಆಗ್ರಹ!


ವರದಿ: ದೀಪಕ್,ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ

ಕೋಲಾರ (ಜು.17): ಜಿಲ್ಲೆಯಲ್ಲಿ ಅವಧಿಗೆ ಮೊದಲೇ ಕೃಷಿ ಚಟುವಟಿಕೆಗಳು ಶುರುವಾಗಿದೆ. ಜಿಲ್ಲೆಯಲ್ಲಿ ಅವಧಿಗೆ ಮುನ್ನವೇ ಮುಂಗಾರು ಮಳೆ ಆಗ್ತಿರೋದ್ರಿಂದ ಬಿತ್ತನೆ ಕಾರ್ಯಕ್ಕೆ ಸಿದ್ದತೆಯಾಗಿದೆ. ರೈತರ ಅಗತ್ಯಕ್ಕೆ ತಕ್ಕಂತೆ ಕೃಷಿ ಪರಿಕರಗಳನ್ನ ಸಿದ್ದಪಡಿಸಿಕೊಂಡಿದ್ದಾರೆ. ಆದ್ರೆ, ಕೋಲಾರ ಜಿಲ್ಲೆಗೆ ನೀರನ್ನ ಕೊಟ್ಟಿರೋ ಸರ್ಕಾರ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕ್ರಿಮಿನಾಶಕ ಬೆಲೆ ಏರಿಕೆಯನ್ನ ತಡೆಯುವಂತೆ ಅನ್ನದಾತರು ಒತ್ತಾಯಿಸಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ಅವಧಿಗೆ ಮೊದಲೇ ಮುಂಗಾರು ಹಂಗಾಮಿಗಾಗಿ ಕೃಷಿ ಕ್ಷೇತ್ರವು ತಯಾರಾಗಿದೆ. 

Tap to resize

Latest Videos

ನದಿ - ನಾಲೆಗಳು ಇಲ್ಲದ ಈ ಜಿಲ್ಲೆಯಲ್ಲಿ ಮಳೆಯಾಶ್ರಿತ ಬೆಳೆಗಳು ಪ್ರಮುಖವಾಗಿವೆ. ಇತ್ತೀಚೆಗೆ ಕೆಸಿ ವ್ಯಾಲಿ ಯೋಜನೆಗಳಿಂದ ಕೆರೆಗಳು ತುಂಬಿರೋದ್ರಿಂದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಜೋರಾಗಿದೆ. ಜಿಲ್ಲೆಯಲ್ಲಿನ ಒಂದು ಲಕ್ಷ ಹೆಕ್ಟೇರ್‌ನಷ್ಟು ಕೃಷಿ ಪ್ರದೇಶದಲ್ಲಿ ಈ ಸಲ ಬಿತ್ತನೆಯ ಗುರಿಯನ್ನ ಹೊಂದಲಾಗಿದೆ. ಇದರಿಂದಾಗಿ ಜಿಲ್ಲೆಯ ರೈತರೂ ಕೂಡಾ ಮುಂಗಾರು ಹಂಗಾಮಿನ ಬೇಸಾಯದ ಕೆಲಸಗಳಲ್ಲಿ ನಿರತರಾಗಿದ್ದಾರೆ. ವಿವಿಧ ಬೆಳೆಗಳ ಬಿತ್ತನೆಯನ್ನ ಮಾಡುವ ರೈತರು ಅಗತ್ಯ ತಯಾರಿಯನ್ನ ಮಾಡಿಕೊಂಡಿದ್ದಾರೆ.

