World AIDS Day: ಆರೋಗ್ಯ ಇಲಾ​ಖೆಗೆ ಸವಾ​ಲಾದ ಎಚ್‌​ಐವಿ ಪೀಡಿ​ತ​ರು..!

By Kannadaprabha News  |  First Published Dec 1, 2021, 10:20 AM IST

*  ಅಂಕೋ​ಲಾ​ದಲ್ಲಿ ಕಳೆದ ಒಂದು ವರ್ಷ​ದಿಂದ ಆಸ್ಪತ್ರೆ ಕಡೆಗೆ ಸುಳಿ​ಯದ ರೋಗಿ​ಗ​ಳು
*  ಕೊರೋನಾಕ್ಕೆ ಹೆದರಿ ಆಸ್ಪತ್ರೆಯತ್ತ ಮುಖ ಮಾಡುವುದನ್ನೇ ಮರೆತ ಅನೇಕರು
*  ಗರ್ಭಿಣಿಯರಲ್ಲೂ ಎಚ್‌ಐವಿ
 


ರಾಘುಕಾಕರಮಠ

ಅಂಕೋಲಾ(ಡಿ.01): ಮಹಾಮಾರಿ ಎಎಚ್‌ವಿ/ ಏಡ್ಸ್‌(AIDS) ರೋಗಿಗಳ ಸಂಖ್ಯೆ ಇಳಿಮುಖವಾಗುರುವುದು ಒಳ್ಳೆ​ಯ ಬೆಳ​ವ​ಣಿಗೆ. ಆದರೆ, ಎಚ್‌ಐವಿ ಪೀಡಿತರು(HIV) ಇತ್ತೀ​ಚೆಗೆ ಆಸ್ಪ​ತ್ರೆ ಕಡೆ ಸುಳಿ​ಯ​ದಿ​ರು​ವುದು ಆರೋಗ್ಯ ಇಲಾಖೆಗೆ ಸವಾಲಾಗಿ ಪರಿಗಣಿಸಿದೆ. ಕೊರೋನಾ ಹಿನ್ನೆಲೆಯಲ್ಲಿ ಕಳೆದೊಂದು ವರ್ಷದಿಂದ ರೋಗಿಗಳು(Patients) ಆಸ್ಪತ್ರೆಗೆ ಬಾರದೆ ಮನೆಯಲ್ಲೆ ಚಿಕಿತ್ಸೆ(Treatment) ಪಡೆಯುತ್ತಿರುವುದರಿಂದ ಪ್ರಕ​ರ​ಣ​ಗಳು ಬೆಳಕಿಗೆ ಬಾರದೆ ಇರುವುದು ಆರೋಗ್ಯ ಇಲಾಖೆಯ(Department of Health) ಆತಂಕಕ್ಕೆ ಕಾರಣವಾಗಿದೆ. ಹೌದು, ಅಂಕೋಲಾದಲ್ಲಿ(Ankola) 232 ಎಚ್‌ಐವಿ ಪೀಡಿತರಿದ್ದಾರೆ. ಪ್ರತಿ ವರ್ಷ ಕನಿಷ್ಠ 8ರಿಂದ 10 ಎಚ್‌ಐವಿ ಬಾಧಿತರು ಪತ್ತೆಯಾಗುತ್ತಿದ್ದರು. ಆದರೆ, ಈ ವರ್ಷ ಮಾತ್ರ ಒಂದೇ ಪ್ರಕರಣ ಪತ್ತೆಯಾಗಿರುವುದು ಅಚ್ಚರಿ ಮೂಡಿಸಿ​ದೆ. 2018-19ರಲ್ಲಿ 13 ಎಚ್‌ಐವಿ ಪೀಡಿತರು, 2019-20ರಲ್ಲಿ 8, 2020-21ರಲ್ಲಿ 6 ಮತ್ತು 2021ರಿಂದ ನ. 30ರವರೆಗೆ ಕೇವಲ ಒಂದು ಪ್ರಕರಣ ಪತ್ತೆಯಾಗಿದೆ.

