ಮೈಸೂರಿನಿಂದ ಜೀವಂತ ಹೃದಯ ರವಾನೆ

By Suvarna NewsFirst Published Feb 11, 2020, 3:23 PM IST
Highlights

ಮಂಗಳೂರಿನಿಂದ ಮೈಸೂರಿಗೆ ಕೇವಲ 4.30 ನಿಮಿಷದಲ್ಲಿ ಆಂಬುಲೆನ್ಸ್‌ ತಲುಪಿಸಿದ ಚಾಲಕ ಹನೀಫ್ ಇತ್ತೀಚೆಗಷ್ಟೇ ಸುದ್ದಿಯಾಗಿದ್ದರು. ಹಸುಗೂಸನ್ನು ಸುರಕ್ಷಿತವಾಗಿ ತಲುಪಿಸಿದ ಹಿರಿಮೆ ಹನೀಫ್ ಹಾಗೂ ಪೊಲೀಸರಿಗೆ ಸಂದಿತ್ತು.

ಮೈಸೂರು(ಫೆ.11): ಮಂಗಳೂರಿನಿಂದ ಮೈಸೂರಿಗೆ ಕೇವಲ 4.30 ನಿಮಿಷದಲ್ಲಿ ಆಂಬುಲೆನ್ಸ್‌ ತಲುಪಿಸಿದ ಚಾಲಕ ಹನೀಫ್ ಇತ್ತೀಚೆಗಷ್ಟೇ ಸುದ್ದಿಯಾಗಿದ್ದರು. ಹಸುಗೂಸನ್ನು ಸುರಕ್ಷಿತವಾಗಿ ತಲುಪಿಸಿದ ಹಿರಿಮೆ ಹನೀಫ್ ಹಾಗೂ ಪೊಲೀಸರಿಗೆ ಸಂದಿತ್ತು.

ಇದೀಗ ಮೈಸೂರಿನಿಂದ ಮತ್ತೊಂದು ಜೀವಂತ ಹೃದಯ ರವಾನೆ ಕೆಲಸ ನಡೆದಿದೆ. ಮೈಸೂರಿನ ಅಪೋಲೋ ಆಸ್ಪತ್ರೆಯಿಂದ ಬೆಂಗಳೂರಿನ ನಾರಾಯಣ ಹೃದಾಯಾಲಕ್ಕೆ ಹೃದಯ ರವಾನೆ ಕೆಲಸ ನಡೆದದಿದೆ.

'ಝೀರೋ ಟ್ರಾಫಿಕ್ ಹೀರೋ' : ಹನೀಫ್‌ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ

ಮದನ ರಾಜ್(22) ಎಂಬ ಯುವಕನ ಹೃದಯ ಶಿಫ್ಟ್ ಮಾಡಲಾಗಿದೆ. ಕಳೆದ 9 ನೇ ತಾರೀಕಿನಂದು ಪಿರಿಯಾಪಟ್ಟಣದ ಕೊಪ್ಪ ಬಳಿ ರಸ್ತೆ ಅಪಘಾತವಾಗಿತ್ತು. ಅಪಘಾತದ ಬಳಿಕ ಮೆದುಳು ನಿಷ್ಕ್ರಿಯಗೊಂಡಿದ್ದರಿಂದ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಅಂಗಾಂಗಗಳ ದಾನಕ್ಕೆ ಮುಂದಾಗಿದ್ದಾರೆ. ಗ್ರೀನ್ ಕಾರಿಡಾರ್ ರಸ್ತೆ ಮೂಲಕ ಸಾಗಲಿರುವ ಹೃದಯ, ಪೋಲಿಸ್ ಭದ್ರತೆಯಲ್ಲಿ ಬೆಂಗಳೂರಿನ ನಾರಾಯಣ ಹೃದಾಯಾಲಕ್ಕೆ ತಲುಪಲಿದೆ.

click me!