ಕಲಬುರಗಿ: ಕಾರು ಪಲ್ಟಿ, ಹೆಡ್‌ ಕಾನ್ಸಟೇಬಲ್‌ ಸಾವು

Published : Aug 08, 2023, 11:30 PM IST
ಕಲಬುರಗಿ: ಕಾರು ಪಲ್ಟಿ, ಹೆಡ್‌ ಕಾನ್ಸಟೇಬಲ್‌ ಸಾವು

ಸಾರಾಂಶ

ಕಲಬುರಗಿಯಿಂದ ಕಾರಿನಲ್ಲಿ ಸೇಡಂಗೆ ಹೋಗುತ್ತಿದ್ದಾಗ ಮಳಖೇಡ ಹತ್ತಿರ ಕಾರಿನ ಟೈರ್‌ ಬ್ಲಾಸ್ವ್‌ ಆಗಿ ಪಲ್ಟಿಯಾದ ಕಾರು, ಈ ಸಂಬಂಧ ಮಳಖೇಡ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು. 

ಕಲಬುರಗಿ(ಆ.08):  ಕಾರಿನ ಟೈರ್‌ ಬ್ಲಾಸ್ವ್‌ ಆಗಿ ಕಾರು ಪಲ್ಟಿಯಾಗಿ ಹೆಡ್ಕಾನ್ಸಟೇಬಲ್‌ ಒಬ್ಬರು ಸ್ಥಳದಲ್ಲಿಯೇ ಮೃತಪಟ್ಟು, ಇನ್ನಿಬ್ಬರು ಗಾಯಗೊಂಡಿರುವ ಘಟನೆ ಸೇಡಂ ತಾಲ್ಲೂಕಿನ ಮಳಖೇಡ ಪೆಟ್ರೋಲ್‌ ಬಂಕ್‌ ಹತ್ತಿರ ನಿನ್ನೆ(ಸೋಮವಾರ) ನಡೆದಿದೆ. 

ಮೃತರನ್ನು ನಗರದ ಅಶೋಕ ನಗರ ಪೊಲೀಸ್‌ ಠಾಣೆಯಲ್ಲಿ ಹೆಡ್ಕಾನ್ಸಟೇಬಲ್‌ ಆಗಿ ಸೇವೆ ಸಲ್ಲಿಸುತ್ತಿದ್ದ ಮೋಮಿನಪುರದ ಮೋಯಿಜುದ್ದೀನ್‌ (52) ಎಂದು ಗುರುತಿಸಲಾಗಿದ್ದು, ಅವರ ಸಹೋದರ ನಜುಮೋದ್ದಿನ್‌ ಮತ್ತು ಇನ್ನೊಬ್ಬರು ಗಾಯಗೊಂಡಿದ್ದಾರೆ. ಅವರನ್ನು ಕಲಬುರಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಭೀಕರ ಅಪಘಾತ; ಕಾಂಗ್ರೆಸ್ ಮುಖಂಡ ಅನೂಪ್ ಅಯ್ಯರ್ ಮನೆ ಕೆಲಸ ಮಾಡುತ್ತಿದ್ದ ವ್ಯಕ್ತಿ ಸಾವು

ಇವರು ಕಲಬುರಗಿಯಿಂದ ಕಾರಿನಲ್ಲಿ ಸೇಡಂಗೆ ಹೋಗುತ್ತಿದ್ದಾಗ ಮಳಖೇಡ ಹತ್ತಿರ ಕಾರಿನ ಟೈರ್‌ ಬ್ಲಾಸ್ವ್‌ ಆಗಿ ಕಾರು ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ. ಮಳಖೇಡ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Read more Articles on
click me!

Recommended Stories

ಬೆಂಗಳೂರು ಕಬ್ಬನ್‌ಪಾರ್ಕ್‌ ಪುಷ್ಪ ಪ್ರದರ್ಶನಕ್ಕೆ ಇಂದು ತೆರೆ
ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