ಅಂಜುಮನ್‌ ಅರ್ಜಿ ವಜಾ: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಉತ್ಸವಕ್ಕೆ ಸಮ್ಮತಿ

By Kannadaprabha News  |  First Published Sep 16, 2023, 9:29 AM IST

ಮಹಾನಗರ ಪಾಲಿಕೆ ಕೂಡ ಆ. 31ರಂದು ನಡೆದಿದ್ದ ಸಾಮಾನ್ಯ ಸಭೆಯಲ್ಲಿ ಅನುಮತಿ ನೀಡಲು ಚರ್ಚಿಸಿ ಠರಾವು ಪಾಸು ಮಾಡಿತ್ತು. ಈ ನಡುವೆ, ಪಾಲಿಕೆಯ ನಿರ್ಣಯ ಪ್ರಶ್ನಿಸಿ ಅಂಜುಮನ್‌ ಎ- ಇಸ್ಲಾಂ ಸಂಸ್ಥೆ ಹೈಕೋರ್ಟ್‌ ಮೊರೆ ಹೋಗಿತ್ತು. ಆದರೆ, ಹೈಕೋರ್ಟ್‌‌ನಲ್ಲಿ ಅಂಜುಮನ್‌ ಸಂಸ್ಥೆಯ ಅರ್ಜಿ ವಜಾಗೊಂಡಿತ್ತು. 


ಹುಬ್ಬಳ್ಳಿ(ಸೆ.16):  ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಪ್ರತಿಭಟನೆಗೆ ಮಣಿದ ಮಹಾನಗರಪಾಲಿಕೆ ಕೊನೆಗೂ ಇಲ್ಲಿನ ಈದ್ಗಾ ಮೈದಾನ (ರಾಣಿ ಚೆನ್ನಮ್ಮ ಮೈದಾನ)ದಲ್ಲಿ ಗಣೇಶನ ಪ್ರತಿಷ್ಠಾಪನೆಗೆ ಅನುಮತಿ ನೀಡಿದೆ. 

ಸೆ.19ರಿಂದ 3 ದಿನಗಳ ಕಾಲ ಗಣೇಶೋತ್ಸವ ಆಚರಿಸುವುದಕ್ಕೆ 18 ಷರತ್ತುಗಳನ್ನು ವಿಧಿಸಿ ಅನುಮತಿಯನ್ನು ಶುಕ್ರವಾರ ರಾತ್ರಿ ನೀಡಿದೆ. ಈದ್ಗಾ ಮೈದಾನದಲ್ಲಿ ಗಣೇಶನ ಪ್ರತಿಷ್ಠಾಪನೆಗೆ ಅವಕಾಶ ನೀಡುವಂತೆ ಗುರುವಾರ ಬೆಳಗ್ಗೆಯಿಂದಲೇ ಬಿಜೆಪಿ ಶಾಸಕ ಅರವಿಂದ ಬೆಲ್ಲದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿತ್ತು. 

Tap to resize

Latest Videos

ಹುಬ್ಬಳ್ಳಿ ಈದ್ಗಾದಲ್ಲಿ ಗಣೇಶೋತ್ಸವ: ಅವಕಾಶ ನೀಡದಂತೆ ಹೈಕೋರ್ಟ್‌ ಮೊರೆ ಹೋದ ಅಂಜುಮನ್‌

ಮಹಾನಗರ ಪಾಲಿಕೆ ಕೂಡ ಆ. 31ರಂದು ನಡೆದಿದ್ದ ಸಾಮಾನ್ಯ ಸಭೆಯಲ್ಲಿ ಅನುಮತಿ ನೀಡಲು ಚರ್ಚಿಸಿ ಠರಾವು ಪಾಸು ಮಾಡಿತ್ತು. ಈ ನಡುವೆ, ಪಾಲಿಕೆಯ ನಿರ್ಣಯ ಪ್ರಶ್ನಿಸಿ ಅಂಜುಮನ್‌ ಎ- ಇಸ್ಲಾಂ ಸಂಸ್ಥೆ ಹೈಕೋರ್ಟ್‌ ಮೊರೆ ಹೋಗಿತ್ತು. ಆದರೆ, ಹೈಕೋರ್ಟ್‌‌ನಲ್ಲಿ ಅಂಜುಮನ್‌ ಸಂಸ್ಥೆಯ ಅರ್ಜಿ ವಜಾಗೊಂಡಿತ್ತು. ಈ ಮಧ್ಯೆ, ಶುಕ್ರವಾರ ರಾತ್ರಿ ಹುಬ್ಬಳ್ಳಿ ಕಚೇರಿಗೆ ಆಗಮಿಸಿದ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ, 3 ದಿನಗಳ ಅನುಮತಿ ನೀಡಿದ ಪತ್ರವನ್ನು ನೀಡಿದರು.

click me!