ವೈದ್ಯಕೀಯ ಕ್ಷೇತ್ರದಲ್ಲಿ ವಿಪುಲ ಅವಕಾಶ : ಎಂಜಿನಿಯರಿಂಗ್‌ ಎಷ್ಟೇ ಬೆಳೆದರೂ ಇಂದಿಗೂ ಶುಶ್ರೂಷಕರು ಬೇಕು

By Kannadaprabha News  |  First Published Oct 12, 2022, 4:29 AM IST

ಇತ್ತೀಚೆಗೆ ವೈದ್ಯಕೀಯ ಕ್ಷೇತ್ರದಲ್ಲಿ ವಿಪುಲ ಅವಕಾಶ ಸೃಷ್ಟಿಯಾಗಿದ್ದು, ಎಂಜಿನಿಯರಿಂಗ್‌ ಕ್ಷೇತ್ರ ಎಷ್ಟೇ ಬೆಳೆದಿದ್ದರೂ ವೈದ್ಯಕೀಯ ಕ್ಷೇತ್ರದಲ್ಲಿ ವೈದ್ಯರು ಮತ್ತು ಶುಶ್ರೂಷಕರ ಕಾರ್ಯವನ್ನು ವಶಕ್ಕೆ ಪಡೆಯಲು ಸಾಧ್ಯವಾಗಿಲ್ಲ ಎಂದು ತಮಿಳುನಾಡಿನ ನಮಕ್ಕಲ್‌ನ ಅಣ್ಣೈ ಜೆಕೆಕೆ ಸಂಪೂರಾಣಿ ಅಮ್ಮಾಳ್‌ ನರ್ಸಿಂಗ್‌ ಕಾಲೇಜಿನ ಡೀನ್‌ ಡಾ. ಜಯಸೀಲನ್‌ ಮಾಣಿಕ್ಕಮ್‌ ದೇವದಾಸನ್‌ ತಿಳಿಸಿದರು.


   ಮೈಸೂರು (ಅ.12):  ಇತ್ತೀಚೆಗೆ ವೈದ್ಯಕೀಯ ಕ್ಷೇತ್ರದಲ್ಲಿ ವಿಪುಲ ಅವಕಾಶ ಸೃಷ್ಟಿಯಾಗಿದ್ದು, ಎಂಜಿನಿಯರಿಂಗ್‌ ಕ್ಷೇತ್ರ ಎಷ್ಟೇ ಬೆಳೆದಿದ್ದರೂ ವೈದ್ಯಕೀಯ ಕ್ಷೇತ್ರದಲ್ಲಿ ವೈದ್ಯರು ಮತ್ತು ಶುಶ್ರೂಷಕರ ಕಾರ್ಯವನ್ನು ವಶಕ್ಕೆ ಪಡೆಯಲು ಸಾಧ್ಯವಾಗಿಲ್ಲ ಎಂದು ತಮಿಳುನಾಡಿನ ನಮಕ್ಕಲ್‌ನ ಅಣ್ಣೈ ಜೆಕೆಕೆ ಸಂಪೂರಾಣಿ ಅಮ್ಮಾಳ್‌ ನರ್ಸಿಂಗ್‌ ಕಾಲೇಜಿನ ಡೀನ್‌ ಡಾ. ಜಯಸೀಲನ್‌ ಮಾಣಿಕ್ಕಮ್‌ ದೇವದಾಸನ್‌ ತಿಳಿಸಿದರು.

ಜೆಎಸ್‌ಎಸ್‌ ಆಸ್ಪತ್ರೆಯ (JSS Hospital) ರಾಜೇಂದ್ರ ಸಭಾಂಗಣದಲ್ಲಿ ಮಂಗಳವಾರ ಜೆಎಸ್‌ಎಸ್‌ ನರ್ಸಿಂಗ್‌ ಕಾಲೇಜು (Collage) ಆಯೋಜಿಸಿದ್ದ ಚಿಕಿತ್ಸಾ ವಿಧಾನದಲ್ಲಿ ರೂಪಾಂತರತೆ ಕುರಿತ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