ಅಗತ್ಯ ವಸ್ತುಗಳ ದರ ಏರಿಕೆಗೆ ಬಿಜೆಪಿ ಕಾರಣ: ನಾರಾಯಣಸ್ವಾಮಿ

ಕೋಲಾರ ಜಿಲ್ಲೆಯಲ್ಲಿ ಪ್ರತಿ ವರ್ಷವೂ 745 ಮಿಲಿ ಮೀಟರ್ ವಾಡಿಕೆ ಮಳೆಯನ್ನ ನಿರೀಕ್ಷೆ ಮಾಡಲಾಗುತ್ತದೆ. ಆದ್ರೆ, ಕಳೆದ ಎರಡು ವರ್ಷಗಳಿಂದ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಜಿಲ್ಲೆಯಲ್ಲಿ ಮಳೆಯಾಗಿದೆ. ಕೋಲಾರ ಜಿಲ್ಲೆಯಲ್ಲಿ ರಾಗಿಯನ್ನ ಪ್ರಮುಖವಾಗಿ ಬೆಳೆಯುತ್ತಾರೆ. ಇದರ ಜೊತೆಗೆ ತೊಗರಿ,ಅವರೆ, ಅಲಸಂದಿ ಮತ್ತು ಶೇಂಗಾ ಬೆಳೆಯನ್ನ ಇಲ್ಲಿ ಬೆಳೆಯುತ್ತಾರೆ. ಈಗಾಗಲೇ ರಾಗಿ, ತೊಗರಿ, ಅವರೆ, ಶೇಂಗಾ ಮತ್ತು ಅಲಸಂದಿ ಬಿತ್ತನೆ ಮಾಡಲು ಭೂಮಿಯನ್ನ ರೈತರು ಹದ ಮಾಡಿಕೊಂಡಿದ್ದು, ಬಿತ್ತನೆ ಬೀಜಕ್ಕಾಗಿ, ರಸಗೊಬ್ಬರಕ್ಕಾಗಿ ಕಾಯುತ್ತಿದ್ದಾರೆ.

ಜಿಲ್ಲೆಯಲ್ಲಿ ಅವಧಿಗೆ ಮುನ್ನವೇ ಮುಂಗಾರು ಆಗಮಿಸಿರುವ ಹಿನ್ನಲೆಯಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ.ಮುಂಗಾರು ಹಂಗಾಮಿನ ಬೆಳೆಗಳಿಗೆ ಅಗತ್ಯವಿರುವ ಬಿತ್ತನೆ ಬೀಜ, ವಿವಿಧ ರಸಗೊಬ್ಬರಗಳು ಹಾಗೂ ಕ್ರಿಮಿನಾಶಕಗಳನ್ನ ಕೃಷಿ ಇಲಾಖೆಯೂ ಅಭಾವವಿಲ್ಲದೆ ದಾಸ್ತಾನು ಮಾಡಿಕೊಂಡಿದೆ. ಆದ್ರೆ, ಕೋಲಾರ ಜಿಲ್ಲೆಯ ಕೆರೆಗಳಿಗೆ ಕೆ.ಸಿ ವ್ಯಾಲಿ ಯೋಜನೆ ಮೂಲಕ ನೀರು ಬೀಡುತ್ತಿರುವ ಸರ್ಕಾರ, ಅನ್ನದಾತರಿಗೆ ಬೇಕಾಗಿರೋ ಬಿತ್ತನೆ ಬೀಜ, ರಸಗೊಬ್ಬರಗಳ ಬೆಲೆ ಏರಿಸದಂತೆ ಸಬ್ಸಿಡಿ ದರದಲ್ಲಿ ಸರಬರಾಜು ಮಾಡುವಂತೆ ಒತ್ತಾಯಿಸಿದ್ದಾರೆ.

ಸೂಕ್ತ ಬೆಲೆ ಇಲ್ಲ ಎಸೆಯಲು ಜಾಗ ಇಲ್ಲ: ಟೊಮೆಟೋ ಬೆಳೆಗಾರರ ಕಣ್ಣೀರಿನ ಕತೆ

ಒಟ್ಟಿನಲ್ಲಿ,ಮುಂಗಾರು ಹಂಗಾಮಿಗೆ ಅಗತ್ಯ ಸಿದ್ದತೆಗಳನ್ನ ಮಾಡಿಕೊಂಡಿರುವ ರೈತರು,ಈ ಸಲ ಹೆಚ್ಚು ಇಳುವರಿಯ ನಿರೀಕ್ಷೆಯನ್ನ ಇರಿಸಿಕೊಂಡಿರುವುದು ವಿಶೇಷವಾಗಿದೆ. ಬಿತ್ತನೆ ಸಮಯ ಹಾಗೂ ತದ ನಂತರದ ಸಮಯಕ್ಕೆ ಮಳೆ ಬಂದರೆ ಅನ್ನದಾತನ ಮುಖದಲ್ಲಿ ಮಂದಹಾಸ ಮೂಡಲಿದೆ.

click me!