Latest Videos

undefined

ಕೊರೋನಾ ಭೀತಿ:

ಕಳೆದೆರಡು ವರ್ಷದಿಂದ ಕೊರೋನಾ(Coronavirus) ಅಟ್ಟಹಾಸ ಮೆರೆದಿದೆ. ಕೋವಿಡ್‌(Covid19) ಆರಂಭದ ಪೂರ್ವ ಆರೋಗ್ಯದಲ್ಲಿ ಚಿಕ್ಕಪುಟ್ಟ ಸಮಸ್ಯೆಗಳು ಕಂಡುಬಂದರೂ ಆಸ್ಪತ್ರೆಗೆ ಆಗಮಿಸಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಕೊರೋನಾಕ್ಕೆ ಹೆದರಿ ಅನೇಕರು ಆಸ್ಪತ್ರೆಯತ್ತ ಮುಖ ಮಾಡುವುದನ್ನೇ ಮರೆತಿದ್ದಾರೆ. ಚಿಕಿತ್ಸೆಗೆ ಬಂದಾಗ ಕೆಲವರಲ್ಲಿ ಎಚ್‌ಐವಿ ರೋಗ ಲಕ್ಷಣಗಳು ಕಂಡುಬಂದಲ್ಲಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿ, ರೋಗ ಹತೋಟಿಗೆ ತರುವಲ್ಲಿ ಐಸಿಟಿಸಿ ಕೇಂದ್ರದವರು ಯಶಸ್ವಿಯಾಗುತ್ತಿದ್ದರು. ಆದರೆ, ಆಸ್ಪತ್ರೆಗೆ ಬಾರದ ರೋಗಿಗಳು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವುದು ಎಚ್‌ಐವಿ ಪ್ರಕರಣಗಳು ಬೆಳಕಿಗೆ ಬಾರದೆ ನಲಗುವಂತಾಗಿದೆ.

ಯುವ ಸಮೂದಾಯದಲ್ಲಿ ಹೆಚ್ಚು:

ಅಂಕೋಲಾದಲ್ಲಿ ಶೇ. 70ರಷ್ಟು ಪ್ರಕರಣಗಳು ಯುವಕರಲ್ಲಿಯೇ ಪತ್ತೆಯಾಗಿವೆ. 20ರಿಂದ 45 ವರ್ಷದ ಒಳಗಿನ ಯುವಕರಲ್ಲಿ ಎಚ್‌ಐವಿ ಇರುವುದು ಕಂಡುಬಂದಿದೆ. ಎಚ್‌ಐವಿ ಪ್ರಕರಣದಲ್ಲಿ ಶಿರಸಿ(Sirsi)(406) ಜಿಲ್ಲೆಗೆ ಮೊದಲ ಸ್ಥಾನ ಪಡೆದರೆ, ಕಾರವಾರದಲ್ಲಿ(Karwar) (268) ಎರಡನೇ ಹಾಗೂ ಮುಂಡಗೋಡ(Mundgod) (260) ಮೂರನೇ ಸ್ಥಾನದಲ್ಲಿದೆ.

ಮಕ್ಕಳಲ್ಲೂ ಎಚ್‌ಐವಿ:

ತಾಲೂಕಿನಲ್ಲಿ 29 ಮಕ್ಕಳಲ್ಲಿ ಎಚ್‌ಐವಿ ಇರುವುದು ಪತ್ತೆಯಾಗಿದೆ. ಹೆಚ್ಚಾಗಿ ಎಲ್ಲ ಪ್ರಕರಣಗಳು ಪೋಷಕರಲ್ಲಿ ಪ್ರಾರಂಭದಲ್ಲಿ ಕಂಡುಬಂದಿದ್ದು, ಅವರಿಂದ ಮಕ್ಕಳಿಗೆ ಬಂದಿದೆ. ಈ ಮಕ್ಕಳಿಗೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ವಿಶೇಷ ಪ್ರೋತ್ಸಾಹ ನಿಧಿಯಿಂದ ಪ್ರತಿ ತಿಂಗಳು . 1 ಸಾವಿರ ಸಂದಾಯ ಮಾಡಲಾಗುತ್ತಿದೆ.