Latest Videos

undefined

ಮುಂದಿನ ದಿನಗಳಲ್ಲಿ ವೈದ್ಯರು, ಶುಶ್ರುಷಕಿಯರು ಇಲ್ಲವಾಗುತ್ತಾರೆ. ರೋಬೊಟ್‌ಗಳೇ ಚಿಕಿತ್ಸೆ ನೀಡುತ್ತವೆ ಎಂದು ಸುಮಾರು 40 ವರ್ಷಗಳ ಹಿಂದೆಯೇ ಹೇಳುತ್ತಿದ್ದರು. ಆದರೆ ಯಾವ ತಂತ್ರಜ್ಞಾನವು ವೈದ್ಯರು ಮತ್ತು ಶುಶ್ರೂಷಕರ ಕಾರ್ಯವನ್ನು ವಶಕ್ಕೆ ಪಡೆದಿಲ್ಲ. ಕೃತಕ ಬುದ್ಧಿಮತ್ತೆ, ಬಾಟ್‌ ತಂತ್ರಜ್ಞಾನ ಕೂಡ ಸೇವೆ ಬದಲಿಸಲು ಆಗಿಲ್ಲ ಎಂದು ಅವರು ಹೇಳಿದರು.

ಶುಶ್ರೂಶಕರು ಅತ್ಯವಶ್ಯಕ:

ರೋಗಿಯ ಆರೈಕೆಗೆ ಶುಶ್ರೂಷಕರು ಬೇಕೇಬೇಕು. ರೋಗಿಯ ಆರೈಕೆ, ಶುಶ್ರೂಷಕರ ಕಾಳಜಿ ಬಗ್ಗೆ ಫ್ಲಾರೆ®್ಸ… ನೈಟಿಂಗೇಲ್‌ ಹೇಳಿದ ಪಾಠ ಅನುಕರಣೀಯ. ಕಾಯಿಲೆ ಗುಣವಾಗಬೇಕಾದರೆ ಸ್ವಚ್ಛತೆ ಎಷ್ಟುಮುಖ್ಯ ಎಂಬುವ ಪ್ರಥಮ ಪಾಠಗಳು ಕೋವಿಡ್‌ ವೇಳೆ ಪದೇಪದೇ ಕೈತೊಳೆದುಕೊಳ್ಳುವಾಗ ಎಲ್ಲರಿಗೂ ನೆನಪಾಯಿತು. ಶುಶ್ರೂಷಕರು ಸ್ವಚ್ಛತೆಗೆ ಮೊದಲ ಪ್ರಾಧಾನ್ಯತೆ ನೀಡಬೇಕು ಎಂದು ಅವರು ಕಿವಿಮಾತು ಹೇಳಿದರು.

ಶುಶ್ರೂಷಕರ ಸ್ಪರ್ಶದಿಂದ ಸಿಗುವ ಆರೈಕೆ ಅನುಭವವನ್ನು ಯಾವುದೇ ತಂತ್ರಜ್ಞಾನ ನೀಡಲಾಗದು. ಕೋವಿಡ್‌ಗೂ ಮೊದಲು ನರ್ಸಿಂಗ್‌ ಶಿಕ್ಷಣದಿಂದ ಹಲವರು ವಿಮುಖರಾಗಿದ್ದರು. ಆದರೆ, ಶುಶ್ರೂಷಕರ ಬೆಲೆ ಎಲ್ಲರಿಗೂ ತಿಳಿಯಿತು. ಎಂದು ಅವರು ಹೇಳಿದರು.

ಕೋಯಿಕೋಡ್‌ನ ಬೇಬಿ ಮೆಮೋರಿಯಲ್‌ ಆಸ್ಪತ್ರೆಯ ನರ್ಸಿಂಗ್‌ ವಿಭಾಗದ ಅಧಿಕಾರಿ ಪೊ›. ಎಲಿಜಬೆತ್‌ ವಾರ್ಕಿ ಮಾತನಾಡಿ, ಪದವಿ ಮುಗಿದ ನಂತರ ಉದ್ಯೋಗ ಅರಸಿ ಬೇರೋಲ್ಲೋ ಹೋಗುವುದಕ್ಕಿಂತ ನಿಮ್ಮ ಊರಿನ ರೋಗಿಗಳಿಗೆ ಆರೈಕೆ ಮಾಡಬೇಕು. ನಾವು ಬದುಕುವ ಪರಿಸರವನ್ನು ಆರೋಗ್ಯಪೂರ್ಣವಾಗಿಸುವುದು ಎಲ್ಲರ ಜವಾಬ್ದಾರಿ ಎಂದು ಸಲಹೆ ನೀಡಿದರು.

