ಇಡಿ ಅಧಿಕಾರಿಗಳಿಂದ ಡಿಕೆಶಿ ತಾಯಿ ಗೌರಮ್ಮ ವಿಚಾರಣೆ

By Suvarna NewsFirst Published Feb 11, 2020, 2:38 PM IST
Highlights

ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಅವರ ತಾಯಿ ಗೌರಮ್ಮ ಅವರನ್ನು ಇಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಗೌರಮ್ಮ ಅವರ ವಿಚಾರಣೆ ನಡೆದಿದೆ.

ರಾಮನಗರ(ಫೆ.11): ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಅವರ ತಾಯಿ ಗೌರಮ್ಮ ಅವರನ್ನು ಇಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಗೌರಮ್ಮ ಅವರ ವಿಚಾರಣೆ ನಡೆದಿದೆ.

"

ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರ ತಾಯಿ ಗೌರಮ್ಮ ಅವರನ್ನು ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು
ಕನಕಪುರ ತಾಲೂಕಿನ ಕೋಡಿಹಳ್ಳಿಯ ನಿವಾಸದಲ್ಲಿ ಮಂಗಳವಾರ ವಿಚಾರಣೆಗೆ ಒಳಪಡಿಸಿದ್ದಾರೆ.

RSS ನವರಿಗೆ ಊಟ ಹಾಕೋಕೆ ನೀನೇನ್ ಟಾಟಾನಾ? ಬಿರ್ಲಾನಾ? ಡಿಕೆಶಿಗೆ ಅಶೋಕ್ ಟಾಂಗ್

ವಿಚಾರಣೆಗಾಗಿ ದೆಹಲಿಗೆ ಬರುವಂತೆ ಇ.ಡಿ. ಅಧಿಕಾರಿಗಳು ಗೌರಮ್ಮ ಅವರಿಗೆ ನೋಟಿಸ್ ನೀಡಿದ್ದರು. ಇದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದ ಗೌರಮ್ಮ, ವಯಸ್ಸಾದ ಕಾರಣ ವಿಚಾರಣೆಗೆ ವಿನಾಯಿತಿ ನೀಡಬೇಕು ಇಲ್ಲವೇ ತಮ್ಮ ನಿವಾಸದಲ್ಲಿಯೇ ವಿಚಾರಣೆ ನಡೆಸಬೇಕು ಎಂದು ಕೋರಿದ್ದರು.

ಅವರ ಅರ್ಜಿಯನ್ನು ನ್ಯಾಯಾಲಯ ಮಾನ್ಯ ಮಾಡಿದ ಕಾರಣ ಕೋಡಿಹಳ್ಳಿ ನಿವಾಸದಲ್ಲಿ ವಿಚಾರಣೆ ನಿಗದಿಯಾಗಿತ್ತು. ಮೊದಲಿಗೆ ಗೌರಮ್ಮ ಅವರ ಆರೋಗ್ಯ ತಪಾಸಣೆ ನಡೆದಿದೆ. ಡಿ.ಕೆ. ಶಿವಕುಮಾರ್ ಮನೆಯಲ್ಲಿದ್ದು, ವಿಚಾರಣೆ ಸಂಬಂಧ ತಾಯಿಗೆ ಅಗತ್ಯ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ವಿಚಾರಣೆ ಹಿನ್ನೆಲೆಯಲ್ಲಿ ಮನೆ ಸುತ್ತ ಪೊಲೀಸರು ಭದ್ರತೆ ಒದಗಿಸಿದ್ದಾರೆ.

'ಚಡ್ಡಿ ಪ್ಯಾಂಟ್, ಪಂಚೆ ಉಟ್ಕೊಂಡು ಪಥ ಸಂಚಲನ ಮಾಡಲಿ; ನಾವೇನೂ ತಲೆಕೆಡಿಸಿಕೊಳ್ಳಲ್ಲ

click me!