ಗರ್ಭಿಣಿಯರಲ್ಲೂ ಎಚ್‌ಐವಿ:

ಜಿಲ್ಲೆಯಲ್ಲಿ ಗರ್ಭಿಣಿಯರಲ್ಲೂ(Pregnent) ಎಚ್‌ಐವಿ ಇರುವುದು ಕಂಡುಬಂದಿದೆ. ತಾಯಿಯೊಂದಿಗೂ ಮಗುವಿಗೂ ಎಚ್‌ಐವಿ ಬರುವ ಸಾಧ್ಯತೆ ಹೆಚ್ಚಿರುವುದರಿಂದ ಮಹಿಳೆಯರ ಹೊಟ್ಟೆಯಲ್ಲಿರುವ ಶಿಶುಗಳಿಗೆ ರೋಗ ತಗುಲದಂತೆ ಚಿಕಿತ್ಸೆ ನೀಡುವ ಕೆಲಸವನ್ನು ವೈದ್ಯರು ಮಾಡುತ್ತಿದ್ದಾರೆ.

ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಕೂಡಲೇ ಆಸ್ಪತ್ರೆಗೆ ಆಗಮಿಸಿ ಚಿಕಿತ್ಸೆ ಪಡೆಯುವಂತಾಗಬೇಕು. ಮನೆಯಲ್ಲೇ ಉಳಿದು ಔಷಧಿ ಪಡೆಯುವ ಕ್ರಮ ಸರಿಯಲ್ಲ. ಎಚ್‌ಐವಿಗೆ ಸೂಕ್ತ ಚಿಕಿತ್ಸೆ ಲಭ್ಯವಿದೆ. ರೋಗವನ್ನು ಪ್ರಾರಂಭಿಕ ಹಂತದಲ್ಲೆ ಪತ್ತೆ ಹಚ್ಚಿದರೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಈ ಬಗ್ಗೆ ನಿರ್ಲಕ್ಷ್ಯ ಸಲ್ಲದು. ಎಚ್‌ಐವಿ/ಏಡ್ಸ್‌ ನಿಯಂತ್ರಣಕ್ಕೆ ಮುನ್ನೆಚ್ಚರಿಕೆಯ ಕ್ರಮವೇ ಮದ್ದು ಅಂತ ಅಂಕೋಲಾ ಐಸಿಟಿಸಿ ಸರ್ಕಾರಿ ಆಸ್ಪತ್ರೆಯ ಆಪ್ತ ಸಮಾಲೋಚಕಿ ರಾಜಶ್ರೀ ಕಿಲೋಸ್ಕರ ತಿಳಿಸಿದ್ದಾರೆ.  

ಜಿಲ್ಲೆಯಲ್ಲಿ ಪತ್ತೆಯಾದ ಎಚ್‌ಐವಿ ಪೀಡಿತರ ಪ್ರಮಾಣ

ವರ್ಷ ಸಾಮಾ​ನ್ಯ ಗರ್ಭಿ​ಣಿ​ಯ​ರು

2014-15 264 21
2015-16 212 15
2016-17 168 10
2017-18 171 10
2018-19 157 10
2019-20 143 10
2020-21 75 08
2021-22 ಅಕ್ಟೋಬರ್‌ ವರೆಗೆ 53 4

ಜಿಲ್ಲೆಯಲ್ಲಿರುವಎಚ್‌ಐವಿ ಪೀಡಿತರ ಸಂಖ್ಯೆ:

ಅ.ನಂ ತಾಲೂಕು ಎಚ್‌ಐವಿ ಸೋಂಕಿತರ ಸಂಖ್ಯೆ

1 ಕಾರವಾರ- 268
2 ಅಂಕೊಲಾ- 232
3 ಕುಮಟಾ- 203
4 ಹೊನ್ನಾವರ - 188
5 ಯಲ್ಲಾಪುರ- 158
6 ಹಳಿಯಾಳ- 161
7 ಜೋಯಿಡಾ- 77
8 ಶಿರಸಿ- 406
9 ಸಿದ್ದಾಪುರ- 155
10 ಭಟ್ಕಳ- 147
11 ಮುಂಡಗೋಡ- 260
12 ಇತರೆ ಜಿಲ್ಲೆ- 48
ಒಟ್ಟು 2303
 

click me!