ಕಾಲೇಜಿನ ಪ್ರಾಂಶುಪಾಲೆ ಪೊ›.ಎಂ.ಕೆ. ಅಶ್ವಥಿದೇವಿ, ಜೆಎಸ್‌ಎಸ್‌ ವಿದ್ಯಾಪೀಠದ ಉಪ ನಿರ್ದೇಶಕ ಡಾ. ಶ್ಯಾಮ ಪ್ರಸಾದ್‌ ಶೆಟ್ಟಿಇದ್ದರು.

 ವೈದ್ಯಕೀಯ ಕ್ಷೇತ್ರದಲ್ಲಿ ವಿಪುಲ ಅವಕಾಶ ಸೃಷ್ಟಿ

:  ಇತ್ತೀಚೆಗೆ ವೈದ್ಯಕೀಯ ಕ್ಷೇತ್ರದಲ್ಲಿ ವಿಪುಲ ಅವಕಾಶ ಸೃಷ್ಟಿ

ಎಂಜಿನಿಯರಿಂಗ್‌ ಕ್ಷೇತ್ರ ಎಷ್ಟೇ ಬೆಳೆದರೂ ಇಂದಿಗೂ ಶುಶ್ರೂಷಕರು ಬೇಕು

ವೈದ್ಯರು ಮತ್ತು ಶುಶ್ರೂಷಕರ ಕಾರ್ಯವನ್ನು ವಶಕ್ಕೆ ಪಡೆಯಲು ಸಾಧ್ಯವಾಗಿಲ್ಲ

- ಅಣ್ಣೈ ಜೆಕೆಕೆ ಸಂಪೂರಾಣಿ ಅಮ್ಮಾಳ್‌ ನರ್ಸಿಂಗ್‌ ಕಾಲೇಜಿನ ಡೀನ್‌ ಡಾ. ಜಯಸೀಲನ್‌ ಅಭಿಮತ

ಜೆಎಸ್‌ಎಸ್‌ ಆಸ್ಪತ್ರೆಯ ರಾಜೇಂದ್ರ ಸಭಾಂಗಣದಲ್ಲಿ ಮಂಗಳವಾರ ಜೆಎಸ್‌ಎಸ್‌ ನರ್ಸಿಂಗ್‌ ಕಾಲೇಜು ಆಯೋಜಿಸಿದ್ದ ಚಿಕಿತ್ಸಾ ವಿಧಾನದಲ್ಲಿ ರೂಪಾಂತರತೆ ಕುರಿತ ವಿಚಾರ ಸಂಕಿರಣ

ಮುಂದಿನ ದಿನಗಳಲ್ಲಿ ವೈದ್ಯರು, ಶುಶ್ರುಷಕಿಯರು ಇಲ್ಲವಾಗುತ್ತಾರೆ. ರೋಬೊಟ್‌ಗಳೇ ಚಿಕಿತ್ಸೆ ನೀಡುತ್ತವೆ

ಉತ್ತರ ಕನ್ನಡದಲ್ಲಿ ಶೀಘ್ರ ಆಸ್ಪತ್ರೆ

 ಉತ್ತರಕನ್ನಡ ಜಿಲ್ಲೆಯಲ್ಲಿ ಶೀಘ್ರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ‌  ನಿರ್ಮಾಣ ಮಾಡುತ್ತೇವೆ. ಜಿಲ್ಲೆಯ ಕುಮಟಾದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದ್ದು, ಸ್ಥಳವನ್ನು ನಿಗದಿ ಮಾಡಿದ ನಂತರ ಒಂದೆರಡು ದಿನದಲ್ಲಿ ನಿರ್ಧಾರ ಮಾಡಲಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಹೇಳಿದ್ದಾರೆ. ಕಾರವಾರದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾಧ್ಯಮದ ಜತೆ ಮಾತನಾಡಿದ ಸಚಿವರು, ಇಡೀ‌ ಜಿಲ್ಲೆಯ ಜನರಿಗೆ ಉಪಯೋಗ ಆಗುವಂತೆ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತದೆ. ಆರೋಗ್ಯ ಕ್ಷೇತ್ರದಲ್ಲಿ ಕರ್ನಾಟಕ ಸ್ವರ್ಗ ಇದ್ದಂತೆ. ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಆರೋಗ್ಯ ಕ್ಷೇತ್ರ ತುಂಬಾ ಚೆನ್ನಾಗಿದೆ. ನಾನು ತಮಾಷೆಗಾಗಿ ಈ ಮಾತು ಹೇಳ್ತಾ ಇಲ್ಲ, ಇರೋ ಸತ್ಯವನ್ನೇ ಹೇಳುತ್ತಾ ಇದ್ದೇನೆ. ಎರಡು ವರ್ಷದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳು ಆಗ್ತಾಯಿದೆ ಎಂದು ಹೇಳಿದ ಸಚಿವರು, ಕಾರವಾರ ಸಿವಿಲ್ ಆಸ್ಪತ್ರೆಗೆ ಎಂಆರ್‌ಐ ಸ್ಕ್ಯಾನರ್ ಹಾಗೂ ಜಿಲ್ಲೆಗೆ ಹತ್ತು ಡಯಾಲಿಸಿಸ್ ಮಷಿನ್‌ಗಳನ್ನು ನೀಡಲಾಗುವುದು. ಅಲ್ಲದೇ, ಆರ್ಥೋಪೆಡಿಕ್ ವಿಭಾಗ ಸೇರಿದಂತೆ ವೈದ್ಯಾಧಿಕಾರಿಗಳು ಕೇಳಿರುವ ಹಲವು ಬೇಡಿಕೆಗಳನ್ನು ಪೂರೈಸಲಾಗುವುದು ಎಂದ ಆರೋಗ್ಯ ಸಚಿವರು ತಿಳಿಸಿದ್ದಾರೆ.

ಸಿಟಿ ಸ್ಜ್ಯಾನ್ ನಿರ್ವಹಣೆ ಕುರಿತು‌ ಅಸಮಾಧಾನ; ಆರೋಗ್ಯ ಸಚಿವರಿಂದ ಕ್ಲಾಸ್
ಉತ್ತರಕನ್ನಡ ಜಿಲ್ಲೆಯ ಕಾರವಾರದ ಸಿವಿಲ್ ಆಸ್ಪತ್ರೆಗೆ ಇಂದು ಭೇಟಿ ನೀಡಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ‌. ಕೆ. ಸುಧಾಕರ್ ಆಸ್ಪತ್ರೆಯ ಡೀನ್, ಸರ್ಜನ್ ಸೇರಿದಂತೆ ಇತರರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. 150 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 450 ಬೆಡ್‌ಗಳ ಕಾರವಾರ‌ ಮೆಡಿಕಲ್ ಕಾಲೇಜು ಆಸ್ಪತ್ರೆ ಕಾಮಗಾರಿ ವೀಕ್ಷಿಸಿದ ಆರೋಗ್ಯ‌ ಸಚಿವರು, ಬಳಿಕ ವಿದ್ಯಾರ್ಥಿನಿಯರ ವಸತಿ ಗೃಹ ಉದ್ಘಾಟಿಸಿ, ಸೌಲಭ್ಯಗಳನ್ನು ವೀಕ್ಷಿಸಿದ್ದರು. ನಂತರ ನೇರವಾಗಿ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕಿ ರೂಪಾಲಿ ನಾಯ್ಕ್ ಜತೆ ಸಿವಿಲ್ ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು, ಸಿವಿಲ್ ಆಸ್ಪತ್ರೆಯ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. 

click me!